ಸುರತ್ಕಲ್: ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವು ವಿದ್ಯಾರ್ಥಿಗಳಿಗೆ ಸಾಮರಸ್ಯ ಸಹಬಾಳ್ವೆಯ ಅರಿವನ್ನು ಮೂಡಿಸುತ್ತದೆ. ವಿದ್ಯಾರ್ಥಿಗಳಿಗೆ ಜೀವನದ ಮೌಲ್ಯಗಳನ್ನು ಅರ್ಥೈಸಿಕೊಳ್ಳುವ, ಶ್ರಮದ ಸತ್ವವನ್ನುಅರಿಯುವ ಬಹುದೊಡ್ಡ ಅವಕಾಶ ಈ ವಿಶೇಷ ಶಿಬಿರದ ಮೂಲಕ ಲಭ್ಯವಾಗುತ್ತದೆ ಎಂದು ಹಿಂದು ವಿದ್ಯಾದಾಯಿನೀ ಸಂಘ (ರಿ.), ಸುರತ್ಕಲ್‍ನ ಅಧ್ಯಕ್ಷ ಜಯಚಂದ್ರ ಹತ್ವಾರ್ ಎಸ್. ನುಡಿದರು. ಅವರು ಶ್ರೀ ನಾರಾಯಣ ಸನಿಲ್ ಪದವಿಪೂರ್ವಕಾಲೇಜು -ಪ್ರೌಢಶಾಲಾ ವಿಭಾಗ, ಹಳೆಯಂಗಡಿಯಲ್ಲಿ ನಡೆಯುತ್ತಿರುವ ಹಿಂದು ವಿದ್ಯಾದಾಯಿನೀ ಸಂಘದ ಆಡಳಿತಕ್ಕೊಳಪಟ್ಟ ಗೋವಿಂದದಾಸಕಾಲೇಜು, ಸುರತ್ಕಲ್‍ನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯಅತಿಥಿ, ಮುಲ್ಕಿ ಸೀಮೆಯ ಅರಸ ಎಂ. ದುಗ್ಗಣ್ಣ ಸಾವಂತರು ಸೇವಾ ಮನೋಭಾವ ಮೂಡಿಸುವರಾಷ್ಟ್ರೀಯ ಸೇವಾಯೋಜನೆಯಎಲ್ಲಾ ಚಟುವಟಿಕೆಗಳಲ್ಲಿ, ಸಮಾಜಮುಖಿ ಕಾರ್ಯಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿ ಕೊಳ್ಳಬೇಕೆಂದರು.
ಮಂಗಳೂರು ವಿಶ್ವವಿದ್ಯಾನಿಲಯದರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ.ಶೇಷಪ್ಪಅಮೀನ್ ಮಾತನಾಡಿರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರಗಳು ವಿದ್ಯಾರ್ಥಿಗಳು ಮತ್ತು ಸಮಾಜದ ನಡುವೆ ಸೇತುವೆಯಂತೆ ಕೆಲಸ ಮಾಡುತ್ತಿದ್ದು ವಿದ್ಯಾರ್ಥಿಗಳಿಗೆ ಸಾಮಾಜಿಕಕುಂದು ಕೊರತೆಗಳ ಬಗ್ಗೆ ಅರಿವನ್ನು ಮೂಡಿಸುತ್ತದೆ ಎಂದರು.
ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ.ರಮೇಶ್ ಭಟ್‍ಎಸ್.ಜಿ. ಮಾತನಾಡಿ ರಾ.ಸೇ.ಯೋ.ವಾರ್ಷಿಕ ವಿಶೇಷ ಶಿಬಿರವು ಸಾಮಾನ್ಯ ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ಹಾಗೂ ಸಾಮಾಜನಿಷ್ಠ ವ್ಯಕ್ತಿಗಳಾಗಿ ರೂಪಿಸುತ್ತದೆ ಎಂದರು.
ಪ್ರಾಂಶುಪಾಲ ಪ್ರೊ. ಹರೀಶಆಚಾರ್ಯ ಪಿ. ಮಾತನಾಡಿ ಗೋವಿಂದದಾಸ ಕಾಲೇಜಿನ ರಾ.ಸೇಯೋ. ಸ್ವಯಂಸೇವಕರು ಸತತವಾಗಿ ರಾಷ್ಟ್ರೀಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಮಂಗಳೂರು ವಿ.ವಿಯನ್ನು ಪ್ರತಿನಿಧಿಸಿ ದಾಖಲೆಗೈದಿದ್ದಾರೆ.ರಾ.ಸೇಯೋ.ಸಮಾಜ ಸೇವೆಯೊಂದಿಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೂ ಪ್ರೋತ್ಸಾಹ ನೀಡುವುದು ವಿದ್ಯಾರ್ಥಿಗಳ ಈ ಸಾಧನೆಗಳಿಗೆ ಕಾರಣವಾಗಿದೆಎಂದರು.
ಗೋವಿಂದದಾಸ ಕಾಲೇಜು ಅಲ್ಯುಮ್ನಿ ಅಸೋಸಿಯೇಶನ್ (ರಿ.)ಯ ಕಾರ್ಯದರ್ಶಿ ಶಿರಿಸ್ ಕುಮಾರ್, ಓರಿಯೆಂಟಯಿಲ್ ಇನ್ಸೂರೆನ್ಸ್‍ನ ವಿಶ್ರಾಂತ ಹಿರಿಯ ವಿಭಾಗೀಯ ಪ್ರಬಂಧಕ ಯಾದವ ದೇವಾಡಿಗ, ಖ್ಯಾತ ವಾಗ್ಮಿ ವಿದ್ವಾನ್ ದಾಮೋದರ ಶರ್ಮ ಬಾರ್ಕೂರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಅರಸುಡೈರಿ ಫಾರ್ಮ್‍ನ ಮಾಲಕಗೌತಮ್‍ಜೈನ್, ಗೋವಿಂದದಾಸ ಕಾಲೇಜು ಅಲ್ಯುಮ್ನಿ ಅಸೋಸಿಯೇಶನ್‍ನ ಜೊತೆ ಕಾರ್ಯದರ್ಶಿ ಗಂಗಾಧರ್‍ಕೆ., ಉಪನ್ಯಾಸಕರಾದ ಕುಮಾರ್ ಮಾದರ್, ಡಾ. ಸಂತೋಷ್ ಆಳ್ವ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಪ್ರಶಾಂತ್‍ಎಂ.ಡಿ.ಮತ್ತಿರರು ಉಪಸ್ಥಿತರಿದ್ದರು.
ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಾದ ಅಕ್ಷತಾ ವಿ.ಸ್ವಾಗತಿಸಿ ಡಾ.ಭಾಗ್ಯಲಕ್ಷ್ಮೀ ಎಂ.ವಂದಿಸಿದರು.ಕಾರ್ಯದರ್ಶಿಅನನ್ಯಾ ಭಟ್‍ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


