ಮಂಗಳೂರು: “ಸ್ವಯಂಸೇವಕರು ಪರಿಣಾಮ ಕಾರಿ ಬದಲಾವಣೆ ಮೂಲಕ ಹೆಚ್ಚು ಸುಸ್ಥಿರ ಮತ್ತು ಪ್ರಗತಿಪರ ರಾಷ್ಟ್ರವನ್ನು ನಿರ್ಮಿಸಬಲ್ಲರು” ಎಂದು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಹೇಳಿದರು., ಅವರು ಅಂತರರಾಷ್ಟ್ರೀಯ ಸ್ವಯಂಸೇವಕರ ದಿನ 2025 ಮೆಗಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
2.1 ಬಿಲಿಯನ್ ಸ್ವಯಂಸೇವಕರು ಪ್ರತಿಯೊಂದು ಸೇವಾ ಕಾರ್ಯವು ಮುಖ್ಯವೆಂದು ಸಾಬೀತುಪಡಿಸುತ್ತಾರೆ. ಒಟ್ಟಾಗಿ, ನಾವು ಸುಸ್ಥಿರ ಅಭಿವೃದ್ಧಿಯ ಗುರಿ ತಲಪಲು SDG ಗಳಿಗೆ ಹೊಸ ಬದ್ಧತೆಯೊಂದಿಗೆ IYV 2026 ಕ್ಕೆ ಕಾಲಿಡುತ್ತೇವೆ.
ವಿಶೇಷ ಅಂತರರಾಷ್ಟ್ರೀಯ ಮುಖ್ಯ ಅತಿಥಿ: ಕ್ರಿಶ್ಚಿಯನ್ ಹೈನ್ಜ್ಲ್, ಪ್ರಾದೇಶಿಕ ವ್ಯವಸ್ಥಾಪಕ - ಏಷ್ಯಾ ಮತ್ತು ಪೆಸಿಫಿಕ್, ಯುನೈಟೆಡ್ ನೇಷನ್ಸ್ ಸ್ವಯಂಸೇವಕರು, ಬ್ಯಾಂಕಾಕ್. ವಿಶ್ವ ಸಂಸ್ಥೆಯು ಅಂತಾರಾಷ್ಟ್ರೀಯ ಸ್ವಯಂಸೇವಕರ ದಿನ 2025 ವರ್ಷವನ್ನು “ಪ್ರತಿಯೊಂದು ಕೊಡುಗೆಯೂ ಮುಖ್ಯ" ವಾಕ್ಯದೊಂದಿಗೆ ಯುನೈಟೆಡ್ ನೇಷನ್ಸ್ ವಾಲಂಟಿಯರ್ಸ್ (United Nations Volunteers India ) ಇಂಡಿಯಾದ ಸಹಭಾಗಿತ್ವದಲ್ಲಿ ಯುವನಿಕಾ ಫೌಂಡೇಶನ್ ಮತ್ತು ಆರೋಗ್ಯ ಸ್ವಯಂಸೇವಕರು ಮತ್ತು ಮಂಗಳೂರಿನ ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮವು 1,200 ಕ್ಕೂ ಹೆಚ್ಚು ಯುವಕರು ಮತ್ತು ಸ್ವಯಂಸೇವಕರನ್ನು ಒಟ್ಟುಗೂಡಿಸಿ, ನಾಯಕತ್ವ, ಸೇವೆ ಮತ್ತು ಜಾಗತಿಕ ಪೌರತ್ವದ ಮನೋಭಾವವನ್ನು ಆಚರಿಸಿತು.
ಗೌರವಾನ್ವಿತ ಅತಿಥಿ ಶ್ರೀ ಐವಾನ್ ಡಿ'ಸೋಜಾ, ಎಂಎಲ್ಸಿ, ಅಂತರರಾಷ್ಟ್ರೀಯ ಸ್ವಯಂಸೇವಕರ ದಿನದ ಮಹತ್ವದ ಕುರಿತು ಸ್ಪೂರ್ತಿದಾಯಕ ಭಾಷಣ ಮಾಡಿದರು, ಸ್ವಯಂಸೇವಕರು ಸಹಾನುಭೂತಿ, ಜವಾಬ್ದಾರಿ ಮತ್ತು ಉದ್ದೇಶದೊಂದಿಗೆ ಮುನ್ನಡೆಸಲು ಪ್ರೇರೇಪಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ಸಹಾಯಕ ಆಯುಕ್ತೆ ಸೌ. ಮೀನಾಕ್ಷಿ ಆರ್ಯಾ (ಐ. ಎ. ಎಸ್) ಅವರು, ಸ್ವಯಂಸೇವೆ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ತಿಳಿಸಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೇಂಟ್ ಆಗ್ನೆಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ. ವೆನಿಸ್ಸಾ ಎ.ಸಿ. ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳುಶ್ರೀ ಎಂ. ಜೈಕಿಶನ್ ಭಟ್, ಪ್ರಾಂಶುಪಾಲರು, ಕರಾವಳಿ ಸಂಸ್ಥೆ ಮತ್ತು ಸಹಾಯಕ ಪ್ರಾಧ್ಯಾಪಕರು, ಪಿಐಎಂ ಉಡುಪಿ ಕಾರ್ಯಕ್ರಮವನ್ನು ನಡೆಸಿದರು. ಅಂತರರಾಷ್ಟ್ರೀಯ ಸ್ವಯಂಸೇವಕರ ದಿನ 2025 ಕಾರ್ಯಕ್ರಮ ಸಂಯೋಜಕರು, ರಘುವೀರ್ ಸೂಟರ್ ಪೇಟೆ , ಯುವನಿಕಾ ಫೌಂಡೇಶನ್, ಪ್ರಾಸ್ತಾವಿಕ ಮಾತಿನಲಿ ಕಾರ್ಯಕ್ರಮದ ಮಹತ್ವದ ಕುರಿತು ಮಾಹಿತಿಯನ್ನು ನೀಡಿದರು ಹಂಚಿಕೊಂಡರು.
ಆರೋಗ್ಯ ಸ್ವಯಂಸೇವಕರ ನಿರ್ದೇಶಕಿ ರಿಷಿ ಬನ್ಸಿವಾಲ್, ಸ್ವಯಂಸೇವಕ ಅವಕಾಶಗಳ ಕುರಿತು ಮಾತನಾಡಿದರು.
ಅಂತಾರಾಷ್ಟ್ರೀಯ ಸ್ವಯಂಸೇವಕರ ದಿನ 2025 ದಿನದಂದು, ತಮ್ಮ ವಿಶಿಷ್ಟ ಸೇವಾ ಸಾಧನೆಗಾಗಿ ಹಲವಾರು ಯುವ ಸ್ವಯಂಸೇವಕರನ್ನು ಗೌರವಿಸಲಾಯಿತು. ಕ್ಯಾಡೆಟ್ ಸೆಲಿನ್ ಡಿಸಿಲ್ವಾ (ಆಲ್ ಇಂಡಿಯಾ ವಾಯು ಸೈನಿಕ್ ಕ್ಯಾಂಪ್ – AIVSC), ಕ್ಯಾಡೆಟ್ ಸೋನಾಲ್ ಜೆಸಿಕಾ ಕ್ರಾಸ್ಟಾ (ಪ್ಯಾರಾ ಬೇಸಿಕ್ ಕೋರ್ಸ್, ಸೆಂಟ್ ಆಗ್ನೆಸ್ ಕಾಲೇಜು) ಮತ್ತು ಹಿತೇಶ್ ಬಂಗೇರಾ (ಯೂನಿವರ್ಸಿಟಿ ಕಾಲೇಜು) ಅವರನ್ನು ಅವರ ನಾಯಕತ್ವ ಮತ್ತು ಸ್ವಯಂಸೇವಾ ಸೇವೆಗಾಗಿ ಸನ್ಮಾನಿಸಲಾಯಿತು
ಗಾಯತ್ರಿ ಬಿ. ಕೆ., ಸೇಂಟ್. ಆಗ್ನೆಸ್ ಕಾಲೇಜು, ಕಾರ್ಯಕ್ರಮವನ್ನು ಸಂಯೋಜಿಸಿ ಧನ್ಯವಾದಗಳನ್ನು ಅರ್ಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


