ಸುರತ್ಕಲ್: ಹಿಂದು ವಿದ್ಯಾದಾಯಿನೀ ಸಂಘ (ರಿ.), ಸುರತ್ಕಲ್ ಇದರ ಆಡಳಿತಕ್ಕೊಳಪಟ್ಟ ಗೋವಿಂದದಾಸ ಕಾಲೇಜು, ಸುರತ್ಕಲ್ ವತಿಯಿಂದ ನ್ಯಾಯಮೂರ್ತಿ ಸುರೇಶ್ ಹೊಸಬೆಟ್ಟು ದತ್ತಿ ಉಪನ್ಯಾಸದಡಿ ದಿನಾಂಕ 20, ಫೆಬ್ರವರಿ 2026ರಂದು “ಮಾನವ ಹಕ್ಕುಗಳು ಮತ್ತು ಜೆನ್Z: ಸವಾಲುಗಳು ಮತ್ತು ಅವಕಾಶಗಳು” ಎಂಬ ವಿಷಯದ ಮೇಲೆ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.
ವಿವಿಧ ಅಕಾಡೆಮಿಕ್ ಕೋರ್ಸುಗಳ ಜನರೇಶನ್ Z ವಿದ್ಯಾರ್ಥಿಗಳಿಗಾಗಿ ಮಾತ್ರ ಸಂಘಟಿಸಲಾದ ಈ ವಿಚಾರ ಸಂಕಿರಣ ಡಿಜಿಟಲ್ ಯುಗದಲ್ಲಿ ಮಾನವ ಹಕ್ಕುಗಳ ಚರ್ಚೆ, ಉದಯೋನ್ಮುಖ ಸವಾಲುಗಳು ಮತ್ತು ಜನರೇಶನ್Z- ಭವಿಷ್ಯದ ಸಾಧ್ಯತೆಗಳ ಕುರಿತುಯುವ ಮನಸ್ಸುಗಳಿಗೆ ಚಿಂತನೆ ಹಾಗೂ ಚರ್ಚೆ ನಡೆಸಲು ವೇದಿಕೆ ಒದಗಿಸುವ ಉದ್ದೇಶ ಹೊಂದಿದೆ.
ಕಾರ್ಯಕ್ರಮದ ಉದ್ಘಾಟನೆ ಹಾಗೂ ಮುಖ್ಯ ಭಾಷಣವನ್ನು ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶರಾದ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ, ಭಾರತದ ಮಾಜಿ ಸಾಲಿಸಿಟರ್ ಜನರಲ್ ಹಾಗೂ ಕರ್ನಾಟಕ ರಾಜ್ಯದ ಮಾಜಿ ಲೋಕಾಯುಕ್ತರು ನೇರವೇರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಶ್ರೀಮತಿ ಸರೋಜ್ ಮಾಯಾದೇವ್, ಮಾರ್ಕೆಟ್ ಮತ್ತು ಬ್ರ್ಯಾಂಡಿಂಗ್ ತಜ್ಞೆ ಹಾಗೂ ಮುಂಬೈ ಮೂಲದ ಮಾಜಿ ಪತ್ರಕರ್ತೆ “ಡಿಜಿಟಲ್ ಯುಗದಲ್ಲಿಅಭಿವ್ಯಕ್ತಿ ಸ್ವಾತಂತ್ರ್ಯ: ಜೆನ್-Z ಅವಕಾಶಗಳು ಮತ್ತು ಮಿತಿಗಳು” ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.
ಡಾ. ಅನಿತಾ ರವಿಶಂಕರ್, ಮಂಗಳೂರು ವಿಶ್ವವಿದ್ಯಾನಿಲಯದ ಯುಜಿಸಿ ಮಹಿಳಾ ಅಧ್ಯಯನ ಕೇಂದ್ರದ ಮಾಜಿ ನಿರ್ದೇಶಕರು, “ಜೆನ್-Z ಮತ್ತು ಮಾನವ ಹಕ್ಕುಗಳು: ಸಮಾಜಶಾಸ್ತ್ರೀಯ ದೃಷ್ಟಿಕೋನದಲ್ಲಿ ಅಸ್ಮಿತೆಗಳ ಪ್ರಶ್ನೆ” ವಿಷಯದ ಮೇಲೆ ಮಾತನಾಡಲಿದ್ದಾರೆ.
ಮೂರನೇ ಅಧಿವೇಶನದಲ್ಲಿ ವಿದ್ಯಾರ್ಥಿಗಳಿಂದ ಡಿಜಿಟಲ್ ವಲಯ ಮತ್ತು ಸೈಬರ್ ಮತ್ತು ಅಪರಾಧ, ಸೈಬರ್‍ಜಗತ್ತಿನಲ್ಲಿ ಮಕ್ಕಳ ಹಕ್ಕುಗಳು, ಯುಜನತೆ ಮತ್ತು ಪರಿಸರ ಹಕ್ಕುಗಳು, ವೈದ್ಯಕೀಯ ನಿರ್ಲಕ್ಷ್ಯ ಮತ್ತು ರೋಗಿಗಳ ಹಕ್ಕುಗಳು ಸೇರಿದಂತೆ ಸಮಕಾಲೀನ ವಿಷಯಗಳ ಕುರಿತು ಪ್ರಬಂಧ ಮಂಡನೆ ನಡೆಯಲಿದೆ. ಜೊತೆಗೆ ನ್ಯಾಯಮೂರ್ತಿ ಸುರೇಶ್ ಹೊಸಬೆಟ್ಟುಅವರ “My Voice Is My Conscience” ಪುಸ್ತಕದ ವಿಮರ್ಶೆಯೂ ನಡೆಯಲಿದೆ.
ಸಮಾರೋಪ ಭಾಷಣವನ್ನು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಪ್ರೊ.ಕೆ.ಆರ್. ಕವಿತಾ ಅವರು ನೆರವೇರಿಸಲಿದ್ದು ಜಸ್ಟಿಸ್ ಸುರೇಶ್ ಹೊಸಬೆಟ್ಟು ದತ್ತಿನಿಧಿ ಪ್ರಾಯೋಜಕತ್ವದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣೆ ನಡೆಯಲಿದೆ.
ಈ ವಿಚಾರ ಸಂಕಿರಣವನ್ನುಗೋವಿಂದದಾಸ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ (IQAC), ರಾಜ್ಯಶಾಸ್ತ್ರ ವಿಭಾಗ, ಮಾನವ ಹಕ್ಕುಗಳ ವೇದಿಕೆ, ಗ್ರಾಹಕ ವೇದಿಕೆ ಹಾಗೂ ಮಹಿಳಾ ವೇದಿಕೆ ಇವರ ಸಹಭಾಗಿತ್ವದಲ್ಲಿಆಯೋಜಿಸಲಾಗಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


