ಫೆ.1: ಅಲೋಶಿಯಸ್ ವಿವಿಯಲ್ಲಿ ‘ಸ್ವರಾಂಜಲಿ’ ಸಂಗೀತ ಕಚೇರಿ

Upayuktha
0


ಮಂಗಳೂರು: ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದಲ್ಲಿ ಫೆಬ್ರವರಿ 1, 2026 ರ ಭಾನುವಾರ ಸಂಜೆ 5 ಗಂಟೆಗೆ ವಿಶ್ವವಿದ್ಯಾನಿಲಯದ ಎಲ್.ಎಫ್. ರಸ್ಕ್ವಿನ್ಹಾ ಸಭಾಂಗಣದಲ್ಲಿ ಸ್ವರಾಂಜಲಿ - ಆಧ್ಯಾತ್ಮಿಕ ಮತ್ತು ಸಮಕಾಲೀನ ಸಂಗೀತದ ಗಾಯನ ಮತ್ತು ವಾದ್ಯವೃಂದದ ಸಂಗೀತ ಕಚೇರಿಯನ್ನು ಆಯೋಜಿಸಲಿದೆ.


ಕಾರ್ಯಕ್ರಮದ ಪೋಷಕರಾಗಿರುವ ಸಂತ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ರೆ. ಫಾ. ಮೆಲ್ವಿನ್ ಜೋಸೆಫ್ ಪಿಂಟೊ, ಎಸ್.ಜೆ.; ಅಲೋಶಿಯಸ್ ವಿವಿಯ ಕುಲಪತಿ ರೆ. ಡಾ. ಪ್ರವೀಣ್ ಮಾರ್ಟಿಸ್, ಎಸ್.ಜೆ.; ವಿವಿಧ ಬ್ಲಾಕ್‌ಗಳ ನಿರ್ದೇಶಕರು, ಡೀನ್‌ಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಆಸಕ್ತ ಸಾರ್ವಜನಿಕರು ಈ ಸಂಗೀತ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.


ಈ ಸಂಗೀತ ಸಂಭ್ರಮದಲ್ಲಿ ಮಂಗಳೂರಿನ ಉನ್ನತ ಗಾಯಕವೃಂದಗಳು ಮತ್ತು ಆರ್ಕೆಸ್ಟ್ರಾಗಳಾದ ಬಲ್ಮಟ ಮ್ಯೂಸಿಕಲ್ ಅಸೋಸಿಯೇಷನ್; ಸೇಂಟ್ ಜೋಸೆಫ್ಸ್ ಸೆಮಿನರಿ; ಸಿಎಸ್‌ಐ ಯಂಗ್ ವಾಯ್ಸಸ್; ಆಶಾ ಕಿರಣ್; NEPAM; ಸೇಂಟ್ ಅಲೋಶಿಯಸ್ ಪಿಯು ಕಾಲೇಜು ತಂಡ ಮತ್ತು ಸೇಂಟ್ ಅಲೋಶಿಯಸ್ ವಿಶ್ವವಿದ್ಯಾಲಯ ತಂಡಗಳ ಜೊತೆ ರಾಚೆಲ್ ಪ್ರಿಯಾಂಕಾ ಫುರ್ಟಾಡೊ ಮತ್ತು ಅನನ್ಯಾ ಅಭಿಗೈಲ್ ಡಿ'ಸಿಲ್ವಾರವರ ಗಾಯನ ಪ್ರಸ್ತುತಿ ನಡೆಸಲಿದ್ದಾರೆ.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top