ವರ್ಕಾಡಿ: ವರ್ಕಾಡಿ ಶ್ರೀ ಕಾವೀ ಸುಬ್ರಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಷಷ್ಠಿ ಮಹೋತ್ಸವವು ಅತ್ಯಂತ ಶಾಸ್ತ್ರಬದ್ಧವಾಗಿ ಧಾರ್ಮಿಕ, ವೈದಿಕ ವಿಧಿ ವಿಧಾನಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನೊಳಗೊಂಡು ವೈಭವವಾಗಿ ನೆರವೇರಿತು. ಸಹಸ್ರಾರು ಭಕ್ತ ಮಹನೀಯರು ಶ್ರೀ ದೇವರ ದರುಶನ ಪಡೆದು ಅನ್ನ ಪ್ರಸಾದ ಸ್ವೀಕರಿಸಿ ಕೃತರ್ಥರಾದರು.
ಈ ಮಹೋತ್ಸವದ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ (ರಿ.) ಕಾಸರಗೋಡು ಸಂಸ್ಥೆಯ ಸಾಂಸ್ಕೃತಿಕ ಕಲಾ ವೈಭವವು ವೈವಿಧ್ಯಮಯವಾಗಿ ನಡೆದು ನೆರೆದಿರುವ ಕಲಾ ಪ್ರೇಕ್ಷಕರನ್ನು ಮನ ರಂಜಿಸಿತು.
ಗುರುರಾಜ್ ಕಾಸರಗೋಡು ಅವರ ಸಂಯೋಜನೆ ಹಾಗೂ ನಿರೂಪಣೆಯೊಂದಿಗೆ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಸಂಸ್ಥೆಯ ಗೌರವಾಧ್ಯಕ್ಷರು ಶ್ರೀ ಗಣೇಶ್ ಪ್ರಸಾದ್ ಆಳ್ವ, ಕೋಶಾಧಿಕಾರಿ ಶ್ರೀಮತಿ ಶೈಲಜಾ ಹೊಳ್ಳ, ಜೊತೆ ಕಾರ್ಯದರ್ಶಿ ಕುಮಾರಿ ವರ್ಷಾ ಶೆಟ್ಟಿ, ದೇವಸ್ಥಾನದ ಮುಕ್ತೇಸರರು ಶ್ರೀ ಸದಾಶಿವ ನೈಕ್ ಮಂಟಮೆ, ಉತ್ಸವ ಸಮಿತಿ ಅಧ್ಯಕ್ಷರು ಶ್ರೀ ಪುರುಷೋತ್ತಮ ಶೆಟ್ಟಿ ಪಾವಲ, ಸ್ಪಂದನ ಟಿ ವಿ ಚಾನೆಲ್ ನಿರೂಪಕರು ರಂಗಭೂಮಿ ಕಲಾವಿದರು ಶ್ರೀ ನಾಗರಾಜ್ ವರ್ಕಾಡಿ, ಶ್ರೀ ವಿವೇಕ್ ಶೆಟ್ಟಿ ಬೆಟ್ಟುಗೆದ್ದೆ, ಉತ್ಸವ ಸಮಿತಿ ಕಾರ್ಯದರ್ಶಿ ಶ್ರೀ ದಿನೇಶ್ ಭೇರಿಂಜಾ, ಶ್ರೀ ನಿರ್ಮಲಾ ರಾಜೇಶ್ ಮುಂತಾದ ಗಣ್ಯರ ಉಪಸ್ಥಿತರಿದ್ದರು.
ಸಂಸ್ಥೆಯ ಅಪ್ರತಿಮ ನೃತ್ಯ ಕಲಾವಿದರಾದ ಕುಮಾರಿ ಐಶ್ವರ್ಯ ಆರ್ ಪೂಜಾರಿ ಮಂಗಳೂರು ಇವರನ್ನು ಸಂಸ್ಥೆಯ ಪ್ರತಿಷ್ಠಿತ ಪ್ರಶಸ್ತಿಯಾದ ಕಲಾ ಸೌರಭ 2025 ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ನೃತ್ಯದಲ್ಲಿ ಸತತವಾಗಿ 7 ದಿನಗಳ ಕಾಲ 170 ಘಂಟೆಗಳ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿರುವ ದಕ್ಷಿಣ ಭಾರತದ ಹೆಮ್ಮೆಯ ಕುವರಿ ಕುಮಾರಿ ರೆಮೋನಾ ಇವೆಟ್ ಪಿರೇರಾ ಅವರನ್ನು ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಗೌರವಿಸಲಾಯಿತು. ಕೊನೆಯಲ್ಲಿ ಭಾಗವಹಿಸಿದ ಸಂಸ್ಥೆಯ ಕಲಾವಿದರಿಗೆ ಸಂಸ್ಥೆಯ ವತಿಯಿಂದ ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ






