ಬೆಂಗಳೂರು: ನಿಟ್ಟೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷರೂ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್. ವಿನಯ ಹೆಗ್ಡೆ ಅವರಿಗೆ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪರವಾಗಿ ಪ್ರಾಂಶುಪಾಲ ಡಾ.ಹೆಚ್.ಸಿ. ನಾಗರಾಜ್, ನಿಟ್ಟೆ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್ ಉಪಾಧ್ಯಕ್ಷ ಪ್ರೊ.ಸಂದೀಪ್ ಶಾಸ್ತ್ರಿ, ಸಂಸ್ಥೆಯ ಡೀನ್ ಗಳಾದ ಡಾ.ಸುಧೀರ್ ರೆಡ್ಡಿ, ಪ್ರೊ.ಕಿರಣ್ ಐತಾಳ ಹಾಗೂ ಇತರರು ಅಂತಿಮ ನಮನ ಹಾಗೂ ಶ್ರದ್ಧಾಂಜಲಿ ಸಲ್ಲಿಸಿದರು.
'ಬೆಂಗಳೂರಿನ ನಗರದ ಆಯಕಟ್ಟಾದ ಜಾಗದಲ್ಲಿ ವಿದ್ಯಾಸಂಸ್ಥೆಯನ್ನು ಸ್ಥಾಪಿಸುವ ಅವಕಾಶಗಳು ವಿಪುಲವಾಗಿದ್ದರೂ ಅವರು 25 ವರ್ಷಗಳ ಹಿಂದೆ ಆಯ್ದುಕೊಂಡಿದ್ದು ಅಂದಿನ ಸಂದರ್ಭದಲ್ಲಿ ಅತ್ಯಂತ ಹಿಂದುಳಿದಿದ್ದ ಯಲಹಂಕ ಗ್ರಾಮೀಣ ಪ್ರದೇಶವನ್ನು. ಇದು ಅವರಿಗಿದ್ದ ಗ್ರಾಮೀಣ ಪ್ರತಿಭೆಗಳ ಬಗೆಗಿನ ದೃಢ ವಿಶ್ವಾಸಕ್ಕೆ ದ್ಯೋತಕ' ಎಂದು ಡಾ. ನಾಗರಾಜ್ ನುಡಿದರು.


