ಕಲಾ ಸೌರಭ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ

Upayuktha
0


ಭಟ್ಕಳ: ತಾಲೂಕಿನ ಪ್ರಸಿದ್ದ ಶಿಕ್ಷಣ ಸಂಸ್ಥೆ ಭಟ್ಕಳ ಎಜ್ಯುಕೇಷನ್ ಟ್ರಸ್ಟ್ ನ್ಯೂ ಇಂಗ್ಲೀಷ್ ಸಭಾಭವನದಲ್ಲಿ ಶನಿವಾರ ಸಂಗೀತ ವಿದ್ಯಾರ್ಥಿಗಳ ಅದ್ಬುತ ಕಲಾ ಪ್ರದರ್ಶನ ನಡೆಯಿತು.


ಕಲಾ ಸೌರಭ ಸಂಗೀತ ಶಾಲೆ ಹಾಗೂ ಭಟ್ಕಳ ಎಜ್ಯುಕೇಷನ್ ಟ್ರಸ್ಟ್ ಇದರ ಸಹಯೋಗದಲ್ಲಿ ಶನಿವಾರ ಸಂಗೀತ ಹಾಗೂ ತಬಲ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಎಪರ್ಡಿಸಲಾಗಿತ್ತು. ಕಾರ್ಯಕ್ರಮ ವನ್ನು ಕೆದಾರ ಕೊಲ್ಲೆ ಹಾಗೂ ರಾಜೇಶ ನಾಯಕ ಅವರು ಉದ್ಘಾಟಿಸಿದರು. ಗಣಪತಿ ಶಿರೂರು ಉಪಸ್ಥಿತರಿದ್ದರು.




ವಿದ್ಯಾರ್ಥಿಗಳು ತಾವು ಕಲಿತ ಕಲಾ ಪ್ರಕಾರಗಳನ್ನು ಅಮೋಘವಾಗಿ ಪ್ರದರ್ಶನಗೈದರು. ಐದು ಗಂಟೆಗಳ ಸುದೀರ್ಘ ಕಾರ್ಯಕ್ರಮ ದಲ್ಲಿ ವಿದ್ಯಾರ್ಥಿಗಳು ಪ್ರದರ್ಶನ ಮಾಡಿದ ರಾಗಗಳು, ತಬಲ ಸೋಲೊ ಹಾಗೂ ಗಾಯನ ಸಾಥ್ ನೀಡಿದ ರೀತಿ ಹಾಗೂ ಹಿರಿಯ ವಿದ್ಯಾರ್ಥಿ ಪರಶುರಾಮ್ ಅವರ ತಬಲ ವಾದನ ಎಲ್ಲರ ಹುಬ್ಬೆರಿಸುವಂತೆ ಮಾಡಿದ್ದವು. ಕೊನೆಯಲ್ಲಿ ಸಂಗೀತ ಗುರುಗಳಾದ ಸ್ಮಿತಾ ಹೆಬ್ಬಾರ ಅವರಿಂದ ಗಾಯನ ಪ್ರಸ್ತುತಿ ನೆರೆದವರನ್ನು ಮಂತ್ರ ಮುಗ್ಧಗೊಳಿಸಿತು.


ವಿದ್ವಾನ್ ಬಾಲಚಂದ್ರ ಹೆಬ್ಬಾರ ಅವರ ತಬಲ ವಾದನ ಹಾಗೂ ಎ.ಎನ್ ಹೆಗಡೆಯವರ ಹಾರ್ಮೋನಿಯಂ ಸಾಥ್ ಅಮೋಘವಾಗಿತ್ತು. ಈ ಸಂದರ್ಭದಲ್ಲಿ ಸಂಗೀತ ಶಿಕ್ಷಕಿ ಸ್ಮೀತಾ ಹೆಬ್ಬಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪೂರ್ಣಿಮಾ ನಾಯ್ಕ ಹಾಗೂ ಮಂಜುಳಾ ಶಿರೂರ್ ಕರ್ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಎಲ್ಲ ಪ್ರೇಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಕಲಾ ಸೌರಭ ವತಿಯಿಂದ ಲಘು ಉಪಹಾರ ವ್ಯವಸ್ಥೆ ಮಾಡಲಾಗಿತ್ತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top