ದೇಶದ ಗೌರವ ಉನ್ನತ ಮಾಡೋಣ, ಬನ್ನಿ ಹಿಂದಿಯಲ್ಲಿ ಕೆಲಸ ಮಾಡೋಣ: ವಿಕಾಸ್ ಸಿಂಗ್

Upayuktha
0

ಅಲೋಶಿಯಸ್ ವಿವಿಯಲ್ಲಿ ಅಂತರರಾಷ್ಟ್ರೀಯ ಭಾಷಾ ಸಮ್ಮೇಳನ



ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಹಿಂದಿ ವಿಭಾಗ, ಹಿಂದಿ ಸಂಘ, ಭಾಷಾ ಮತ್ತು ಸಾಂಸ್ಕೃತಿಕ ಅಧ್ಯಯನ ನಿಕೇತನ, ಕಾನೂನು ಅಧ್ಯಯನ ನಿಕೇತನ, ಬ್ಯಾಂಕ್ ಆಫ್ ಬರೋಡಾ ಪ್ರಾದೇಶಿಕ ಕಚೇರಿ ಮತ್ತು ವಿ.ಆರ್.ಡಿ.ಎಫ್., ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಹಿಂದಿ ದಿನದ ಅಂಗವಾಗಿ “ಜಾಗತಿಕ ಪರಿಧಿಯಲ್ಲಿ ಹಿಂದಿಯ ಭವಿಷ್ಯ” ಎಂಬ ವಿಷಯದಲ್ಲಿ ಒಂದು ದಿನದ ಅಂತರರಾಷ್ಟ್ರೀಯ ಭಾಷಾ ಸಮ್ಮೇಳನವನ್ನು ಜನವರಿ 10, 2026ರಂದು ಆಯೋಜಿಸಲಾಯಿತು.


ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ಮುಕುಂದ ಪ್ರಭು ಅವರು ಸ್ವಾತಂತ್ರ್ಯಕ್ಕೂ ಮುನ್ನ ಮತ್ತು ನಂತರ ಹಿಂದಿಯ ಬಳಕೆಯ ಕುರಿತು ಪ್ರಾಸ್ತಾವಿಕ ಭಾಷಣ ಮಾಡಿದರು.


ಕಾರ್ಯಕ್ರಮದ ಉದ್ಘಾಟಕರಾದ ಬರೋಡಾ ಅಕಾಡೆಮಿ, ಮಂಗಳೂರು ಮುಖ್ಯ ವ್ಯವಸ್ಥಾಪಕರಾದ ಶ್ರೀ ವಿಕಾಸ್ ಸಿಂಗ್  ಅವರು ಹಿಂದಿಯ ಅಂತರರಾಷ್ಟ್ರೀಯ ಗುರುತಿನ ಪ್ರಯಾಣವನ್ನು ವಿವರಿಸಿ, ಭಾರತದಲ್ಲಿಯೂ ಹಿಂದಿಗೆ ಆದ್ಯತೆ ನೀಡಬೇಕೆಂದು ಒತ್ತಿ ಹೇಳಿದರು.


ತಾಂತ್ರಿಕ ಅಧಿವೇಶನದಲ್ಲಿ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕಾನೂನು ಅಧ್ಯಯನ ನಿಕೇತನದ ಸಹ ಡೀನ್ ಫಾ. ಪ್ರಶಾಂತ್ ಸಿಕ್ವೇರಾ ಎಸ್.ಜೆ. ಅವರು ಭಾರತೀಯ ಸಂವಿಧಾನದಲ್ಲಿ ಭಾರತೀಯ ಭಾಷೆಗಳ ಮಹತ್ವವನ್ನು ವಿವರಿಸಿದರು. ಎರಡನೇ ಅಧಿವೇಶನದಲ್ಲಿ ಚೀನಾದ ಕ್ವಾಂಗ್‌ತಾಂಗ್ ವಿದೇಶಿ ಭಾಷಾ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕರಾದ (ಹಿಂದಿ) ಡಾ. ವಿವೇಕ್ ಮಣಿ ತ್ರಿಪಾಠಿ ಅವರು ವಿದೇಶಗಳಲ್ಲಿ ಕೆಲಸ ಮಾಡಲು ಹಿಂದಿಯ ಜೊತೆಗೆ ಕೌಶಲ್ಯದ ಅಗತ್ಯವೂ ಇದೆ ಎಂದು ಹೇಳಿದರು. ಹಿಂದಿಯನ್ನು ಅಭಿವೃದ್ಧಿಪಡಿಸಲು ಅದನ್ನು ಜ್ಞಾನದ ಭಾಷೆಯನ್ನಾಗಿ ಮಾಡಬೇಕೆಂದು ಅವರು ಒತ್ತಿ ಹೇಳಿದರು.


ತಾಂತ್ರಿಕ ಅಧಿವೇಶನದ ಅಧ್ಯಕ್ಷರಾದ ಫೀಲ್ಡ್ ಮಾರ್ಷಲ್ ಕೆ. ಎಂ. ಕರಿಯಪ್ಪ ಕಾಲೇಜು, ಮಡಿಕೇರಿಯ ಹಿಂದಿ ವಿಭಾಗದ ಮುಖ್ಯಸ್ಥರಾದ ಪ್ರೊ. ಶ್ರೀಧರ ಹೆಗಡೆ ಅವರು ಹಿಂದಿತರ ಪ್ರಾಂತ್ಯಗಳಲ್ಲಿ ಹಿಂದಿಯ ಪ್ರಚಾರ-ಪ್ರಸಾರದಲ್ಲಿ ಎದುರಾಗುವ ವ್ಯಾವಹಾರಿಕ ಸಮಸ್ಯೆಗಳು ಮತ್ತು ಅವುಗಳ ಪರಿಹಾರಗಳ ಕುರಿತು ಚರ್ಚಿಸಿದರು. 


ಸುಮಾರು 350 ಮಂದಿ ಭಾಗವಹಿಸಿ ಭಾಷಾ ಸಮ್ಮೆಳನವನ್ನು ಯಶಸ್ವಿಗೊಳಿಸಿದರು. ವಿಶ್ವ ಹಿಂದಿ ದಿನದ ಅಂಗವಾಗಿ ನಡೆದ ಸ್ಪರ್ಧೆಗಳ ವಿಜೇತರನ್ನು ಗೌರವಿಸಲಾಯಿತು.


ಡಾ. ಮಹಬೂಬಅಲಿ ನದಾಫ್ ಅವರು ಸ್ವಾಗತಿಸಿದರು. ಆದಿತ್ ಕುಮಾರ್, ಜಲ್ಪಾ ಮತ್ತು ಖುಶ್ಬೂ ವಿಷಯ- ವಿಶೇಷಜ್ಞರನ್ನು ಪರಿಚಯಿಸಿದರು. ಮನೀಶ್ ಧನ್ಯವಾದ ಸಮರ್ಪಿಸಿದರು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top