ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ

Upayuktha
0


ಪುತ್ತೂರು: ನಾಯಕತ್ವ ಎನ್ನುವುದು ನಮ್ಮೊಳಗಿನ ಒಳ್ಳೆಯತನವನ್ನು ಹೊರಗೆತರುವ ಪ್ರಕ್ರಿಯೆಯಾಗಿದೆ. ನಾಯಕನಾದವನು ಮಗುವಿನಂತೆಎಲ್ಲವನ್ನು ತಿಳಿದುಕೊಳ್ಳುವ ಕುತೂಹಲವನ್ನು ಹೊಂದಿರಬೇಕು. ನಮ್ಮ ವ್ಯಕ್ತಿತ್ವವನ್ನು ಸರಿಯಾಗಿ ನಾವು ಅರ್ಥ ಮಾಡಿಕೊಂಡಾಗ ಮಾತ್ರ ನಾವು ಬೆಳೆಯಲು ಸಾಧ್ಯ. ತಂದೆ -ತಾಯಿ, ಗುರುಗಳಿಗೆ ಗೌರವ ನೀಡಿದರೆ ನಾವು ಉತ್ತಮ ನಾಯಕರಾಗಬಹುದು. ನಾಯಕತ್ವ ನಮ್ಮೊಳಗಿನ ಸಾಮಥ್ರ್ಯವನ್ನು ಅರ್ಥೈಸಿಕೊಳ್ಳಲು ಸಹಕಾರಿಯಾಗಬಹುದು ಎಂದು  ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್.ಗಣೇಶ್‍ ಕಾರ್ಣಿಕ್ ಹೇಳಿದರು.


ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯ ಪುತ್ತೂರು ಇಲ್ಲಿ ನಡೆದ 2025-2026 ನೇ ಸಾಲಿನ ವಿದ್ಯಾರ್ಥಿ ಸಂಘದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ಅಧ್ಯಕ್ಷೀಯ ಮಾತುಗಳನ್ನಾಡಿ, ನಾಯಕನಾದವನು ವಿದ್ಯಾರ್ಥಿಗಳನ್ನು ಒಂದುಗೂಡಿಸುವ ಮೂಲಕ ಉತ್ತಮ ಬಾಂಧವ್ಯ ಬೆಳೆಸಬೇಕು. ಕೇವಲ ಆತನಲ್ಲಿ ಮಾತ್ರವಲ್ಲದೆ ಇತರ ವಿದ್ಯಾರ್ಥಿಗಳ ಕಲೆ-ಕೌಶಲ್ಯವನ್ನು ಮುಂದೆ ತರುವಲ್ಲಿ ಅವನು ಕಾರ್ಯ ಪ್ರವೃತ್ತನಾಗಬೇಕು ಎಂದು ಹೇಳಿದರು. ಕಾಲೇಜಿನ ಸಂಚಾಲಕ ಮುರಳಿಕೃಷ್ಣ ಕೆ. ಎನ್ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.


ಈ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ ತೃತೀಯ ಬಿ.ಸಿ.ಎ ವಿಭಾಗದ ಅಭಿನೀಶ್‍ ಕುಮಾರ್ ಶರ್ಮ, ,ಉಪಾಧ್ಯಕ್ಷೆಯಾಗಿ ತೃತೀಯಬಿ.ಎ ವಿಭಾಗದ ಸುಮನಾ, ಕಾರ್ಯದರ್ಶಿಯಾಗಿ ತೃತೀಯ ಬಿ. ಬಿ. ಎ ವಿಭಾಗದ ಅಶ್ವಿನ್ ಕುಮಾರ್, ಜೊತೆ ಕಾರ್ಯದರ್ಶಿಗಳಾಗಿ ತೃತೀಯ ಬಿ. ಎಸಿ ವಿಭಾಗದ ಎನ್. ಗಣೇಶ್‍ ಕುಮಾರ್ ಮತ್ತುತೃತೀಯ ಬಿ. ಕಾಂ ವಿಭಾಗದ ಹಂಪನಾ ಹೆಚ್. ಪಿ. ಆಯ್ಕೆಗೊಂಡರು.


ಆಯ್ಕೆಯಾದ ವಿದ್ಯಾರ್ಥಿಗಳಿಗೆ ಆಡಳಿತ ವಿಶೇಷಧಿಕಾರಿ ಡಾ. ಮನಮೋಹನ. ಎಂ ಪ್ರಮಾಣವಚನ ಬೋಧಿಸಿದರು.


ಕಾರ್ಯಕ್ರಮವನ್ನು ಭೂಮಿಕಾ ಮತ್ತು ತಂಡದವರು ಪ್ರಾರ್ಥಿಸಿ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಭಿನೀಶ್‍ ಕುಮಾರ್ ಶರ್ಮ ಸ್ವಾಗತಿಸಿ, ಅಶ್ವಿನ್ ಕುಮಾರ್ ವಂದಿಸಿ, ತನ್ಮಯಿ ಕೆ. ಡಿ ನಿರೂಪಿಸಿದರು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top