ಹಳೆಯ ನೆನಪು ಮರುಕಳಿಸಿದಾಗ ಮರಳಿ ಬಾಲ್ಯ ಪ್ರಾಪ್ತಿ: ಡಾ ಸುರೇಶ ನೆಗಳಗುಳಿ

Upayuktha
0


 


ಉಡುಪಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಪ್ರಜ್ಯೋತಿ ಸಮಾವೇಶವು ನವೆಂಬರ 30 ರಂದು ಕಾಲೇಜು ಸಭಾಭವನ ಭಾವಪ್ರಕಾಶದಲ್ಲಿ ಅದ್ದೂರಿಯಾಗಿ ನಡೆಯಿತು.


ಬೆಂಗಳೂರಿನ ಪ್ರಶಾಂತಿ ಆಯುರ್ವೇದ ಸಂಸ್ಥೆಯ ಮುಖ್ಯಸ್ಥ ಡಾ ಗಿರಿಧರ ಕಜೆಯವರು ಮುಖ್ಯ ಅತಿಥಿಗಳಾಗಿ ಆಯುರ್ವೇದದ ಹಿರಿಮೆಯ ಬಗ್ಗೆ ಹಾಗೂ  ಡಿಸೆಂಬರ್ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ನಡೆಯುವ ವಿಶ್ವ ಆಯುರ್ವೇದ ಸಮ್ಮೇಳನದ ಪೂರ್ಣ ಮಾಹಿತಿ ನೀಡಿದರು.


ಇನ್ನೋರ್ವ ಮುಖ್ಯ ಅತಿಥಿ ಮಂಗಳೂರಿನ ಕಣಚೂರು ಆಯುರ್ವೇದ ಕಾಲೇಜಿನ ಮುಖ್ಯ ಸಲಹೆಗಾರ ಡಾ ಸುರೇಶ ನೆಗಳಗುಳಿ ಅವರು ಪ್ರಜ್ಯೋತಿ ಪತ್ರಿಕೆ ಲೋಕಾರ್ಪಣೆ ಮಾಡಿ ಹಳೇವಿದ್ಯಾರ್ಥಿಗಳಿಗೆ ತಮ್ಮ ಸಂಸ್ಥೆಗೆ ನೀಡುವ ಭೇಟಿ ಹೊಸ ಚೈತನ್ಯ ನೀಡುವುದಾಗಿ ಹೇಳಿದರು.


ಇದೇ ವೇಳೆ ಡಾ ಪೂರ್ಣಿಮಾ ಭಟ್ ಬರೆದ 'ಕನ್ನಲಿಯ ಕನಾ ಕನಾ' ಎಂಬ ವೈದ್ಯೆಯ ಹಳ್ಳಿ ಅನುಭವ ಕಥನ -ಮಿನಿ ಕಥೆಗಳ ಸಂಕಲನವನ್ನು ಸಹ ಲೋಕಾರ್ಪಣೆ ಮಾಡಲಾಯಿತು.


ಇವರಲ್ಲದೆ ಸಭಾಧ್ಯಕ್ಷತೆ ವಹಿಸಿದ್ದ ಪ್ರಜ್ಯೋತಿ ಅಧ್ಯಕ್ಷ ಪುತ್ತೂರಿನ ಡಾ ಶಶಿಧರ ಕಜೆ  ಸಾಂದರ್ಭಿಕವಾಗಿ ಮಾತನಾಡಿದರು. ಕಾಲೇಜು ಪ್ರಾಚಾರ್ಯೆ ಡಾ ಮಮತಾ ಅವರು ಮಾತನಾಡಿ ಸಂಸ್ಥೆಯ ಸಾಧನೆಗಳನ್ನು ವಿವರಿಸಿದರು, ಕಾರ್ಕಳದ ಡಾ ಭರತೇಶ್, ಡಾ ರವಿ ರಾವ್, ಡಾ ನಾಗರಾಜ್, ಡಾ ವ್ಯಾಸರಾಯ ತಂತ್ರಿ ಮತ್ತಿತರರು ವೇದಿಕೆಯಲ್ಲಿದ್ದರು.


ಡಾ ಕೆ ಆರ್ ರಾಮಚಂದ್ರ, ಡಾ ಕೆ ಎಲ್ ಉಪಾಧ್ಯ, ಡಾ ಶ್ರೀಕಾಂತ್ ಯು, ಡಾ ಮುರಳಿಧರ ಶರ್ಮ, ಡಾ ಗಿರಿಧರ ಕಂಠಿ, ಡಾ ಬಾಲಕೃಷ್ಣ ಭಟ್ ಡಾ ಕೃಷ್ಣ ಗೋಖಲೆ, ಡಾ ಪ್ರಭಾಕರ ಉಪಾಧ್ಯಾಯ, ಡಾ ನಾರಾಯಣ ಅಂಚನ್ ಮತ್ತಿತರರು ಭಾಗವಹಿಸಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top