ಕಾಸರಗೋಡು: ಇಲ್ಲಿನ ಇಚ್ಲಂಪಾಡಿ ಕಾರಿಂಜ ಶ್ರೀ ಮಹಾದೇವ ಶಾಸ್ತಾರ ಕ್ಷೇತ್ರದ ಸನ್ನಿಧಿಯಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಾ.ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ(ರಿ.)ಕಾಸರಗೋಡು ವತಿಯಿಂದ 162 ನೇ ವೈವಿಧ್ಯಮಯ ಸಾಹಿತ್ಯಾಮೃತ ಗಾನಾಮೃತ ಕಾರ್ಯಕ್ರಮ ಸಡಗರದಿಂದ ನಡೆಯಿತು. ಸಂಸ್ಥೆಯ ಸಂಗೀತ ಕಲಾವಿದರಾದ ದಿವಾಕರ ಕಾಸರಗೋಡು ಸುರೇಶ್ ಪೈಕ, ಶಶಿಕಲಾ, ಪ್ರಖ್ಯಾತ್ ಭಟ್ ಅವರಿಂದ ಗಾನಾಮೃತ ಕಾರ್ಯಕ್ರಮ ನಡೆಯಿತು.
ಅಚ್ಯುತ ಭಟ್ ಅವರು ಶ್ಲೋಕ ಪಠಣ ಮಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾವಿದರಿಗೆ ಸಂಸ್ಥೆಯ ವತಿಯಿಂದ ಗೌರವಧನ ಹಾಗೂ ಸ್ಮರಣಿಕೆಯನ್ನು ದೇವಸ್ಥಾನದ ಅರ್ಚಕರಾದ ಶ್ರೀ ಶಶಾಂಕ್ ಭಟ್ ಅವರ ದಿವ್ಯ ಹಸ್ತದಿಂದ ನೀಡಿ ಗೌರವಿಸಲಾಯಿತು.
ಡಾ. ವಾಣಿಶ್ರೀ ಅವರು ಸಾಹಿತ್ಯ ಸಾದರ ಪಡಿಸಿದರು. ನಂತರ ದೇವಸ್ಥಾನದ ವತಿಯಿಂದ ಡಾ.ವಾಣಿಶ್ರೀ ಅವರಿಗೆ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಗೋಪಾಲಕೃಷ್ಣ ಭಟ್ ಅವರು ದೇವರ ಫಲ ಪುಷ್ಪ ಪ್ರಸಾದ ಕೊಟ್ಟು ಮುಂದಿನ ಎಲ್ಲಾ ಕಾರ್ಯಕ್ರಮಗಳಿಗೆ ಹರಸಿದರು. ಕಾರ್ಯಕ್ರಮದಲ್ಲಿ ಗಣ್ಯರಾದ ಮೋಹನ, ಗಣೇಶ್ ಭಂಡಾರಿ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

