ಶರಣಬಸವೇಶ್ವರ ಕೆರೆ ಉದ್ಯಾನದಲ್ಲಿ "ಪ್ರತಿಭಾ ಶೋಧ" ಚಿಣ್ಣರ ಸಾಂಸ್ಕೃತಿಕ ರಂಗೋತ್ಸವ

Upayuktha
0

ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್ ಮಾರ್ಗದರ್ಶನದಲ್ಲಿ ಸೆಟ್ಟೇರಿದ ಕಲಾಕುಸುಮ





ಕಲಬುರಗಿ: ಶರಣಬಸವೇಶ್ವರ ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ಕೆರೆ ಉದ್ಯಾನವನದಲ್ಲಿ ನೂತನ ವರ್ಷದ ಪ್ರಯುಕ್ತ "ಪ್ರತಿಭಾ ಶೋಧ"ವಿಶೇಷ ಕಾರ್ಯಕ್ರಮ ನಡೆದು ಸಾಂಸ್ಕೃತಿಕ ರಂಗೋತ್ಸವ ನಿರ್ಮಾಣಗೊಂಡಿತು.


ಕಲಬುರ್ಗಿ ಪ್ರಾದೇಶಿಕ ಆಯುಕ್ತರಾದ ಮಾರ್ಗದರ್ಶನದಲ್ಲಿ ಡಿಸೆಂಬರ್ 22 ರಿಂದ ಜ 4 ರವರಿಗೆ ಕೆರೆ ಉದ್ಯಾನವನದ ಎಬಿಸಿಡಿ ಬಯಲು ರಂಗ ಮಂದಿರದಲ್ಲಿ ಪ್ರತಿಭಾ ಶೋಧ ವಿಶೇಷ ಸಂಸ್ಕೃತಿಕ ರಂಗೋತ್ಸವ ನಡೆಯಿತು.


ಕಳೆದ ವರ್ಷ ಶಿಶಿರೋತ್ಸವ ಸಂಪನ್ನಗೊಂಡಿದ್ದು ಈ ವರ್ಷ ಪ್ರತಿಭಾ ಶೋಧದ ಮೂಲಕ ಸ್ಥಳೀಯ 14ಕ್ಕೂ ಹೆಚ್ಚು ತಂಡಗಳ ಕಲಾವಿದರು ಸಾಂಸ್ಕೃತಿಕ ರಂಗು ಸಾದರ ಪಡಿಸಿದರು. ಚುಮುಚುಮು ಚಳಿಯ ನಡುವೆ ಹಾಡುಗಳ ರಸಧಾರೆ ನೃತ್ಯಗಳ ವೈಭವ ಗಾಂಧಾರ ಕಲೆಯ ಪ್ರದರ್ಶನ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ ಬಾಲಕನ ಸ್ಮರಣ ಶಕ್ತಿಯ ಅನಾವರಣ ಎಲ್ಲವೂ ಸಾಂಸ್ಕೃತಿಕ ರಸಸ್ವಾದಕರ ಮನತಣಿಸಿತು. ಈ ಮೂಲಕ ಶರಣಬಸವೇಶ್ವರ ಕೆರೆ ಅಭಿವೃದ್ಧಿ ಪ್ರಾಧಿಕಾರವು ಹೊಸ ಹೊಸ ಪ್ರತಿಭೆಗಳನ್ನು ಬೆಳಕಿಗೆ ತರುವ ನೂತನ ಪ್ರಯೋಗ ಯಶಸ್ವಿಗೊಂಡಿತು.



ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಾಳುಗಳು ಜನವರಿ 4ರಂದು ವಿಶೇಷ ಪ್ರದರ್ಶನ ನೀಡಿದರು ಶ್ರೀಮತಿ ಪ್ರಿಯಾ ಗುಗ್ಗಾಡ ನಿರ್ದೇಶನದಲ್ಲಿ ಪ್ರಿಯಾ ನೃತ್ಯಲಯ ಸಂಸ್ಥೆಯ ವಿದ್ಯಾರ್ಥಿಗಳು  ಪ್ರಸ್ತುತಪಡಿಸಿದ ನೃತ್ಯ ವೈಭವ ಕಣ್ಣಿಗೆ ಹಬ್ಬವನ್ನುಂಟು ಮಾಡಿತು ಕರುಣೇಶ್ ಬಿ ಜೆ ಹಾಡಿದ "ಕೋಡಗಾನ ಕೋಳಿ ನುಂಗಿತ್ತ..." ಹಾಡಿಗೆ ಪ್ರೇಕ್ಷಕರು ಕುಣಿದು ಕುಪ್ಪಳಿಸಿದರು. ವರುಣ್ ಪಾಟೀಲ್ ಅವರ ಗಾಂಧಾರಿ ವಿದ್ಯೆ ಬಸವರಾಜ್ ಪಾಟೀಲ್ ಜಿಡಗಾ, ವಾಸುದೇವ ಎಂ ಬಾಳಿ, ರವಿ ಅವರ ಗಾಯನದಲ್ಲಿ ರಂಜಿಸಿದರು. ಅಪೂರ್ವ, ಪ್ರೇಮಾ, ಕಿರಣ್, ರಾಹುಲ್ ನೃತ್ಯ ಮತ್ತಿತರರು ಸೊಬಗು ನೀಡಿದರು. ಕುಮಾರ್ ಉತ್ಕರ್ಷ ವಿಶಾಲ್ ಗದ್ದಾಳೆ ಭಗವದ್ಗೀತೆಯ ಶ್ಲೋಕಗಳನ್ನು ಪಠಿಸಿದರು. 


ಪ್ರತಿಭಾ ಶೋಧದಲ್ಲಿ ಭಾಗವಹಿಸಿದವರಿಗೆ ಕಲಬುರಗಿ, ಬೀದರ್ ಹಾಗೂ ಯಾದಗಿರಿ ಸಹಕಾರ ಹಾಲು ಉತ್ಪಾದಕರ ಸಂಘಗಳು ಒಕ್ಕೂಟದ ಅಧ್ಯಕ್ಷರಾದ ಆರ್ ಕೆ ಪಾಟೀಲ್ ನಂದಿನಿ ಬಹುಮಾನ ಪ್ರಾಯೋಜಕತ್ವ ನೀಡಿದ್ದರು. 



ಮೊಬೈಲ್ ಗೀಳಿನಿಂದ ಹೊರಬರಲು ಪ್ರತಿಭಾ ಶೋಧ ಉತ್ತಮ ಅವಕಾಶ: ಡಾ. ಪೆರ್ಲ


ಶರಣಬಸವೇಶ್ವರ ಕೆರೆ ಉದ್ಯಾನದಲ್ಲಿ ಪ್ರಾದೇಶಿಕ ಆಯುಕ್ತರ ಮಾರ್ಗದರ್ಶನದಲ್ಲಿ ನಡೆದ ಪ್ರತಿಭಾ ಶೋಧ ಕಾರ್ಯಕ್ರಮದ ಮೂಲಕ ಅನೇಕ ಪ್ರತಿಭೆಗಳಿಗೆ ತಮ್ಮ ಪ್ರದರ್ಶನ ನೀಡಲು ಅನುಕೂಲವಾಗಿದೆ ಮಕ್ಕಳು ಮೊಬೈಲ್ ದಾಸರಾಗುತ್ತಿರುವ ಸಂದರ್ಭದಲ್ಲಿ ಇಂಥ ಕಾರ್ಯಕ್ರಮ ಸಾಂಸ್ಕೃತಿಕ ಮನಸ್ಸು ಕಟ್ಟಲು ಸಹಕಾರಿಯಾಗುತ್ತದೆ. ಪಾಲಕರು ತಮ್ಮ ಮಕ್ಕಳನ್ನು ಬೇರೆ ಬೇರೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿ ಉತ್ತಮ ಮನಸ್ಸು ಕಟ್ಟುವಲ್ಲಿ ನೆರವಾಗಬೇಕು ಎಂದು ಶರಣಬಸವೇಶ್ವರ ಕೆರೆ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಡಾ. ಸದಾನಂದ ಪೆರ್ಲ ಈ ಸಂದರ್ಭದಲ್ಲಿ ಹೇಳಿದರು. 


ಹಾಲು ಸಹಕಾರ ಸಂಘದ ಯಾದಗಿರಿ ವಿಭಾಗದ ಮುಖ್ಯಸ್ಥರಾದ ರಾಜೀವ್ ಚೌಹಾನ್ ಪ್ರತಿಭಾ ಶೋಧ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ನಂದಿನಿ ಉತ್ಪನ್ನಗಳನ್ನು ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಿದರು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಯೋಜನೆ ಮಾಡಿದ ಆಕಾಶ್ ತೊನನಸನಹಳ್ಳಿ, ಪ್ರಾದೇಶಿ ಕಾಯುಕ್ತರ ಕಚೇರಿಯ ತಹಸಿಲ್ದಾರ್ ಶಾರದಾ ಬಿರಾದಾರ್, ಕೆರೆ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಪ್ರೊ. ಶಂಕರಪ್ಪ ಹತ್ತಿ, ಖ್ಯಾತ ವಿನ್ಯಾಸ ತಜ್ಞ ಭರತ್ ಭೂಷಣ್, ಕೆರೆ ಉದ್ಯಾನದ ಸಿಬ್ಬಂದಿ ಮೊಹಮ್ಮದ್ ಪಾಷಾ, ಮಂಜುನಾಥ್ ಮಹೇಶ್ ರಜತ್ ಮತ್ತು ಸಾಯಿ ರೆಡ್ಡಿ ಹಾಜರಿದ್ದರು. ಪ್ರೀತಿ ಶಹಬಾದ್ ಪ್ರಾರ್ಥನಾ ಗೀತೆ ಹಾಡಿದರು. ವಿಶ್ವನಾಥ ಮರತೂರು ಕಾರ್ಯಕ್ರಮ ನಿರೂಪಿಸಿದರು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top