ಬಳ್ಳಾರಿ ಜನಸಿಸ್ ಶಾಲೆ ಸಂಸ್ಕೃತಿ -2026 ಉತ್ಸವ

Upayuktha
0

ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಎಂದು ಹುಸಿಯಾಗೊಲ್ಲ - ಸಂತೋಷ್ ಮಾರ್ಟಿನ್



ಬಳ್ಳಾರಿ: ಪ್ರತಿಯೊಬ್ಬ ಮಕ್ಕಳು ಸಮಯಕ್ಕೆ ಹೆಚ್ಚು ಮಹತ್ವ ನೀಡಿ, ಕಷ್ಟ ಪಟ್ಟು ಅಲ್ಲ, ಇಸ್ಟ ಪಟ್ಟು ಅಭ್ಯಾಸ ಮಾಡಬೇಕು, ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ಪಾಲಕರ ಹಾಗೂ ಶಾಲೆಯ ಕೀರ್ತಿ ಹೆಚ್ಚಿಸಬೇಕು, ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಎಂದೂ ಹುಸಿಯಾಗೋಲ್ಲ ಎಂದು ಜನಸಿಸ್ ಶಾಲೆ ಸಂಸ್ಥಾಪಕ ಅಧ್ಯಕ್ಷ ಸಂತೋಷ್ ಮಾರ್ಟಿನ್ ಅವರು ಹೇಳಿದರು. 


ನಗರದ ರೆಡ್ಡಿ ಜನಸಂಘ ಸಮುಚ್ಛಯ, ಜೆನಸಿಸ್ ವರ್ಲ್ಡ್ ಶಾಲೆ ಆವರಣದಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಸಂಸ್ಕೃತಿ - 2026 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 55 ಮಕ್ಕಳಿಂದ ಶುರುವಾದ ನಮ್ಮ ಶಾಲೆಯಲ್ಲಿ ಇಂದು ಸಾವಿರಾರು ಮಕ್ಕಳು ಕಲಿಯುತ್ತಿದ್ದು, ಇದು ನಮ್ಮ ಎಲ್ಲ ಪಾಲಕರ ಪ್ರೋತ್ಸಾಹ, ನಮ್ಮ ಶಿಕ್ಷಕರ, ಸಿಬ್ಬಂದಿಗಳ ಶ್ರಮದಿಂದ ಸಾಧ್ಯವಾಗಿದೆ. ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುವೆ, ಮಕ್ಕಳ ಕಲಿಕೆಗೆ ಪೂರಕ ವಾತಾವರಣವಿದ್ದು, ಗುಣಮಟ್ಟದ ಶಿಕ್ಷಣ ಕಲ್ಪಿಸುವುದೇ ನಮ್ಮ ಗುರಿ, ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದರು. 


ರೆಡ್ಡಿ ಜನಸಂಘ ಅಧ್ಯಕ್ಷ, ಬುಡಾ ಮಾಜಿ ಅಧ್ಯಕ್ಷ ಎನ್.ಪ್ರತಾಪ್ ರೆಡ್ಡಿ ಅವರು ಮಾತನಾಡಿ, ಮಕ್ಕಳಿಗೆ ಮೊಬೈಲ್ ಕೈಗೆ ಕೊಡಬೇಡಿ, ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟು, ತಿನ್ನುವುದು, ಟಿವಿ ವೀಕ್ಷಣೆ ಮಾಡುವುದು ಕಂಡು ಬರುತ್ತಿದೆ, ಇದು ಮಕ್ಕಳ ಬೆಳವಣಿಗೆಗೆ ಪೂರಕವಲ್ಲ, ದಯವಿಟ್ಟು ಮಕ್ಕಳನ್ನು ಮೊಬೈಲ್ ಹಾಗೂ ಟಿವಿಯಿಂದ ದೂರವಿಡಿ ಎಂದರು. ಸರಳಾದೇವಿ ಕಾಲೇಜಿನ ಕನ್ನಡ ಉಪನ್ಯಾಸಕ ದಸ್ತಗಿರಿ ದಿನ್ನಿ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪುಸ್ತಕಗಳನ್ನು ಹಿಡಿಯುವ ಕೈಯಲ್ಲಿ ಮೊಬೈಲ್ ಹಿಡಿಯುವುದು ಸಾಮಾನ್ಯವಾಗಿದ್ದು, ಇದು ಒಳ್ಳೆಯ ಬೆಳವಣಿಗೆಯಲ್ಲ, ಓದುವವುದು ಕಡಿಮೆಯಾಗುತ್ತಿದೆ. ವಿಶೇಷವಾಗಿ ಮಕ್ಕಳ ಬಗ್ಗೆ ಪಾಲಕರು ಹೆಚ್ಚು ಗಮನಹರಿಸಬೇಕು, ಇದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮಗು ಶಾಲೆಯಲ್ಲಿ 6 ರಿಂದ 7 ಗಂಟೆ ಮಾತ್ರ ಇರಲಿದೆ, ಮನೆಯಲ್ಲಿ ಪಾಲಕರು ಮಕ್ಕಳ ಶಿಕ್ಷಣದ ಕಡೆ ಗಮನಹರಿಸಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ಅತ್ಯಗತ್ಯವಾಗಿದೆ. ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಎಂದು ಹುಸಿಯಾಗೊಲ್ಲ, ಮಕ್ಕಳು ನಿತ್ಯ ಪತ್ರಿಕೆಗಳನ್ನು ಓದಬೇಕು, ಇದರಿಂದ ಮಕ್ಕಳ ಜ್ಞಾನ ವೃದ್ದಿಯಾಗಲಿದೆ. ಜೊತೆಗೆ ಭಾಷೆ ಮೇಲೆ ಹಿಡಿತ ಬರಲಿದೆ, ವಾರ ಪತ್ರಿಕೆ, ಮಾಸ ಪತ್ರಿಕೆಗಳನ್ನು ಓದಬೇಕು, ಇದರಿಂದ ಮಕ್ಕಳ ಸಾಧನೆಗೆ ಮತ್ತಷ್ಟು ಸಹಕಾರಿಯಾಗಲಿದೆ. ನಿತ್ಯ ಪತ್ರಿಕೆಗಳನ್ನು ಓದಿದ ವಿದ್ಯಾರ್ಥಿ ಮುಂದಿನ ದಿನಗಳಲ್ಲಿ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬಲ್ಲರು ಎಂದರು. 


ಜನಸಿಸ್ ಶಾಲೆಯ ಸೋನಿಯಾ ಮೇಡಂ,  ಖಾಸಗಿ ಶಾಲೆಗಳ ಆಡಳಿತ ಮಂಡಳಿ ಸಂಘದ ಅಧ್ಯಕ್ಷ ಮರಿಸ್ವಾಮಿ ರೆಡ್ಡಿ,  ತಿಮ್ಮಾರೆಡ್ಡಿ, ಜನಸಿಸ್ ಶಾಲೆಯ ಪ್ರಾಚಾರ್ಯರಾದ ನಜಮಾ ಮೇಡಂ, ವಿಜಯಾ ಮೇಡಂ, ಸುಧಾ ಮೇಡಂ ಸೇರಿದಂತೆ, ಶಾಲೆಯ ಎಲ್ಲ ಶಿಕ್ಷಕರು, ಸಿಬ್ಬಂದಿಗಳು, ಪಾಲಕರು ಇತರರಿದ್ದರು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top