ಹಬ್ಬ ಇದು ನಮ್ಮ ಸಂಸ್ಕೃತಿ, ನಮ್ಮ ಪರಂಪರೆ. ಹಬ್ಬಗಳು ಮನುಷ್ಯ ಜೀವನಕ್ಕೆ ಉಲ್ಲಾಸ, ಆನಂದವನ್ನು ತಂದುಕೊಡುತ್ತದೆ.ನಮ್ಮ ಭಾರತ ದೇಶ ಸಂಸ್ಕೃತಿ, ಹಿರಿಮೆಯ ತಾಯಿನಾಡು.ಹಬ್ಬಗಳು ಬಂದರೆ ಸಾಕು ಉಲ್ಲಾಸ ಉತ್ಸಾಹ ಇದ್ದೆ ಇರುತ್ತದೆ. ದೇವರ ಪೂಜೆ ಮಾಡುವ ಮೂಲಕ ಮನಸ್ಸಿಗೆ ನೆಮ್ಮದಿ, ಶಾಂತಿ ಮೂಡುತ್ತದೆ. ಎಲ್ಲಾ ಹಿಂದೂ ಬಾಂಧವರಿಗೆ ಸಡಗರವೋ ಸಡಗರ.ಹಬ್ಬದ ದಿನಗಳು ಹತ್ತಿರ ಬಂದರೆ ಮನೆ ಅಲ್ಲಿ ತಯಾರಿಗಳು ಪ್ರಾರಂಭವಾಗುತ್ತದೆ.ಹಬ್ಬದ ವಾತಾವರಣ ಎಲ್ಲೆಡೆ ಮನೆ ಮಾಡುತ್ತಿರುತ್ತದೆ.
ದೀಪಾವಳಿ, ಉಗಾದಿ, ಗಣೇಶ ಚತುರ್ಥಿ, ಈದ್, ಕ್ರಿಸ್ಮಸ್ ಹೀಗೆ ಹಲವಾರು ಹಬ್ಬಗಳು ನಮ್ಮ ಭಾರತ ದೇಶದಲ್ಲಿ ಇವೆ. ಹಬ್ಬಗಳು ನಮ್ಮ ಜೀವನದಲ್ಲಿ ಸಂತೋಷ ಮತ್ತು ಉತ್ಸಾಹ ತುಂಬುವ ವಿಶೇಷ ದಿನಗಳು.ಇಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತ, ಸಿಖ್ ಎಲ್ಲ ಧರ್ಮಗಳ ಜನರು ತಮ್ಮ ತಮ್ಮ ಹಬ್ಬಗಳನ್ನು ಬಹಳ ಉತ್ಸಾಹದಿಂದ ಆಚರಿಸುತ್ತಾರೆ.
ಶ್ರಾವಣ ಮಾಸ ಬಂದರೆ ಹಬ್ಬಗಳ ಸರಮಾಲೆಗಳೇ. ನಾಗರ ಪಂಚಮಿ ಹಬ್ಬ ಬಂದರೆ ಮತ್ತೆ ಉಳಿದ ಎಲ್ಲಾ ಹಬ್ಬಗಳಿಗೆ ಆಮಂತ್ರಣ ಕೊಟ್ಟಹಾಗೆ. ಆಗಸ್ಟ್ ತಿಂಗಳು ಬಂದರೆ ಹಬ್ಬಗಳ ಉತ್ಸವ ಶುರು. ಗಣೇಶ ಚತುರ್ಥಿ ಬಂದರೇ ಊರಿನಲ್ಲಿ ಹಬ್ಬ. ಗಣೇಶನ ಮೆರವಣಿಗೆ ನೋಡುವುದೇ ಒಂದು ಖುಷಿ.ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಲ್ಲಿ ಹಾಗೂ ಉತ್ತರ ಕನ್ನದಲ್ಲಿ ಹಬ್ಬ ಆಚರಿಸುವ ವಿಧಾನವೇ ಬೇರೆ ರೀತಿ ಅಲ್ಲಿ ಇರುತ್ತದೆ.ಹಬ್ಬಗಳು ಬಂದರೆ ವಿಧ ವಿಧ ರೀತಿಯ ತಿನಿಸುಗಳು ಇರುತ್ತದೆ. ಹಬ್ಬದ ದಿನಾವಂತೂ ಹೊಟ್ಟೆ ಹಸಿವುದು ಒಂದು ತಾಸು ಬೇಗವೆ. ಸಂಬಂಧಿಕರು ಜೊತೆ ಗೂಡಿ ಹಬ್ಬ ಆಚರಿಸುವ ಸುಖ ಸಂತೋಷವೇ ಬೇರೆ. ಹಬ್ಬಗಳು ನಮ್ಮ ಸಮಾಜದಲ್ಲಿ ಒಗ್ಗಟ್ಟನ್ನು ಬೆಳೆಸುವ ಸೇತುವೆಗಳಾಗಿವೆ. ಹಿರಿಯರಿಂದ ಆಶೀರ್ವಾದ ಪಡೆದು, ಮಕ್ಕಳಿಗೆ ಸಂಪ್ರದಾಯಗಳನ್ನು ಪರಿಚಯಿಸುವ ಅವಕಾಶವೂ ದೊರೆಯುತ್ತದೆ.
ಕೃಷ್ಣ ಜನ್ಮಾಷ್ಟಮಿ ಬಂದರೆ ದೇವಸ್ಥಾನ ಅಥವಾ ಮಂದಿರಗಳಲ್ಲಿ ಸ್ವರ್ಧೆ ಗಳ್ಳನ್ನು ಆಯೋಜಿಸುತ್ತಾರೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರಿನವರೆಗೂ ಆ ದಿನ ಆಟವನ್ನು ಆಡಬಹುದು.ನಂತರ ನವರಾತ್ರಿ,ಈ ಹಬ್ಬವನ್ನು ದೇವಿ ದುರ್ಗೆಯ ಆರಾಧನೆಗಾಗಿ ಆಚರಿಸುತ್ತಾರೆ. ದುರ್ಗಾದೇವಿಯ ಒಂಬತ್ತು ರೂಪಗಳನ್ನು ಪ್ರತಿ ದಿನ ವಿಭಿನ್ನವಾಗಿ ಪೂಜಿಸುತ್ತಾರೆ. ನವರಾತ್ರಿಯ ಕೊನೆಯ ದಿನವನ್ನು ವಿಜಯದಶಮಿ ಅಥವಾ ದಸರಾ ಎಂದು ಕರೆಯುತ್ತಾರೆ. ಈ ದಿನ ದುರ್ಗಾದೇವಿ ಮಹಿಷಾಸುರನನ್ನು ಸಂಹರಿಸಿದ ಜಯದ ದಿನವೆಂದು ನಂಬಲಾಗುತ್ತದೆ.ಈ ಹಬ್ಬವನ್ನು ಸಾಮಾನ್ಯವಾಗಿ ಆಶ್ವಯುಜ ಮಾಸದಲ್ಲಿ ಒಂಬತ್ತು ದಿನಗಳ ಕಾಲ ಆಚರಿಸಲಾಗುತ್ತದೆ.
ನಂತರ ದೀಪಾಗಳ ಹಬ್ಬ ದೀಪಾವಳಿ, ಮನೆ ಇಡೀ ಬೆಳಕಿನ ಛಾಯೆಯಲ್ಲಿ ಕುಡಿರುತ್ತದೆ.ಈ ಹಬ್ಬದಲ್ಲಿ ಮನೆಗಳನ್ನು ಸ್ವಚ್ಛಗೊಳಿಸಿ, ಅಲಂಕಾರ ಮಾಡಿ, ಬಣ್ಣರಂಗೋಲಿ ಹಾಕುತ್ತಾರೆ. ದೀಪಗಳನ್ನು ಹಚ್ಚಿ, ಪಟಾಕಿ ಸಿಡಿಸಿ, ಸಿಹಿ ತಿನಿಸುಗಳನ್ನು ತಯಾರಿಸಿ, ಬಂಧುಬಳಗದೊಂದಿಗೆ ಹಂಚಿಕೊಳ್ಳುತ್ತಾರೆ. ವ್ಯಾಪಾರಿಗಳಿಗಾಗಿ ದೀಪಾವಳಿ ಹೊಸ ವರ್ಷದ ಆರಂಭವಾಗಿದ್ದು, ವಿಶೇಷ ಪೂಜೆಗಳನ್ನು ಮಾಡುತ್ತಾರೆ.
ಹಬ್ಬಗಳು ನಮ್ಮ ಜೀವನದಲ್ಲಿ ಸಂತೋಷ, ಪ್ರೀತಿ ಮತ್ತು ಒಗ್ಗಟ್ಟನ್ನು ತಂದುಕೊಡುವ ಅಮೂಲ್ಯ ಕ್ಷಣಗಳಾಗಿವೆ.ಇದು ನಮ್ಮ ಸಂಸ್ಕೃತಿ ಪರಂಪರೆ ಹಾಗೂ ಮೌಲ್ಯಗಳನ್ನು ಇಳಿಸಿಕೊಳ್ಳುವ ದಾರಿಗಳಾಗಿವೆ.
-ಅಂಜಲಿ ಮುಂಡಾಜೆ
ಎಸ್ ಡಿ ಯಂ ಕಾಲೇಜು ಉಜಿರೆ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



