ಸುರತ್ಕಲ್: ಸುರತ್ಕಲ್ ರೋಟರಿ ಕ್ಲಬ್ ವತಿಯಿಂದ ಒತ್ತಡ ನಿರ್ವಹಣೆ ವಿಶೇಷ ಉಪನ್ಯಾಸ ಕಾರ್ಯಕ್ರಮವು ನಡೆಯಿತು. ದುಬಾಯಿಯ ಸಿಎನ್ಎಸ್ ಎಲ್ಎಲ್‌ಸಿ ಸಂಸ್ಥೆಯ ಬಿಸಿನೆಸ್ ಆಪರೇಷನ್ಸ್ ಮ್ಯಾನೇಜರ್ ಯೋಗಿತಾ ಕೃಷ್ಣಾಪುರ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ನಾವು ಮಾಡುವ ವೃತ್ತಿ ಯನ್ನು ಪ್ರೀತಿಸಿ, ಸವಾಲುಗಳನ್ನು ಸಮಸ್ಯೆಯನ್ನಾಗಿ ಭಾವಿಸದೆ ಪರಿಹಾರಗಳಿವೆಂಬ ಸಕಾರತ್ಮಕ ಭಾವನೆಯಿಂದ ಪರಿಭಾವಿಸಿದಾಗ ಒತ್ತಡ ನಿರ್ವಹಣೆ ಸಾಧ್ಯ ಎಂದು ನುಡಿದರು.
ಸಾಮಾಜಿಕ ಮತ್ತು ಕೌಟುಂಬಿಕ ಸಂಬಂಧಗಳೊಂದಿಗೆ ಸಮಾಜ ಸೇವೆಯ ಪ್ರವತ್ತಿ, ನಿಸರ್ಗದೊಡನೆ ಸಂಸರ್ಗ ಮತ್ತು ತನ್ನೊಳಗಿನ ತನ್ನತನದ ಅರಿವು ಪರಿಣಾಮಕಾರಿ ಜೀವನ ನಿರ್ವಹಣೆಗೆ ಪ್ರೇರಕ ಅಂಶಗಳೆಂದು ಅವರು ಅಭಿಪ್ರಾಯ ನಿರೂಪಿಸಿದರು.
ರೋಟರಿ ಕ್ಲಬ್ ಅಧ್ಯಕ್ಷ ರಾಮಚಂದ್ರ ಬಿ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ನಿಯೋಜಿತ ಅಧ್ಯಕ್ಷ ಶ್ರೀಧರ್ ಟಿ. ಎನ್. ಅತಿಥಿಗಳನ್ನು ಪರಿಚಯಿಸಿದರು. ಕ್ಲಬ್ ಸೇವಾ ನಿರ್ದೇಶಕ ಕೃಷ್ಣಮೂರ್ತಿ ಮತ್ತು ವೃತ್ತಿ ಸೇವಾ ನಿರ್ದೇಶಕಿ ಯಶೋಮತಿ, ಸಾಮಾಜಿಕ ಸೇವಾ ನಿರ್ದೇಶಕ ಚಂದ್ರಕಾಂತ ಮರಾಠೆ ಉಪಸ್ಥಿತರಿದ್ದರು. ಕಾರ್ಯದರ್ಶಿ ರಾಮಮೋಹ ನ್ ವೈ. ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


