ಕಣ್ಣಿನ ಅಂಚಲಿ ಕಾಮನಬಿಲ್ಲಿನ ಭರವಸೆ ಮೂಡಿದೆ,
ರೆಪ್ಪೆಯ ಮರೆಯಲ್ಲಿ ಪರಮಾತ್ಮನ ರೂಪ ಅಡಗಿದೆ ll೦೧ll
ಧರ್ಮದ ಹಾದಿಯು ಮಸುಕಾದ ಕಾಲದಿ ನೀ ಬರುವೆ,
ನನ್ನ ಅಂತರಂಗದ ಕತ್ತಲೆಯನು ಬೆಳಕಾಗಿ ಸುಡುವೆ ll೦೨ll
ಕೊಳಲಿನ ನಾದದಿ ಜಗತ್ತಿನ ನೋವನು ಮರೆಸುವೆ,
ಮಂದಹಾಸದಲಿ ಮಧುರವಾದ ಪ್ರೀತಿಯ ಹರಿಸುವೆ ll೦೩ll
ಅರ್ಜುನನ ಸಾರಥಿಯಾಗಿ ಅಂದು ಜಯವ ತಂದೆ,
ನನ್ನೀ ಬದುಕಿನ ನೌಕೆಗೆ ಇಂದು ನೀನೇ ದೋಣಿ ನಡೆಸೋ ತಂದೆ ll೦೪ll
ಯದಾ ಯದಾ ಹಿ ಧರ್ಮಸ್ಯ... ಎಂಬ ನಿನ್ನ ಮಾತೇ ಸತ್ಯ,
ನಿನ್ನ ನೆನಪೇ ಸಾಕು ಹರಿಸಲು ಹೃದಯದಿ ನೃತ್ಯ ll೦೫ll
ಈ ಕಣ್ಣಿನ ನೋಟವು ನಿನ್ನಲ್ಲೇ ಕೊನೆಯಾಗಲಿ ಕೃಷ್ಣಾ,
ನಿನ್ನ ಪಾದದ ಧೂಳಿನಲಿ ನನ್ನ ಬದುಕು ಪಾವನವಾಗಲಿ ಕೃಷ್ಣಾ ll೦೬ll
- ಶರಣೆ: ಕುಮಾರಿ ರೂಪಾ ಬಿ. ನಾಟೀಕಾರ ಮುದ್ದೇಬಿಹಾಳ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


