ಹಾಸನ: ಪ್ರಧಾನ ಶಾಲೆಯ ಸೇವಾದಳ ವಿದ್ಯಾರ್ಥಿಗಳಿಗೆ ಪದಕ ವಿತರಣೆ

Upayuktha
0


ಹಾಸನ: ವಿದ್ಯಾರ್ಥಿ ಜೀವನ ಚಿನ್ನದಂತಹ ಜೀವನವಾಗಬೇಕಾದರೆ ವಿದ್ಯಾರ್ಥಿಗಳು ಸರ್ವತೋಮುಖ ಬೆಳವಣಿಗೆಗೆ ಆದ್ಯತೆ ನೀಡಬೇಕು. ಶಿಸ್ತುಬದ್ಧ ಜೀವನವನ್ನು ರೂಪಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಪಠ್ಯ ಮತ್ತು ಸಹಪಠ್ಯ ಚಟುವಟಿಕೆಗಳೆರಡರಲ್ಲೂ ಸಕ್ರಿಯವಾಗಿ ಭಾಗವಹಿಸುವ ಮೂಲಕ ಯಶಸ್ಸನ್ನು ಗಳಿಸಬೇಕು ಎಂದು ಉಪಪ್ರಾಂಶುಪಾಲರಾದ ಮಂಜುನಾಥ್ ಹೇಳಿದರು. 


ನಗರದ ಆರ್.ಸಿ. ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರಧಾನ) ಪ್ರೌಢಶಾಲಾ ಇಲ್ಲಿ ಬೆಳಗಿನ ಪ್ರಾರ್ಥನಾ ಅವಧಿಯ ಸಚೇತನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 77ನೇ ಗಣರಾಜ್ಯೋತ್ಸವದಲ್ಲಿ ಪ್ರಧಾನ ಶಾಲೆಯ ವಿದ್ಯಾರ್ಥಿನಿಯರು ಸೇವಾದಳ ಘಟಕದಿಂದ ಪಥಸಂಚಲನದಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ. ಇದಕ್ಕಾಗಿ ಶ್ರಮಿಸಿದ ಮಾರ್ಗದರ್ಶಕರಾದ ರಾಜೇಂದ್ರರವರಿಗೆ, ಸೇವಾದಳದ ವಲಯ ಸಂಘಟಕರಾದ ರಾಣಿ. ವಿ.ಎಸ್. ರವರಿಗೆ ಶಾಲೆಯ ಶಿಕ್ಷಕರಿಗೂ ಮತ್ತು ವಿದ್ಯಾರ್ಥಿಗಳಿಗೂ ಅಭಿನಂದನೆಗಳನ್ನು ತಿಳಿಸುತ್ತಾ ಸೇವಾದಳ ವಿದ್ಯಾರ್ಥಿನಿಯರಿಗೆ ಪದಕಗಳನ್ನು ವಿತರಿಸಿದರು.


ಶಾಲೆಯ ಸಹಶಿಕ್ಷಕರಾದ ಕೆ.ಎನ್. ಚಿದಾನಂದ ರವರು ಎಲ್ಲರನ್ನು ಉದ್ದೇಶಿಸಿ ಮಾತನಾಡುತ್ತಾ ಭಾರತ ಸೇವಾದಳದವು ದೇಶಪ್ರೇಮವನ್ನು ಬೆಳೆಸುವ ನಿಟ್ಟಿನಲ್ಲಿ ಸ್ಥಾಪನೆಯಾಗಿದ್ದು, ಸೇವೆಯನ್ನೇ ಶ್ರೇಷ್ಠ ಧರ್ಮವೆಂದು ಪರಿಗಣಿಸಿದೆ. ಸೇವಾದಳದ ಸ್ಥಾಪಕರಾದ ನಾ.ಸು. ಹರ್ಡೇಕರ್ ರವರ ನೇತೃತ್ವದಲ್ಲಿ ನಡೆದ ಹಲವು ಚಟುವಟಿಕೆಗಳನ್ನು ಸ್ಮರಿಸಿದರು. ಶಿಸ್ತುಬದ್ಧ ಜೀವನಕ್ಕೆ ಸೇವಾದಳದಲ್ಲಿ ಭಾಗವಹಿಸುವುದು ಅಗತ್ಯವಾಗಿದೆ ಅಲ್ಲದೇ ಇಪ್ಪತ್ತೊಂದನೇ ಶತಮಾನದಲ್ಲಿ ಸುಂದರ ಶಾಂತಿಯುತ ಬದುಕಿಗಾಗಿ, ಸಹಬಾಳ್ವೆ, ಸಾಂಘಿಕ ಬದುಕಿಗಾಗಿ ಸೇವಾದಳದ ಅಗತ್ಯವಿದೆ ಎಂದು ಹೇಳಿದರು. 


ಹಾಸನ ಜಿಲ್ಲೆಯ ವಲಯ ಸಂಘಟಕರಾದ ರಾಣಿ ವಿ.ಎಸ್ ರವರು ಮಾತನಾಡಿ ಪ್ರಧಾನ ಶಾಲೆಯು ಹಿಂದಿನಿಂದ ಈಗಿನವರೆಗೂ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ರಂಗದಲ್ಲಿ ಉತ್ತಮ ಸಾಧನಗಳನ್ನು ಮಾಡುತ್ತ ಬಂದಿದೆ. ಉಪ ಪ್ರಾಂಶುಪಾಲರು ಮತ್ತು ಎಲ್ಲಾ ಶಿಕ್ಷಕರ ಸಹಕಾರ ಉತ್ತಮವಾಗಿರುವುದರಿಂದ ಈ ಬಾರಿ ಪದಸಂಚಲನದಲ್ಲಿ ದ್ವಿತೀಯ ಸ್ಥಾನ ಪಡೆಯಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ಪ್ರಥಮ ಸ್ಥಾನ ಪಡೆಯಲಿ ಎಂದು ಆಶಿಸಿದರು. 


ಸೇವಾದಳದ ವಿದ್ಯಾರ್ಥಿಗಳಿಗೆ ಪಥಸಂಚಲನದ ಮಾರ್ಗದರ್ಶಕರಾದ ಪೊಲೀಸ್ ಅಧಿಕಾರಿ ರಾಜೇಂದ್ರರವರು ವಿದ್ಯಾರ್ಥಿಗಳಿಗೆ ಪದಕಗಳನ್ನು ನೆನಪಿನ ಕಾಣಿಕೆಯಾಗಿ ನೀಡಿ ಮಾತನಾಡಿರು. ಸೇವಾದಳ ಘಟಕದ ವಿದ್ಯಾರ್ಥಿ ನಾಯಕರಾದ ಕು ವರ್ಷ ಹಾಗೂ ಕು. ಮಾನ್ವಿತ ರವರನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳಾದ ನಂಜಪ್ಪ, ಸಂತೋಷ್, ಶಾಲೆಯ ಶಿಕ್ಷಕರಾದ ಹೆಚ್.ಪಿ.ಮಂಜುಳ, ಎ.ವಿ. ಗೀತಾರಾಣಿ, ಎಂ.ಆರ್. ರಂಗಾಮಣಿ, ರುದ್ರೇಶ್, ಎಸ್.ಕೆ. ಪೂರ್ಣಿಮಾ, ಪಿ. ಮಧು, ತೈಬಾ ಕೌಸರ್, ಚಿದಾನಂದ, ಸಂಗೀತ ಶಿಕ್ಷಕರಾದ ಬಿ.ಎನ್. ಎಸ್. ಮುರಳಿ ಹಾಗೂ ಎಲ್ಲಾ ವಿದ್ಯಾರ್ಥಿಗಳು ಹಾಜರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top