ಧರ್ಮಸ್ಥಳ: ನಿಟ್ಟೆ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷರಾದ ಡಾ. ಎನ್. ವಿನಯ ಹೆಗ್ಡೆ ಅವರ ನಿಧನದ ಸುದ್ದಿ ತಿಳಿದು ಅತ್ಯಂತ ವಿಷಾದವಾಯಿತು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ ತಜ್ಞರಾಗಿ, ಖ್ಯಾತ ಉದ್ಯಮಿಯಾಗಿ, ಕ್ರೀಡಾಪ್ರೇಮಿಯಾಗಿ, ಸಮಾಜಸೇವಕರಾಗಿ ಹಾಗೂ ದಕ್ಷ ಆಡಳಿತದಾರರಾಗಿ ಡಾ. ವಿನಯ ಹೆಗ್ಡೆ ಅವರು ಸಮಾಜಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ ಎಂದು ಅವರು ಹೇಳಿದರು. ಉತ್ತಮ ವ್ಯಕ್ತಿತ್ವದ ಧನಿಯಾಗಿದ್ದ ಅವರು ತಮ್ಮ ದಕ್ಷ ನಾಯಕತ್ವದ ಮೂಲಕ ತಾವೂ ಬೆಳೆಯುತ್ತಾ, ಅನೇಕ ಮಂದಿಗೆ ಪ್ರೋತ್ಸಾಹ ಹಾಗೂ ಪ್ರೇರಣೆಯಾಗಿ ನಿಂತವರು ಎಂದು ಸ್ಮರಿಸಿದರು.
ಅನೇಕ ಸಮಾರಂಭಗಳಲ್ಲಿ ಡಾ. ವಿನಯ ಹೆಗ್ಡೆ ಅವರೊಂದಿಗೆ ಒಂದೇ ವೇದಿಕೆ ಹಂಚಿಕೊಂಡ ಅನುಭವವಿದೆ. ನಮ್ಮ ಕ್ಷೇತ್ರದ ಅಪಾರ ಅಭಿಮಾನಿ ಹಾಗೂ ಭಕ್ತರಾಗಿದ್ದ ಅವರು ಸ್ನೇಹಜೀವಿಯಾಗಿ, ಆದರ್ಶ ಸಮಾಜಸೇವಕರಾಗಿ ಚಿರಪರಿಚಿತರಾಗಿದ್ದರು ಎಂದು ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದರು.
ಡಾ. ವಿನಯ ಹೆಗ್ಡೆ ಅವರ ಆತ್ಮಕ್ಕೆ ಚಿರಶಾಂತಿ ದೊರಕಲೆಂದು ಪ್ರಾರ್ಥಿಸುತ್ತೇನೆ. ಅವರ ಅಗಲುವಿಕೆಯಿಂದ ಕುಟುಂಬವರ್ಗದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿ ಹಾಗೂ ತಾಳ್ಮೆಯನ್ನು ಶ್ರೀ ಮಂಜುನಾಥ ಸ್ವಾಮಿ ದಯಪಾಲಿಸಲೆಂದು ಕೋರುತ್ತೇನೆ ಎಂದು ಅವರು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

