ಬಿರುಕು ಬಿಟ್ಟ ಬದುಕು

Upayuktha
0




ಅರ್ಧ ಮುಚ್ಚಿದ ಕಣ್ಣಲಿ ಸಾವಿರ ಕನಸಿನ ತಲ್ಲಣ,

ಬಿರುಕು ಬಿಟ್ಟ ಮನದೊಳಗೆ ನೆನಪುಗಳ ಆಕ್ರಮಣ.

ಒಡೆದ ಬಿಂಬದ ನಡುವೆ ಬೆಳೆದಿದೆ ಒಂಟಿತನದ ಮರ,

ಹೇಳಲಾಗದ ನೋವಿಗೆ ಮೌನವೇ ಇಲ್ಲಿ ಉತ್ತರ ll೦೧ll 


ಒಣಗಿದ ಕೊಂಬೆಯಲಿ ಚಿಗುರೊಡೆಯದ ಭಾವನೆಗಳು,

ಕಣ್ಣ ರೆಪ್ಪೆಯ ಮರೆಯಲ್ಲಿ ಅಡಗಿದವು ಕಣ್ಣೀರುಗಳು.

ಮುಖವಾಡದ ಬದುಕಲಿ ಅಂತರಾತ್ಮವು ಹೋಳಾಗಿದೆ,

ಬಾಹ್ಯದ ನಗುವಿನ ಹಿಂದೆ ಅದೆಷ್ಟು ಗಾಯಗಳು ಅಡಗಿದೆ? ll೦೨ll 


ಚಿಗುರ ಬಯಸುವ ಮನಕೆ ಕಾಡುತ್ತಿದೆ ಬೇಗೆಯ ಶಾಖ,

ವಿಧಿಯ ಆಟದ ಮುಂದೆ ಬದುಕು ಬರಿದಾದ ಲೇಖ.

ಆದರೂ ಈ ಬಿರುಕಿನ ನಡುವೆ ಹೊಸ ಭರವಸೆ ಮೂಡಲಿ,

ಒಡೆದ ಮನವು ಮತ್ತೆ ಪ್ರೀತಿಯಿಂದಲೇ ಒಂದುಗೂಡಲಿ ll೦೩ll 


- ಕುಮಾರಿ ರೂಪಾ ಬಿ. ನಾಟೀಕಾರ ಮುದ್ದೇಬಿಹಾಳ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

Post a Comment

0 Comments
Post a Comment (0)
To Top