ಬೆಳ್ಳಾರೆ: ಪ್ರಪಂಚದಾದ್ಯಂತ ಆಚರಿಸಲ್ಪಡುವ ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಬೆಳ್ಳಾರೆಯ ಪವಿತ್ರ ಶಿಲುಬೆಯ ಚರ್ಚ್ ನಲ್ಲಿ ಡಿ. 24 ರಂದು ಸಂಜೆ 6:30ಕ್ಕೆ ಕ್ಯಾರಲ್ಸ್ ಗಾಯನದೊಂದಿಗೆ ಸಂಭ್ರಮ ಆರಂಭವಾಯಿತು ಮತ್ತು 7 ಗಂಟೆಗೆ ದಿವ್ಯ ಬಲಿಪೂಜೆ ಮತ್ತು ಕ್ರಿಸ್ ಮಸ್ ಸಂದೇಶ ಕಾರ್ಯಕ್ರಮ ನಡೆಯಿತು.
ಪವಿತ್ರ ಶಿಲುಬೆಯ ಚರ್ಚ್ ನ ಪ್ರಧಾನ ಧರ್ಮಗುರುಗಳಾದ ವಂ. ಫಾ.ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊರವರು ಬಲಿಪೂಜೆ ನೆರವೇರಿಸಿದರು. ಬಲಿಪೂಜೆಯ ನಂತರ, ರಾತ್ರಿ 8:15ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಪ್ರಾರಂಭವಾಯಿತು. ಉಪ್ಪಿನಂಗಡಿಯ ನಿವೃತ್ತ ಮುಖ್ಯೋಪಾಧ್ಯಾಯರಾದ ವಿನ್ಸೆಂಟ್ ಫೆರ್ನಾಂಡಿಸ್ ಅವರು ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು.ಲಕ್ಕಿ ಗೇಮ್ಸ್ ಅದೃಷ್ಟದ ಆಟಗಳನ್ನು ಆಯೋಜಿಸಲಾಗಿತ್ತು.ಸಾಂತಾ ಕ್ಲಾಸ್ ಆಗಮನ ಎಲ್ಲರಲ್ಲೂ ಸಂಭ್ರಮ ಮೂಡಿಸಿತು. ಎಲ್ಲರಿಗೂ ಕ್ರಿಸ್ ಮಸ್ ಸಿಹಿತಿಂಡಿ ಮತ್ತು ಚಹಾವನ್ನು ವಿತರಿಸಲಾಯಿತು.
ರಾತ್ರಿ 9:30ರ ಸುಮಾರಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಈ ಸಂಭ್ರಮದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ನೆರೆದಿದ್ದರು. ಜನರು ಪರಸ್ಪರ ಕ್ರಿಸ್ ಮಸ್ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


