ಹಳ್ಳಿ ಜೀವನ ಹಳ್ಳಿಯಲ್ಲಿ ಆಧುನಿಕ ಸೌಲಭ್ಯ ಇಲ್ಲದಿದ್ದರು ಶುದ್ಧ ಗಾಳಿ, ಶುದ್ಧ ನೀರು ಹಾಗೂ ಆಹಾರ ಇದೆಲ್ಲವೂ ಒಳ್ಳೆ ಗುಣಮಟ್ಟದಲ್ಲೇ ಸಿಗುತ್ತದೆ. ಹಳ್ಳಿ ಜೀವನದ ಸೊಬಗೆ ಬೇರೆ. ಹಳ್ಳಿ ಎಂದರೆ ಸುಖ ಕಾಣುವ ಜನರು ಇದ್ದಾರೆ. ಹಳ್ಳಿ ಜನರು ಸುಮ್ಮನೆ ಕೂರುವ ಪದ್ಧತಿಯೇ ಇಲ್ಲ ಯಾಕೆಂದರೆ ಬೆಳ್ಳಿಗೆ ಇಂದ ಸಂಜೆ ತನಕ ಮೈ ಬಗ್ಗಿಸಿ ಕೆಲಸ ಮಾಡಿದರೆ ಮಾತ್ರವೇ ನೆಮ್ಮದಿಯ ನಿದ್ರೆ ಹಾಗೂ ತೃಪ್ತಿ ಸಿಗುವುದು. ಪ್ರಕೃತಿಯ ಜೊತೆಯೇ ಇಡೀ ದಿನವನ್ನು ಹಳ್ಳಿಯಲ್ಲಿ ಕಳೆಯಬಹುದು. ಬಹುಪಾಲು ಜನರು ಹಳ್ಳಿ ಜೀವನ ವನ್ನೇ ಇಷ್ಟ ಪಡುತ್ತಾರೆ. ಹಳ್ಳಿ ಎಂದರೆ ಒಂದೇ ಕುಟುಂಬದಲ್ಲಿ ಇರುವ ಜನಗಳು.ಕೃಷಿ, ಕಾಡು, ಪ್ರಾಣಿ, ಪಕ್ಷಿ, ನೆಲ-ಜಲ ಇದುವೇ ಹಳ್ಳಿಯ ಮೂಲ.
ಹಳ್ಳಿಯ ಒಲವು ನೆಮ್ಮದಿಯ ಬದುಕು
ಪೇಟೆ ಜೀವನಕ್ಕೆ ಹೋಲಿಸಿದರೆ ನಮಗೆ ನಮ್ಮ ಹಳ್ಳಿ ಜೀವನವೇ ಸುಖ. ಹಳ್ಳಿ ಜೀವನದಲ್ಲಿ ಆಚಾರ – ವಿಚಾರಗಳನ್ನು ಹೆಚ್ಚು ನಂಬುತಾರೆ. ದೈವ ದೇವರುಗಳ ಆಚರಣೆ ತುಂಬಾ ಭಕ್ತಿ ಪೂರಕವಾಗಿ ನೆರೆವೆರಿಸುತ್ತಾರೆ. ಹಬ್ಬ ಹರಿದಿನ ಬಂದರೆ ಇಡೀ ಸಂಭ್ರಮದ ಬೆಳಕೇ ಇಡೀ ಹಳ್ಳಿಯಲ್ಲಿ ಜರಾಗುತ್ತದೆ. ಹಳ್ಳಿಯಲ್ಲಿ ಸಂಸ್ಕೃತಿ ಸಂಪ್ರದಾಯಕ್ಕೆ ಹೆಚ್ಚು ಮಹತ್ವ ಕೊಡುತ್ತಾರೆ. ಹಸು, ಕೋಳಿ,ಆಡು ಇವೆಲ್ಲ ಸಾಕುವುದು ಹಳ್ಳಿಯ ಆದಾಯ ಸಂಪತ್ತು. ಹಸಿರು ಹೊಲ, ಶುದ್ಧ ಮಣ್ಣು ಎಲ್ಲಾ ನೈಸರ್ಗಿಕವಾಗಿ ಹಳ್ಳಿ ಯಲ್ಲಿ ಸಿಗುತ್ತದೆ. ವಿಶೇಷ ಆಟಗಳು ಹಳ್ಳಿಯಲ್ಲಿ ಕಾಣಬಹುದು, ಸಣ್ಣ ಮಕ್ಕಳ ಆರೈಕೆ ವಿಧಾನ ಲಾಲನೆ ಪಾಲನೆ ಹಳ್ಳಿಯ ಅಜ್ಜಿಯಾರಿಂದ ಕಳಿಯಬಹುದು.
ಬೆಂಗಳೂರಿನಂಥ ಪೇಟೆಗಳಲ್ಲಿ ನಮ್ಮ ಹಳ್ಳಿ ಜನರಿಗೆ ದಿನ ತೆಗಿಯುವುದೇ ಒಂದು ಸವಾಲು ಏಕೆಂದರೆ ಪೇಟೆಯಲ್ಲಿ ಮೈ ಬಗ್ಗಿಸಿ ಕೆಲಸ ಮಾಡುವ ಪ್ರಕ್ರಿಯೆ ಇಲ್ಲ. ಒತ್ತಡದ ಪರಿಸರ ಶುದ್ಧವಾದ ನೀರು, ಗಾಳಿ, ಆಹಾರ ಯಾವುದು ಸಹ ಒಳ್ಳೆ ಗುಣ ಮಟ್ಟದಲ್ಲಿ ಸಿಗುವುದು ಕಷ್ಟವೇ. ಟ್ರಾಫಿಕ್ ಸದ್ದು ಅಂತೂ ಇಂತು ನಾಲ್ಕು ಗೋಡೆಯ ಮಧ್ಯ ಇರುವ ಅನುಭವವಾಗುತ್ತದೆ. ಪೇಟೆಯಲ್ಲಿ ಆದಾಯ ಸಿಕ್ಕರು ನೆಮ್ಮದಿ ಸಮಯ ಕಮ್ಮಿ, ಆದರೆ ಹಳ್ಳಿಯಲ್ಲಿ ಎಷ್ಟೇ ದುಡಿದರು ಪರಿಶ್ರಮ ಪಟ್ಟರು ಖಂಡಿತವಾಗಿ ನೆಮ್ಮದಿ ಸಿಕ್ಕೇಸಿಗುತ್ತದೆ.
ನಮಗೆ ಎಷ್ಟೇ ಇದ್ದರು ನಮ್ಮ ಹಳ್ಳಿ ಜೀವನವೇ ಆನಂದ. ಒಂದು ಹೊತ್ತು ಅನ್ನ ಎಲ್ಲದಿದ್ದರು ಹಳ್ಳಿಯಳ್ಳಿ ಸುಖಕ್ಕೆ ಯಾವತ್ತು ಕೊರತೆ ಬರವುದಿಲ್ಲ.
ಎಸ್ ಡಿ ಯಂ ಕಾಲೇಜು ಉಜಿರೆ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



