ಮಂಗಳೂರು: ಅವಿಭಜಿತ ದ.ಕ. ಜಿಲ್ಲೆಯ ಜನತೆಯೂ ಕಲೆ, ಸಂಸ್ಕೃತಿ, ಸಂಗೀತವನ್ನು ಆರಾಧಿಸುವವರಾಗಿದ್ದು ಕಲಾವಿದರಿಗೆ ಅವರು ನೀಡುವ ಗೌರವ, ಪ್ರೋತ್ಸಾಹ ಬೇರೆಲ್ಲೂ ಕಾಣಸಿಗದು. ಈ ಜಿಲ್ಲೆಯ ಜನರ ಪ್ರೀತಿ, ಹೃದಯ ಶ್ರೀಮಂತಿಕೆಗೆ ನಾನು ಮಾರುಹೋಗಿದ್ದೇನೆ ಎಂಬುದಾಗಿ ಕರ್ನಾಟಕ ಕಲಾಶ್ರೀ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ನಿವೃತ್ತ ಉಡುಪಿಯ ಜಿಲ್ಲಾಧಿಕಾರಿಗಳೂ ಆಗಿರುವ ಡಾ. ಮುದ್ದು ಮೋಹನ್ ಅವರು ತಿಳಿಸಿದರು.
ಕಾಂತಾವರ ಕನ್ನಡ ಸಂಘದ 50ರ ಸಂಭ್ರಮದ ಪ್ರಯುಕ್ತ ಕಾರ್ಕಳದ ಶಾಸ್ತ್ರೀಯ ಸಂಗೀತ ಸಭಾದ ಸಹಯೋಗದಲ್ಲಿ ಅವರಿಂದ ಡಿ. 20ರಂದು ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಭವನದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಮತ್ತು ಭಕ್ತಿ ಸಂಗೀತ ಕಾರ್ಯಕ್ರಮಕ್ಕೆ ಮುನ್ನ ಅವರು ಮಾತನಾಡಿದರು.
ಶಾಸ್ತ್ರೀಯ ಸಂಗೀತ ಸಭಾ ಇದರ ಸ್ಥಾಪಕ ಕಾರ್ಯದರ್ಶಿ ಡಾ. ಪ್ರಕಾಶ್ ಶೆಣೈಯವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಾ. ಮುದ್ದು ಮೋಹನ್ ಅವರಿಗೆ ಸಹ ವಾದ್ಯ ಸಹಾಯಕರಾಗಿ ಹಾರ್ಮೋನಿಯಂನಲ್ಲಿ ಪಂಚಾಕ್ಷರಿ ಹಿರೇಮಠ, ತಬಲಾದಲ್ಲಿ ಕೇಶವ ಜೋಶಿ ಬೆಂಗಳೂರು, ವಯಲಿನ್‍ನಲ್ಲಿ ಟಿ. ರಂಗ ಪೈ, ತಂಬೂರಿಯಲ್ಲಿ ಉಡುಪಿಯ ಸಪ್ನಾರಾಜ್ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಮುನ್ನ ಐದು ಕಲಾವಿದರನ್ನು ಕೂಡಾ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಮಿತ್ರಪ್ರಭಾ ಹೆಗ್ಡೆ, ದಿವಾಕರ್ ಕುಮಾರ್, ರತ್ನಾಕರ ಹೆಬ್ಬಾರ್ ಮುಂತಾದವರು ಉಪಸ್ಥಿತರಿದ್ದರು. ಸದಾನಂದ ನಾರಾವಿ ಕಾರ್ಯಕ್ರಮ ನಿರ್ವಹಿಸಿದರು. ಡಾ. ನಾ.ಮೊಗಸಾಲೆ ಸ್ವಾಗತಿಸಿ ನಿತ್ಯಾನಂದ ಪೈ ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


