ಸಂಕ್ರಾಂತಿ ಹಬ್ಬದ ವಿಶೇಷ ಉಡುಗೊರೆಯ ಬಗ್ಗೆ ಬಂದಿರುವ ಮೆಸೇಜ್ ಮೇಲ್ನೋಟಕ್ಕೆ ವಂಚನೆಯ ಮೆಸೇಜ್ ಆಗಿರುವಂತಿದೆ.
"ಮೊದಲಿಗೆ ಇದು ನಕಲಿ ಎಂದು ಭಾವಿಸಿದ್ದೆ, ಆದರೆ ನಿಜವಾಗಿಯೂ ನನಗೆ ₹50,000 ದೊರೆಯಿತು! ನೀವೂ ಪ್ರಯತ್ನಿಸಿ ನೋಡಿ" ಎಂಬ ಮೆಸೇಜ್ ಎಲ್ಲೆಡೆ ವ್ಯಾಪಕವಾಗಿ ಹರಿದಾಡುತ್ತಿದೆ.
ಒದಗಿಸಲಾದ BSNL, CANARA ಬ್ಯಾಂಕ್ ಲಿಂಕ್‌ಗಳು ಅಧಿಕೃತ ವೆಬ್‌ಸೈಟ್‌ನಂತೆ ಕಾಣುತ್ತದೆ. ಆದರೆ ಅಧಿಕೃತ ಅಲ್ಲ!!!
ಸುರಕ್ಷತಾ ಸಲಹೆಗಳು:
ಸಂದೇಶದಲ್ಲಿ ಒದಗಿಸಲಾದ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ.
ಅಧಿಕೃತ ವೆಬ್‌ಸೈಟ್‌ಗಳು ಸಾಮಾನ್ಯವಾಗಿ ......co.in ಅಥವಾ .....com ನಂತಹ ಡೊಮೇನ್‌ಗಳನ್ನು ಬಳಸುತ್ತವೆ.
ಸಂದೇಶದಲ್ಲಿ ಲಿಂಕ್ ಮಾಡಲಾದ ವೆಬ್‌ಸೈಟ್‌ನಲ್ಲಿ ಯಾವುದೇ ವೈಯಕ್ತಿಕ ಅಥವಾ ಹಣಕಾಸಿನ ಮಾಹಿತಿಯನ್ನು ಹಂಚಿಕೊಳ್ಳಬೇಡಿ.
ಯಾವುದೇ ಕೊಡುಗೆಗಳು ಅಥವಾ ಪ್ರಚಾರಗಳನ್ನು ಅಧಿಕೃತ ಚಾನೆಲ್‌ಗಳ ಮೂಲಕ ನೇರವಾಗಿ ಪರಿಶೀಲಿಸಿ.
ವಂಚನೆ ಸೃಷ್ಟಿಸುವ ಅಥವಾ ದೊಡ್ಡ ಮೊತ್ತದ ಹಣವನ್ನು ಭರವಸೆ ನೀಡುವ ಸಂದೇಶಗಳ ಬಗ್ಗೆ ಜಾಗರೂಕರಾಗಿರಿ.
**
ಈ ಲಿಂಕ್‌ಗಳೂ ಒಂದು ರೀತಿ ಕೃತ್ತಿಮ ಅರಣ್ಯ ಕಾಯಿದೆ ರೀತಿಯ ವಂಚನೆ!!? ಎಚ್ಚರ ಇರಲಿ
ಅರಣ್ಯ ಇಲಾಖೆಯ ವಂಚನೆಗಳು :
ಒತ್ತುವರಿಗೆ ಅರ್ಜಿ ಕೊಡಿ ಅಂತ ಹೇಳಿ ಫಾರಂ 50, 53, 57 ರಲ್ಲಿ ಅರ್ಜಿ ಪಡೆದು, ಈಗ ಅದರಲ್ಲಿ ರೈತರೇ 'ಒತ್ತಿ ಬರೆದ' ಜಮೀನಿನ ಒತ್ತುವರಿ ಮಾಹಿತಿಯನ್ನು ಕ್ರೋಢೀಕರಿಸಿ, ಈಗ ಅರಣ್ಯ ಇಲಾಖೆಯವರು 'ಒತ್ತುವರಿ ಪಟ್ಟಿ' ತಯಾರಿಸಿ, *ತೆರವು ಕಾರ್ಯಾಚರಣೆ ಎಂಬ ವಂಚನೆ ಜಾಲವನ್ನು ರೈತರ ಮೇಲೆ ಬೀಸಿದ್ದಾರೆ!!
ಈ ವಂಚನೆಗೆ ಪೂರಕವಾಗಿ:
1) ರೈತರನ್ನು ಹೆದರಿಸುವುದಕ್ಕೆ ಅರಣ್ಯ ಇಲಾಖೆಯೇ ಆನೆಗಳನ್ನು ಬಿಡುತ್ತಾರೆ!!
2) ಮಂಗಗಳ ಅಕ್ಷೋಹಿಣಿ ಸೈನ್ಯ ಕಳಿಸುತ್ತಾರೆ
3) ಕಾಡೆಮ್ಮೆ, ಕಾಡುಕೋಣಗಳಿಗೆ ವಂಶಾಭಿವೃದ್ಧಿ ಮಾಡಿಸಿ ಛೂ ಬಿಡ್ತಾ ಇದ್ದಾರೆ!!?
4) ಕಾಳಿಂಗ ಸರ್ಪಗಳ ಮೊಟ್ಟೆ ತರಿಸಿ, ಇಲ್ಲಿ ಮರಿ ಮಾಡಿಸಿ, ಮಲೆನಾಡಿನ ಕೆಲವು ಭಾಗಗಳನ್ನು ಕಾಳಿಂಗ ಧಾಮ ಮಾಡಲಿಕ್ಕೆ ಹೊರಟಿದ್ದಾರಂತೆ!?
5) ಮನುಷ್ಯನೂ ಸೇರಿದ ಜೀವ ಜಾಲಕ್ಕೆ ಅಪಾಯಕಾರಿಯಾದ ಅಕೇಶಿಯ, ನೀಲಗಿರಿ ಕಾಡನ್ನು ವಿಸ್ತರಿಸಿ, ಮಲೆನಾಡಿನ ಜೀವ ವೈವಿಧ್ಯತೆಗೆ ಅರಣ್ಯ ಇಲಾಖೆಯೇ ಬೆಂಕಿ ಇಡುತ್ತಿದೆ.
6) ಕಾಡುಗಳಲ್ಲಿನ ನಾಟದ ಮರಗಳನ್ನು ತಾನೇ ಸರ್ವ ನಾಶ ಮಾಡಿ, ಈಗ ಅಲ್ಲೆಲ್ಲ ವನಮಹೋತ್ಸವ ಎಂಬ ಅಸಂಬದ್ದ, ಅವೈಜ್ಞಾನಿಕ ಗಿಡಗಳನ್ನು ಸಾಯುವಂತೆ ನೆಟ್ಟು, ಸಾಯಿಸಿ, ಲೆಕ್ಕ ತೋರಿಸಿ ನಮ್ಮ ಸರಕಾರದ ಟ್ಯಾಕ್ಸ್ ಹಣ ಹ್ಯಾಕ್ ಮಾಡಲಾಗುತ್ತಿದೆ.
(ದಿವಂಗತ ಗಾಡ್ಗಿಳ್ ರವರು ಹೇಳಿದಂತೆ ಅರಣ್ಯ ನಾಶ ತಡೆಗಟ್ಟಬೇಕಾದರೆ ಮೊದಲು ಅರಣ್ಯ ಇಲಾಖೆಯನ್ನು ತೆಗೆಯಬೇಕು. ಅರಣ್ಯ ಉಳಿಯುವುದು ಕಾಡಂಚಿನ ನೆಲವಾಸಿಗಳಿಂದ" - ಪತ್ರಿಕಾ ವರದಿ)
7) ಜೀವನಾಧಾರ ಒತ್ತುವರಿಗೆ ಹಕ್ಕು ಪತ್ರ, ಪಹಣಿ, ಮ್ಯುಟೇಷನ್ ಕೊಡಲು ಅನುಮತಿ ನಿರಾಕರಿಸಿ, ವಾಸದ ಮನೆಗೂ ಬಣ್ಣದ ಕತೆ ಹೇಳುತ್ತ ಒಕ್ಕಲೆಬ್ಬಿಸುವ ವಂಚನೆಗೆ ಉದ್ಘಾಟನೆಗೆ ಕೊಳ್ಳಿ ಹಚ್ಚಲಾಗಿದೆ.
8) ಸೆಕ್ಷನ್ 4/1 ನಮ್ದು ಅಂತ ಅರಣ್ಯ ಇಲಾಖೆ, ಕಂದಾಯ ಇಲಾಖೆಗಳಲ್ಲೇ ಗೊಂದಲ, ನಕ್ಷೆಯಲ್ಲಿ ಓವರ್‌ಲ್ಯಾಪಿಂಗ್, ನೆಲವಾಸಿಗಳನ್ನು ಗಣನೆಗೆ ಪರಿಗಣಿಸದೆ ಇಲಾಖೆಗಳೇ ಜಂಟಿ ಸರ್ವೆ ಎಂದು ನೆಡೆಸುವ ಹ್ಯಾಕಿಂಗ್ ಹೈಡ್ರಾಮ ನೆಡೆಯುತ್ತಿದೆ.
9) ಮೇಲಿನ ಕೃತ್ತಿಮ ಡೇಂಜರಸ್ ಮೆಸೇಜ್‌ನಂತೆ ದಿನಕ್ಕೊಂದು ನೋಟೀಸ್, ಸರ್ಕ್ಯುಲರ್, ಆದೇಶ, ಟಿಪ್ಪಣಿ, ಸಂದೇಶಗಳನ್ನು ಇಲಾಖೆ ಬಿಡುಗಡೆ ಮಾಡುತ್ತಿದ್ದು, ಪತ್ರಿಕಾ ಗೋಷ್ಟಿಯಲ್ಲಿ ಅದಕ್ಕೆ ವಿರುದ್ಧವಾದ ಸಮಾಧಾನದ ಮಾತುಗಳ ಟೋಪಿ ಹಾಕಲಾಗುತ್ತಿದೆ.
10) ಮೊದಲು 2015 ರ ನಂತರದ ಒತ್ತುವರಿ ತೆರವಿಗೆ ಆದೇಶ ಹೊರಡಿಸಲಾಗಿತ್ತು, ಈಗ 1980 ರ ನಂತರದ ಎಲ್ಲಾ ಅಧಿಸೂಚಿತ ಅರಣ್ಯದ ಒತ್ತುವರಿಗೂ ಆದೇಶ, SIT ರಚನೆ, ಸರ್ವೆಗಳು ಪ್ರಾರಂಭಿಸಲಾಗಿದೆ.
11) ಎಲೆ ಚುಕ್ಕಿ ರೋಗದಿಂದ 70-80% ಬೆಳೆ ನಷ್ಟ ಆದರೂ ಸಂಸತ್‌ನಲ್ಲಿ "ಮಲೆನಾಡು ಪ್ರದೇಶದಲ್ಲಿ ಯಾವುದೇ ಎಲೆ ಚುಕ್ಕಿ ರೋಗ ಇಲ್ಲ" ಎಂದು ದಾಖಲಿಸಿ ಮಲೆನಾಡು ಕರಾವಳಿಗರಿಗೆ ವಂಚಿಸಲಾಗಿದೆ.
12) ಶೃಂಗೇರಿ ಕ್ಷೇತ್ರದಲ್ಲಿ ಎರಡು ವರ್ಷಗಳಿಂದ ಅತಿವೃಷ್ಟಿ ಆಗಿ, ಜನ ಜೀವನ ಅಸ್ತವ್ಯಸ್ತ ಆಗಿದ್ದರೂ ಅಸೆಂಬ್ಲಿಯಲ್ಲಿ ಶೃಂಗೇರಿ ಕೊಪ್ಪಗಳಲ್ಲಿ ಅತಿವೃಷ್ಟಿ ಆಗಿಲ್ಲ ಎಂದು ದಾಖಲಿಸಿ ಪರಿಹಾರ ನೀಡದಿರುವ ವಂಚಿನೆ ನೆಡೆದಿದೆ.
ಒಟ್ಟಿನಲ್ಲಿ ಮಲೆನಾಡಿನ ಜನರ ಬದುಕನ್ನೇ ಹ್ಯಾಕ್ ಮಾಡುವ ವ್ಯವಸ್ಥಿತ ವಂಚನೆಯ ಜಾಲ ಎಲ್ಲಾ ಕಡೆಯಿಂದ ನೆಡೆಯುತ್ತಿದೆ.
ಸರಕಾರಗಳಿಂದ, ಸರಕಾರದ ಅರಣ್ಯ-ಕಂದಾಯ-ಕೃಷಿ-ತೋಟಗಾರಿಕೆ ಇಲಾಖೆಗಳಿಂದ, ನಿಷ್ಕ್ರಿಯ ಕೃಷಿ ಸಂಶೋಧನಾ ಸಂಸ್ಥೆಗಳಿಂದ, ನಿರ್ಲಕ್ಷ್ಯ ತೋರುವ ಜನಪ್ರತಿನಿಧಿಗಳಿಂದ, ಕಾಡಾನೆಗಳಿಂದ, ಕಾಡು ಪ್ರಾಣಿಗಳಿಂದ.... ಮಲೆನಾಡು-ಕರಾವಳಿಯ ನೆಲವಾಸಿಗಳ ಮೇಲೆ ಭೀಕರ ವಂಚನೆಗಳು ನೆಡೆಯುತ್ತಿವೆ.
ಮಲೆನಾಡು-ಕರಾವಳಿ ನೆಲವಾಸಿಗಳು ಜಾಗೃತಿ ಹೊಂದಬೇಕಾಗಿದೆ
ಜಾಗೃತಿ ಹೊಂದುವುದರ ಮೂಲಕ ಮಲೆನಾಡು ಕರಾವಳಿಯ ನೆಲವಾಸಿಗಳ ಬದುಕನ್ನು ಉಳಿಸಿಕೊಳ್ಳಲು ದೊಡ್ಡ ಹೋರಾಟಕ್ಕೆ ಅಣಿಯಾಗಬೇಕಾಗಿದೆ.
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

