ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ: ಕಿರುಷಷ್ಠಿ ಪ್ರಯುಕ್ತ ಸಾಂಸ್ಕೃತಿಕ ಸಂಭ್ರಮ

Upayuktha
0


ಕಾಸರಗೋಡು: ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಿರುಷಷ್ಠಿ ಉತ್ಸವದ ಪ್ರಯುಕ್ತ ವೈಭವದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಡಾ. ವಾಣಿಶ್ರೀ ಕಾಸರಗೋಡು ಅವರ ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ (ರಿ.), ಕಾಸರಗೋಡು ವತಿಯಿಂದ ಸಂಸ್ಥೆಯ 150ನೇ ಸಾಹಿತ್ಯ–ಗಾನ–ನೃತ್ಯ ವೈಭವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.


ಕಾರ್ಯಕ್ರಮಕ್ಕೆ ಸುಂದರ ಶೆಟ್ಟಿ ಸ್ವಾಗತಿಸಿದರು. ಡಾ. ವಾಣಿಶ್ರೀ ಅವರು ಸಾಹಿತ್ಯ ಪ್ರಸ್ತುತಿ ನೀಡಿದರು. ವಿಶ್ವನಾಥ ಪುತ್ತಿಗೆ, ಮಧುಲತಾ ಪುತ್ತೂರು, ಮುರಳಿ ನೀರ್ಚಾಲ್ ಹಾಗೂ ಮೇಘರಾಜ್ ಆಚಾರ್ಯ ಅವರಿಂದ ಗಾನ ವೈಭವ ನಡೆಯಿತು. ಮೋಕ್ಷ–ಮುಕ್ತಿ ಸಹೋದರಿಯರ ಜೋಡಿ ಯೋಗ ನೃತ್ಯ ಹಾಗೂ ಮಾನ್ವಿ ಪ್ರಸಾದ್ ಅವರ ಯೋಗ ನೃತ್ಯ ವಿಶೇಷ ಗಮನ ಸೆಳೆಯಿತು.


ಸಂಸ್ಥೆಯ ಕಲಾವಿದರಾದ ಶರಣ್ಯ ಶೆಟ್ಟಿ, ಪೂಜಾಶ್ರೀ, ಶಿವಪ್ರಿಯಾ, ಹಶ್ವಿಕ್, ಹಶ್ವಿನ್, ನವ್ಯಶ್ರೀ, ದಿಯಾ, ಯೆಶಿಕ, ಜಿಯಾ, ದಾಕ್ಷಾಯಿಣಿ, ಧಾನ್ವಿಕಾ, ಗೌತಮಿ, ತನುಶ್ರೀ, ಶ್ರೇಯ, ಶಿವಾನಿ, ಮೇಧಾ, ಪೂರ್ವಾಂಕ, ಹಂಶಿತ್, ಬೃತಿ, ಸಾನ್ವಿಕ ಸೇರಿದಂತೆ ಹಲವರು ತಮ್ಮ ಪ್ರತಿಭೆ ಪ್ರದರ್ಶಿಸಿದರು.


ಈ ಸಂದರ್ಭದಲ್ಲಿ ಡಾ. ವಾಣಿಶ್ರೀ ಅವರಿಗೆ ದೇವರ ಫಲ–ಪುಷ್ಪ–ಪ್ರಸಾದ ನೀಡಿ ಗೌರವಿಸಲಾಯಿತು. ಅರ್ಜುನಗುಳಿ ಶಂಕರ್ ನಾರಾಯಣ ಭಟ್ ಅವರ ಪ್ರಾಯೋಜಕತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಎಲ್ಲಾ ಕಲಾವಿದರಿಗೆ ಗೌರವ ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು. ವೇದಿಕೆಯಲ್ಲಿ ಸುಂದರ ಶೆಟ್ಟಿ, ಅಚ್ಯುತ ಭಟ್ ಹಾಗೂ ಕೆ.ಕೆ. ಮಯ್ಯ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top