"ಪರೀಕ್ಷೆಗೆ ಸಿದ್ಧರಾಗೋಣ ಬನ್ನಿ"- ಮೈಸೂರು ಆಕಾಶವಾಣಿಯಿಂದ ವಿಶೇಷ ಸರಣಿ ಕಾರ್ಯಕ್ರಮ

Upayuktha
0

ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ      





ಮೈಸೂರು:  ಭಾರತದಲ್ಲಿಯೇ ಮೊದಲ ಆಕಾಶವಾಣಿ ಎಂಬ ಕೀರ್ತಿಗೆ ಭಾಜನವಾಗಿರುವ ಈಗ 90 ರ ಸಂಭ್ರಮ ದಾಟಿರುವ ಮೈಸೂರು ಆಕಾಶವಾಣಿ ವೈವಿಧ್ಯಮಯ ಕಾರ್ಯಕ್ರಮಗಳಿಂದ ಶತಮಾನದತ್ತ ದಾಪುಗಾಲು ಹಾಕುತ್ತಿದೆ.


ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಯ ವ್ಯಾಪ್ತಿಯ ಜನರ ನಾಡಿ ಮಿಡಿತ, ಜೊತೆಗೆ ಮಾಹಿತಿಗಳ ಹರಿಕಾರನಾಗಿರುವ ಮೈಸೂರು ಆಕಾಶವಾಣಿ ಎಫ್ಎಂ 100.6 ಆಬಾಲವೃದ್ಧರಾಗಿ ವೈವಿಧ್ಯಮಯ ಕಾರ್ಯಕ್ರಮಗಳನ್ನ ನೀಡುತ್ತಾ ಬರುತ್ತಿದೆ. ಮಾಹಿತಿ, ಮನರಂಜನೆ, ಜೊತೆಗೆ ಶಿಕ್ಷಣ ಸೇರಿವೆ. ಕುಳಿತಲ್ಲೇ ನಮಗೆ ಕಾರ್ಯಕ್ರಮಗಳ ಮಹಾಪೂರವನ್ನೇ ಹರಿಸಿದೆ. ಆಕಾಶವಾಣಿಯ ಕಾರ್ಯಕ್ರಮಗಳನ್ನು ಕೇಳುತ್ತಾ ನಮ್ಮ ಬೇರೆ ಕೆಲಸಗಳನ್ನು ಕೂಡ ಮಾಡಿಕೊಳ್ಳಬಹುದು.     


ಈ ಕಾರ್ಯಕ್ರಮಗಳನ್ನು  ನ್ಯೂಸ್ ಆನ್ ಎ ಐ ಆರ್ ಆ್ಯಪ್ (news an AIR app) ಮೂಲಕ ದೇಶದ ಅಲ್ಲದೆ ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ಕೂಡ ಮೈಸೂರು ಆಕಾಶವಾಣಿಯ ಕಾರ್ಯಕ್ರಮಗಳನ್ನು ಕೇಳಬಹುದಾಗಿದೆ. 


2026 ನೇ ವರ್ಷಕ್ಕೆ ಕಾಲಿಟ್ಟಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪಾಲಿಗೆ ಒಂದು ಸಿಹಿ ಸುದ್ದಿ! "ಮೈಸೂರು ಆಕಾಶವಾಣಿ" ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗೆ ಸಿದ್ಧರಾಗುತ್ತಿರುವ ವಿದ್ಯಾರ್ಥಿಗಳಿಗಾಗಿ "ಪರೀಕ್ಷೆಗೆ ಸಿದ್ಧರಾಗೋಣ ಬನ್ನಿ" ಎಂಬ ವಿಶೇಷ ಬಾನೂಲಿ ಸರಣಿ ಕಾರ್ಯಕ್ರಮವನ್ನು ಇದೇ ಜನವರಿ 2026 ರಿಂದ ಪ್ರಸಾರ ಮಾಡಲಾಗುತ್ತಿದೆ.


ಈ ಕಾರ್ಯಕ್ರಮ ಯುವ ವಾಣಿಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಪ್ರತಿ ಸೋಮವಾರ ಮತ್ತು ಗುರುವಾರ ರಾತ್ರಿ 8:00 ಗಂಟೆಗೆ ಅನುಭವಿ ಪ್ರಾದ್ಯಾಪಕರೊಂದಿಗೆ ಸಂವಾದ/ ಸಂದರ್ಶನವನ್ನು ನಡೆಸಲಾಗುವುದು. ಇದರ ಮರುಪ್ರಸಾರವನ್ನು ಪ್ರತಿ ಬುಧವಾರ ಮತ್ತು ಶನಿವಾರ ಬೆಳಿಗ್ಗೆ 8.30 ಕ್ಕೆ ಪ್ರಸಾರ ಮಾಡಲಾಗುವುದು.



ಅದೇ ರೀತಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗಾಗಿ ಪ್ರತಿ ಭಾನುವಾರ ಬೆಳಿಗ್ಗೆ 10.30 ಗಂಟೆಯಿಂದ 11:15 ರವರೆಗೆ ಅನುಭವಿ ಶಿಕ್ಷಕರೊಂದಿಗೆ ಸಂವಾದ/ ಸಂದರ್ಶನವನ್ನು ನಡೆಸಲಾಗುವುದು. ಇದರ ಮರುಪ್ರಸಾರವನ್ನು ಪ್ರತಿ ಬುಧವಾರ ರಾತ್ರಿ 8 ಗಂಟೆಗೆ ಪ್ರಸಾರ ಮಾಡಲಾಗುವುದು.


ಈ ಎಲ್ಲಾ ಕಾರ್ಯಕ್ರಮವನ್ನು ಮೈಸೂರು ಆಕಾಶವಾಣಿಯ (100.6) ನ್ಯೂಸ್ ಆನ್ ಎ ಐ ಆರ್ ಆ್ಯಪ್ ನಲ್ಲೂ ಕೂಡ ಕೇಳಬಹುದು. ಈ ಬಗ್ಗೆ ಮೈಸೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕರಾದ ದಿಗ್ವಿಜಯ್ ಬಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆದುದರಿಂದ ವಿದ್ಯಾರ್ಥಿಗಳು ಈ ಒಂದು ಶೈಕ್ಷಣಿಕ ಸರಣಿ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಲು ಈ ಮೂಲಕ ತಿಳಿಸಲಾಗಿದೆ.


ಮೊದಲನೆಯದಾಗಿ ಜನವರಿ 1ಅಂದರೆ ಗುರುವಾರ ರಾತ್ರಿ 8.00 ರಿಂದ 8.45ರ ವರೆಗೆ ಹೊಸ ಮಾಲಿಕೆ ಪ್ರಸಾರವಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ವಿ ಶ್ರೀಧರ್ ಉಪನ್ಯಾಸಕರು ಕನ್ನಡ ವಿಭಾಗದ ಮುಖ್ಯಸ್ಥರು ಚಿನಕುರುಳಿ ಎಸ್ ಟಿ ಜಿ ಪ್ರಥಮ ದರ್ಜೆ ಕಾಲೇಜು, ಪಾಂಡವಪುರ ಇವರು ಕನ್ನಡ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.


ಇದೇ ಕಾರ್ಯಕ್ರಮವು ಬರುವ ಶನಿವಾರ ಅಂದರೆ ಜನವರಿ 3 ನೆಯ ದಿನಾಂಕದಂದು ಬೆಳಿಗ್ಗೆ 8:30 ರಿಂದ 9 15 ರವರೆಗೆ ಮರು ಪ್ರಸಾರವಾಗಲಿದೆ.

ಇದರ ಜೊತೆಗೆ ನಿರಂತರವಾಗಿ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಕಾರ್ಯಕ್ರಮ ಪ್ರಸಾರವಾಗಲಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಲಿ.


ಕಾಳಿಹುಂಡಿ ಶಿವಕುಮಾರ್, ಮೈಸೂರು.

9844883581.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top