ಅರಳಿದ ಗುಲಾಬಿಯಲಿ ಅಡಗಿದೆ ನಿನ್ನೊಲವಿನ ಮಧುರ ಕಂಪನ,
ಜೊತೆಯಾಗಿ ಕುಳಿತು ಈ ಹಕ್ಕಿಗಳಲ್ಲಿ ಕಂಡೆ ನಾ ಪ್ರೇಮದ ಸುಂದರ ತರ್ಪಣ.
ಹೃದಯದ ಬಡಿತಕ್ಕೆ ಇಂದು ಹೊಸದೊಂದು ಲಯವು ದೊರೆತಿದೆ,
ನಿನ್ನ ನೆನಪಿನ ಅಲೆಗಳಲ್ಲಿ ನನ್ನ ಮನವು ಇಂದು ಹಾಯಾಗಿ ತೇಲಿದೆ ll೦೧ll
ಬಿಳಿ ಹಾಳೆಯ ಮೇಲೆ ಮೂಡಿದ ಈ ಕಲೆಯು ಬರೀ ಚಿತ್ರವಲ್ಲ,
ನನ್ನದೂ ನಿನ್ನದೂ ಬೆಸೆದ ಜೀವದ ಬಣ್ಣಿಸಲಾಗದ ಅನುಬಂಧವಲ್ಲ?
ಕಣ್ಣಂಚಿನ ಮಿಂಚಲಿ ಮೂಡುವ ನೂರು ಕನಸಿನ ಮಾತುಗಳು,
ರೆಕ್ಕೆ ಬಿಚ್ಚಿ ಹಾರಾಡುವ ಹಕ್ಕಿಯಂತೆ ನಮ್ಮ ಈ ಪ್ರೀತಿಯ ಹಿತಗಳು ll೦೨ll
ಸದಾ ಕಾಲ ಹೀಗೆಯೆ ಇರಲಿ ನಮ್ಮ ಈ ಮಮತೆಯ ಬಾಂಧವ್ಯ,
ನಿನ್ನ ಸಾಂಗತ್ಯವೇ ನನ್ನ ಪಾಲಿಗೆ ಜೀವನದ ಬಹುದೊಡ್ಡ ಸೌಭಾಗ್ಯ.
ಈ ಪ್ರೇಮದ ದಿನದಂದು ನಿನಗೆ ಹಾರೈಸುವೆ ನೂರಾರು ಶುಭಗಳು,
ನಮ್ಮ ಒಲವಿನ ಪಯಣಕ್ಕೆ ಜೊತೆಯಾಗಲಿ ಆ ದೇವರ ಹರಕೆಗಳು ll೦೩ll
ಶರಣೆ : ಕುಮಾರಿ ರೂಪಾ ಬಿ. ನಾಟೀಕಾರ ಮುದ್ದೇಬಿಹಾಳ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

