ಲಕ್ಷ್ಮಣ ಮರಕಡ ಅವರಿಗೆ "ಯಕ್ಷ ಸವ್ಯಸಾಚಿ" ಬಿರುದು ಪ್ರದಾನ

Upayuktha
0


ಕದ್ರಿ, ಮಂಗಳೂರು: ಶ್ರೀ ಕಟೀಲು ಮೇಳದ ಕಲಾವಿದ, ಯಕ್ಷ ಗುರು ಲಕ್ಷ್ಮಣ ಕುಮಾರ್ ಮರಕಡ ಅವರಿಗೆ ಕದ್ರಿ ದೇವಸ್ಥಾನದ ರಾಜಾಂಗಣದಲ್ಲಿ ಶ್ರೀ ಭಗವದ್ಗೀತಾಮೃತ ಪುರಸ್ಕಾರದೊಂದಿಗೆ "ಯಕ್ಷ ಸವ್ಯ ಸಾಚಿ" ಬಿರುದು ನೀಡಿ ಗೌರವಿಸಲಾಯಿತು. ಶ್ರೀ ಮದ್ ಭಗವದ್ಗೀತೆಯ ಪ್ರಚಾರಕ, ಆಧ್ಯಾತ್ಮಿಕ ಗುರು ಸುಬ್ರಾಯ  ನಂದೋಡಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.


"ಲಕ್ಷ್ಮಣ ಅವರು ಶಿವರಾಮ ಪಣಂಬೂರು ಇವರ ಗುರುತ್ವದಲ್ಲಿ "ಫಲ್ಗುಣಿ ಯಕ್ಷರಂಗ ಮರಕಡ"ದಲ್ಲಿ ರಂಗಪ್ರವೇಶಗೈದು ಗಣೇಶಪುರ, ಸುರತ್ಕಲ್ ಸದಾಶಿವ ಮಹಾಗಣಪತಿ, ತಲಕಳ, ಬಪ್ಪನಾಡು, ಉಳ್ಳಾಲ ಚೀರುಂಭ ಭಗವತೀ, ಸಸಿಹಿತ್ಲು ಭಗವತಿ, ಎಡನೀರು ಮೇಳಗಳಲ್ಲಿ ತಿರುಗಾಟ ಮಾಡಿ ಕಟೀಲು ಮೇಳದಲ್ಲಿ ಈಗ 7ನೇ ವರ್ಷದ ತಿರುಗಾಟ ಮಾಡುತ್ತಿರುವ ನಿಷ್ಠಾವಂತ ಕಲಾಸಾಧಕ. ಮರಕಡದಲ್ಲಿ ಶುಭವರ್ಣ ಯಕ್ಷ ಸಂಪದ (ರಿ.) ಎಂಬ ಸಂಸ್ಥೆಯನ್ನು ಸ್ಥಾಪಿಸಿ ಪ್ರಶಸ್ತಿ, ಸಂಮಾನ, ಗೌರವಾರ್ಪಣೆ, ಪ್ರತಿಭಾ ಪುರಸ್ಕಾರ, ಯಕ್ಷಗಾನ ತರಬೇತಿ ನೀಡುತ್ತಿರುವ ಯಕ್ಷಗಾನ ಸಂಘಟಕರೂ ಆಗಿದ್ದಾರೆ.

ಕಾಸರಗೋಡು ಮತ್ತು ಮಂಗಳೂರು ಪರಿಸರದಲ್ಲಿ ಯಕ್ಷಗಾನ ಶಿಕ್ಷಕನಾಗಿ ತರಗತಿ ನಡೆಸಿ ಸಮೃದ್ಧ ಶಿಷ್ಯ ಗಡಣ ಹೊಂದಿರುವ ಯಕ್ಷ ಗುರು. ಆಮೇರಿಕಾ, ಮಸ್ಕತ್, ಆಸ್ಟ್ರೇಲಿಯಾ, ದುಬೈದೇಶಗಳಲ್ಲಿ ಪುಂಡು, ಸ್ತ್ರೀ, ರಾಜವೇಷ, ಹಾಸ್ಯ, ಎದುರು ವೇಷಗಳೆಲ್ಲವನ್ನೂ ಸಮರ್ಥವಾಗಿ ನಿರ್ವಹಿಸುತ್ತಿರುವ  ಅಪೂರ್ವ ಯಕ್ಷ ಕಲಾ ಸಾಧಕ." ಎಂದು ಕದ್ರಿ ನವನೀತ ಶೆಟ್ಟಿ ಅಭಿನಂದಿಸಿದರು.


ಕತಾರ್ ನಲ್ಲಿ ಉದ್ಯೋಗಿಗಳಾಗಿರುವ ಕೊರಗಪ್ಪ ಸಸಿಹಿತ್ಲು ಮತ್ತು ಸವಿತಾ ಸಸಿಹಿತ್ಲು ಪರಿವಾರದ ಶ್ರೀ ಕಟೀಲು ಮೇಳದ ಸೇವೆ ಬಯಲಾಟದ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಕ್ಷಗಾನ ಅಕಾಡೆಮಿ ಸದಸ್ಯ ಮೋಹನ್ ಕೊಪ್ಪಳ ಕದ್ರಿ, ಡಾ. ಶಶಾಂಕ್, ಡಾ. ಪ್ರತೀಕ್, ಸುಧಾಕರ ರಾವ್ ಪೇಜಾವರ, ಶಿವ ಪ್ರಸಾದ್ ಪ್ರಭು, ಸಿ.ಎಸ್. ಭಂಡಾರಿ, ಪ್ರದೀಪ್ ಆಳ್ವ ಕದ್ರಿ ಉಪಸ್ಥಿತರಿದ್ದರು. ಎಲ್ಲೂರು ರಾಮಚಂದ್ರ ಭಟ್ ನಿರೂಪಿಸಿದರು.


ಮೇಳದ ಎಲ್ಲಾ ಕಲಾವಿದರಿಗೆ ಸೇವಾಕರ್ತರಾದ ಗೀತಾ ಪ್ರಚಾರಕಿ ಸವಿತಾ ಕೊರಗಪ್ಪ ಅವರು ಅರ್ಥ ಸಹಿತ ಭಗವದ್ಗೀತೆಯನ್ನು ವಿತರಿಸಿದರು. ಕಟೀಲು ಮೇಳದವರಿಂದ "ಶ್ರೀ ದೇವೀ ಮಹಾತ್ಮೆ" ಸೇವೆ ಬಯಲಾಟ ಜರಗಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top