ಮಂಗಳೂರು: "ಕಲೆಗಳೆಲ್ಲಾ ನಮ್ಮ ಸಂಸ್ಕೃತಿಯ ವಿವಿಧ ಮುಖಗಳು. ಅದರ ಆರಾಧನೆಯಿಂದ ಕಲಾವಿದರಾದ ನಾವು ಬೆಳಗುತ್ತೇವೆ. ಸರ್ವಸಮರ್ಪಣಾ ಭಾವದಿಂದ ನಾನು ನನ್ನನ್ನು ಶ್ರೀಕ್ಷೇತ್ರ ಧರ್ಮಸ್ಥಳ ಮೇಳದಲ್ಲೇ ತೊಡಗಿಸಿಕೊಂಡೆ. ಸಂತಸವನ್ನು ಪಡೆದೆ. ಇದೀಗ ಐವತ್ತೊಂದು ವರ್ಷದ ತಿರುಗಾಟದಲ್ಲಿದ್ದೇನೆ. ಯಕ್ಷಗಾನ ನನಗೆ ಎಲ್ಲವನ್ನೂ ನೀಡಿದೆ" ಎಂದು ಹಿರಿಯ ಯಕ್ಷಗಾನ ಕಲಾವಿದ ವಸಂತ ಗೌಡ ಕಾಯರ್ತಡ್ಕ ಸಂತೃಪ್ತಿ ವ್ಯಕ್ತಪಡಿಸಿದರು.
ಅವರು ಅಲೆವೂರಾಯ ಪ್ರತಿಷ್ಠಾನದಿಂದ ಮಂಗಳಾದೇವಿ ದೇವಸ್ಥಾನದಲ್ಲಿ ನಡೆದ "ಯಕ್ಷ ತ್ರಿವೇಣಿ"ಯ ಸಂದರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಲೋಕಾಯುಕ್ತ ಇನ್ಸ್ಪೆಕ್ಟರ್ ಚಂದ್ರಶೇಖರ್ ರವರು ವಸಂತಗೌಡರ ತಿರುಗಾಟ, ಅವರು ನಿರ್ವಹಿಸುವ ಭಿನ್ನ ಭಿನ್ನ ಪಾತ್ರಗಳ ಬಗ್ಗೆ ಮೆಚ್ಚುಗೆ ಸೂಸಿ ಅವರನ್ನು ಅಭಿನಂದಿಸಿದರು.
ತುಳುಕೂಟದ ಅಧ್ಯಕ್ಷೆ ಹೇಮಾ ದಾಮೋದರ ನಿಸರ್ಗ, ಉಳ್ಳಾಲ ಪುರಸಭೆಯ ಅಧಿಕಾರಿ ರವಿಕೃಷ್ಣ ದಂಬೆ ಉಪಸ್ಥಿತರಿದ್ದರು. ಸಂಘಟಕ ಪೇಜಾವರ ಸುಧಾಕರ ರಾವ್ ನಿರ್ವಹಿಸಿದರೆ, ಯಕ್ಷ ಮಂಜುಳಾದ ಸದಸ್ಯೆ ಪೂರ್ಣಿಮಾ ಪ್ರಶಾಂತ ಶಾಸ್ತ್ರಿ ಅಭಿನಂದನಾ ಪತ್ರ ವಾಚಿಸಿದರು. ಪ್ರತೀಕ್ ರಾವ್ ಧನ್ಯವಾದವಿತ್ತರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ
