ಪುತ್ತೂರು: ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ರಾಮಕೃಷ್ಣ- ವಿವೇಕಾನಂದ ಭಾವ ಪ್ರಚಾರ ಪರಿಷತ್ ಸಂಸ್ಥೆಯು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಡೆಸಿದ ರಾಜ್ಯಮಟ್ಟದ 'ವಿವೇಕ ವಿದ್ಯಾರ್ಥಿ' ಪರೀಕ್ಷೆಯಲ್ಲಿ ಸುದಾನ ಶಾಲೆಯ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಉತ್ತಮ ಸಾಧನೆ ಮೆರೆದ ಎಂಟನೇ ತರಗತಿಯ ಧೃತಿ ಎಚ್ ರೈ, ಆನ್ಸೆಲ್ ಪ್ರಿನ್ಸಿಟಾ ಗೊನ್ಸಾಲ್ವಿಸ್, ಒಂಭತ್ತನೇ ತರಗತಿಯ ನವನೀತ್ ವೈ ಕೆ, ಯಶಸ್ವಿ ಎನ್, ಹತ್ತನೇ ತರಗತಿಯ ಭವಿಷ್ಯ, ಯಕ್ಷಿತ್ ಮತ್ತು ಪೃಥ್ವಿ ಪಿ ಅವರನ್ನು ಶಾಲಾ ಸಂಚಾಲಕರಾದ ರೆ. ವಿಜಯ ಹಾರ್ವಿನ್, ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ಅಭಿನಂದಿಸಿದ್ದಾರೆ. ಇವರಿಗೆ ಸಹಶಿಕ್ಷಕಿ ಪವಿತ್ರಾ ಜಿ ಮಾರ್ಗದರ್ಶನ ನೀಡಿದ್ದರು.
