ಎಳ್ಳು ಬೆಲ್ಲದ ಸಮ್ಮಿಶ್ರಣದಂತೆ ಇರಲಿ ನಮ್ಮ ಪ್ರೀತಿ,
ಕಹಿ ಮರೆತು ಸಿಹಿಯ ಹಂಚುವ ಸಂಭ್ರಮದ ರೀತಿ ll01ll
ಹೃದಯದ ಮಾತುಗಳು ಸಕ್ಕರೆ ಅಚ್ಚಿನಂತೆ ಸುಂದರವಾಗಲಿ,
ಮನಸಿನ ಅಸಮಾಧಾನಗಳೆಲ್ಲ ಬೆಂಕಿಯ ಕಿಚ್ಚಿಗೆ ಆಹುತಿಯಾಗಲಿ ll02ll
ಹೊಸ ಪೈರಿನ ಸುವಾಸನೆಯಲಿ ನಗು ತುಂಬಿರಲಿ ಮನೆಯಲ್ಲಿ,
ಪ್ರೀತಿಯ ಚಿಲುಮೆ ಚಿಮ್ಮಲಿ ಈ ಸಾಫಲ್ಯದ ಕ್ಷಣದಲ್ಲಿ ll03ll
ಸುಖ-ದುಃಖಗಳ ಹದವಾಗಿ ಬೆರೆತು ಸಾಗಲಿ ಬದುಕು,
ಬೆಲ್ಲದ ಸಿಹಿಯಂತಿರಲಿ ನಾಳಿನ ಬಣ್ಣದ ಕನಸುಗಳ ನುಣುಪು ll04ll
ಶರಣೆ: ಕುಮಾರಿ ರೂಪಾ ಬಿ. ನಾಟೀಕಾರ ಮುದ್ದೇಬಿಹಾಳ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


