ಧರ್ಮಸ್ಥಳದಲ್ಲಿ ಬೆಂಗಳೂರಿನ ಭಕ್ತರಿಂದ ದೇವಸ್ಥಾನದಲ್ಲಿ ಅಲಂಕಾರ ಸೇವೆ

Upayuktha
0


ವಿವಿಧ ಜಾತಿಯ ಹೂವುಗಳು ಮತ್ತು ಎಲೆಗಳ ಅಲಂಕಾರದಿಂದ ಕಣ್ಮನ ಸೆಳೆಯುತ್ತಿರುವ ದೇವಸ್ಥಾನ


ಉಜಿರೆ: ಹೊಸವರ್ಷಕ್ಕೆ ಬೆಂಗಳೂರಿನ ಭಕ್ತರಾದ ಗೋಪಾಲ ರಾವ್ ಮತ್ತು ಆನಂದ ರಾವ್ ಬಳಗದವರು ಧರ್ಮಸ್ಥಳದಲ್ಲಿ ದೇವಸ್ಥಾನದ ಒಳಾಂಗಣ, ಹೊರಾಂಗಣ, ಬೀಡು (ಹೆಗ್ಗಡೆಯವರ ನಿವಾಸ) ಹಾಗೂ ಕಟ್ಟಡಗಳನ್ನು ವಿವಿಧ ಜಾತಿಯ ಹೂಗಳನ್ನು ಮತ್ತು ಎಲೆಗಳನ್ನು ಬಳಸಿ ಆಕರ್ಷಕ ವಿನ್ಯಾಸದಿಂದ ಸಿಂಗರಿಸಿದ್ದಾರೆ.


ಹಳದಿ ಸೇವಂತಿಗೆ, ಬಿಳಿ ಸೇವಂತಿಗೆ, ಕೆಂಪು ಸೇವಂತಿಗೆ, ಗುಲಾಬಿ ಬಟನ್, ರೋಸ್‌ಪೆಟಲ್ಸ್, ಸುಗಂಧರಾಜ ಮೊದಲಾದ ಹೂವುಗಳು ಹಾಗೂ ಸೇಬು, ಮುಸುಂಬಿ ಮತ್ತು ಕಿತ್ತಳೆ ಮೊದಲಾದ ಹಣ್ಣುಗಳು, ವಿವಿಧ ಜಾತಿಯ ಎಲೆಗಳನ್ನು ಬಳಸಿ ಆಕರ್ಷಕ ವಿನ್ಯಾಸದಲ್ಲಿ ಅಲಂಕಾರ ಮಾಡಿದ್ದಾರೆ.


ಕಳೆದ ನಾಲ್ಕು ದಿನಗಳಿಂದ 150 ಮಂದಿ ಸ್ವಯಂಸೇವಕರಾಗಿ ಅಲಂಕಾರ ಸೇವೆಯನ್ನು ಮಾಡಿ ಧನ್ಯತೆಯನ್ನು ಹೊಂದಿದ್ದಾರೆ.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top