ಮಂಗಳೂರು: ಮಂಗಳೂರಿನ ಪ್ಲಾಂಟರ್ಸ್ ಲೇನ್ ನಿವಾಸಿ, ಕಲ್ಕೂರ ಪ್ರತಿಷ್ಠಾನ, ಬಲ್ಮಠ ಸರಕಾರಿ ಶಾಲಾ ಹಳೆ ವಿದ್ಯಾರ್ಥಿ ಸಂಘ, ಕದ್ರಿಯ ಸೌರಭ ಕಲಾವಿದರು ಸಂಸ್ಥೆಗಳ ಸಕ್ರಿಯ ಕಾರ್ಯಕರ್ತ ಟಿ. ನಾಗರಾಜ್ ರಾವ್ (63)ಇಂದು ನಿಧನರಾದರು.
ರಾಜ್ಯ ಮಟ್ಟದ ಪೋಲ್ ವಾಲ್ಟ್ ಪಟುವಾಗಿ ವಿದ್ಯಾರ್ಥಿ ಜೀವನದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಅನೇಕ ಬಹುಮಾನಗಳನ್ನು ಪಡೆದಿದ್ದರು. ರಂಗ ನಟರಾಗಿ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದರು.
ಬಾಲ್ಯ ಗೆಳೆಯರಾದ ಕದ್ರಿ ನವನೀತ ಶೆಟ್ಟಿ ಅವರ ಜೊತೆ ಸೇರಿ ದೇವದಾಸ್ ಕಾಪಿಕಾಡ್ ಅವರಿಗೆ "ತೆಲಿಕೆದ ಬೊಳ್ಳಿ" ಪ್ರಶಸ್ತಿ ನೀಡಿದ್ದರು. ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ, ಟೆಕ್ ಷೆರ್ ಇನ್ವರ್ಟರ್, ಕಲ್ಕೂರ ಆಡ್ವರ್ ಟೈಸರ್ಸ್ ಹಾಗೂ ನಮ್ಮ ಕುಡ್ಲ ವಾಹಿನಿ ಮಾರ್ಕೆಟಿಂಗ್ ವಿಭಾಗದಲ್ಲಿ ಸೇವೆ ಸಲ್ಲಿಸಿ ವಿಶ್ರಾಂತ ಜೀವನ ನಡೆಸುತಿದ್ದರು.
ತ್ರಿಶೂಲೇಶ್ವರ ಶ್ರೀನಿವಾಸ ರಾವ್ ಕುಟುಂಬದ ಗಣಪತಿ ಉತ್ಸವವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು.
ಪ್ರದೀಪ ಕುಮಾರ ಕಲ್ಕೂರ, ಕದ್ರಿ ನವನೀತ ಶೆಟ್ಟಿ, ಲೀಲಾಕ್ಷ ಬಿ. ಕರ್ಕೇರ, ದೇವದಾಸ್ ಕಾಪಿಕಾಡ್, ಡಾ. ರಾಧಾಕೃಷ್ಣ ರಾವ್ ಮೊದಲಾದವರು ಸಂತಾಪ ವ್ಯಕ್ತ ಪಡಿಸಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ನಾಳೆ ಬೆಳಿಗ್ಗೆ ಕದ್ರಿ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

