ಜಾನಾಮಿ ಧರ್ಮಂ ನ ಚ ಮೇ ಪ್ರವೃತ್ತಿಃ
ಜಾನಾಮ್ಯಧರ್ಮಂ ನ ಚ ಮೇ ನಿವೃತ್ತಿಃ|
ಕೇನಾಪಿ ದೇವೇನ ನಿಯೋಜಿತೋಸ್ಮಿ
ಯಥಾ ನಿಯುಕ್ತೋಸ್ಮಿ ತಥಾ ಕರೋಮಿ||
ಭೀಷ್ಮನನ್ನು ನಂಬಿದೆ. ಅವನು ಪಾಂಡವ ಪಕ್ಷಪಾತಿಯಾಗಿ ಕೈಕೊಟ್ಟ. ದ್ರೋಣನನ್ನು ನಂಬಿದೆ. ಸುಳ್ಳುಹೇಳಿ ಪಾಂಡವರು ಕೊಂದರು. ಕರ್ಣನನ್ನು ನಂಬಿದೆ. ಕೃಷ್ಣ ಕುತಂತ್ರಗಳಿಂದ ನಿಃಸಹಾಯಕ ಸ್ಥಿತಿಯಲ್ಲಿ ಅರ್ಜುನನಿಂದ ಕೊಲ್ಲಿಸಿದ. ಶಲ್ಯನನ್ನು ನಂಬಿದೆ. ಕೈಕೊಟ್ಟು ಹೋದ. ಸೈಂಧವನನ್ನು ನಂಬಿದೆ. ಮೋಸದಿಂದ ಕೃಷ್ಣ ಕೊಲ್ಲಿಸಿದ. ಹೀಗೆ ಕೈ ಕೊಟ್ಟವರಿಗೆ ಬೈಯ್ಯುತ್ತ ಮರಣೋನ್ಮುಖನಾಗಿದ್ದ ದುರ್ಯೋಧನ ಅಶ್ವತ್ಥಾಮನಲ್ಲಿ, ನನ್ನ ಸೋಲಿಗೆ ಕಾರಣ ಯಾರು? ಎಂದು ಕೇಳುತ್ತಾನೆ. ಒಮ್ಮೆಯೂ ಅವನಿಗೆ, ರಾಜ್ಯಲೋಭದಿಂದ, ಪಾಂಡವರ ದ್ವೇಷದಿಂದ, ಹಠಮಾರಿತನದಿಂದ, ಯಾರ ಬುದ್ಧಿಮಾತುಗಳನ್ನು ಕೇಳದೆ ಅವಿವೇಕದಿಂದ ನಾಶಗೊಂಡೆ ಅಂತ ಅನಿಸಲೇ ಇಲ್ಲ ಅವನಿಗೆ ಕೊನೆವರೆಗೂ! ತನ್ನೆಲ್ಲ ತಪ್ಪುಗಳನ್ನು ಭಗವಂತನ ಮೇಲೆ ಹಾಕಿ, ಭಕ್ತನಾಗಿ ಅವನ ಆದೇಶದಂತೆ ನಡೆದುದಾಗಿ ಹೇಳಿಕೊಂಡು ಆತ್ಮವಂಚನೆಯಲ್ಲಿ ಅಸುನೀಗಿದ. ಅಧಿಕಾರದ ಅಮಲಿನ ರಾಜಕೀಯ ದ್ವೇಷದಲ್ಲಿ ಎಲ್ಲರದ್ದೂ ಕೊನೆಗೆ ದುರ್ಯೋಧನನದ್ದೇ ಪಾಡು!
- ಟಿ. ದೇವಿದಾಸ್
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

