'ಕುರ್ಚಿ ಫೈಟ್ ಎಲ್ಲಿಗೆ ಬಂತೊ ಸಂಗಯ್ಯ?'

Upayuktha
0



'ಮತ್ತೆನಪಾ ಹೊಸಾದು?' ಕೇಳಿದ ಕಾಳ್ಯಾ

'ಎಲ್ಲ ಹಳಿದೇ ಐತಿ, ಹೊಸಾದು ಎಲ್ಲಿದು ತರಾಮು?' ಹೊಳ್ಳಿ ಉತ್ತರಾ ಕೊಟ್ಟ ಗಬರ್ಯಾ

'ಅರೇ ಹೋ ಸಾಂಬಾ, ಐಸಾ ಬೋಲೆ ತೋ ಕೈಸಾಜಿ?' ಕೇಳಿದ ಬಾಶಾ

'ಕೈಸಾನೂ ಇಲ್ಲಾ ಪೈಸಾನೂ ಇಲ್ಲಾ?' ಎಂದ ಡಬಕ್

'ಅಂದ್ರ?' ಕೇಳಿದ ಡುಮ್ಯಾ

'ಎಲ್ಲಾ ಬರೇ 'ಕಿಸ್ಸಾ ಕುರ್ಸಿ ಕಾ' ಬಾತ್ ಹೈ ಕ್ಯಾ?' ಕೇಳಿದ ಬಾಶಾ

'ಹೌಂದು ಮತ್ತs......ಒಂದು ನಾಟಿ ಕೋಳಿ ತಿನಕೋಂತs ಅಡ್ಡಾಡ್ತೈತಿ 'ಟಗರು', ಇನ್ನೊಂದು ಗುಡಿ ಗುಂಡಾರ ಸುತಗೋಂತ ತಿರ್ಗಾಕತ್ತೈತಿ 'ಬಂಡೆ' ಎಂದು ನಕ್ಕ ಲಾಲವಾಲಾ


'ಈ ಡಬಕ್.....ಲಾಲವಾಲಾ ಎಲ್ಲಿವು?' ಕೇಳಿದ ಕಾಕಾ

'ಇವು ಹಿಂದ್ಕs 'ಬಾಂಬೆ ಬಾಯ್ಸ್' ಅಂತ ಮುಂಬಯಿಕ ಹೋಗಿದ್ರು ನೋಡು' ಎಂದ ರಬಡ್ಯಾ

'ಹಾಂ.... ಹೌದು' ಎಂದ ಕಾಕಾ

' ಅವರಿಗೆ ಇವರು ಲಾಲ ರೋಟಿ, ಎಣ್ಣಿ ಸಪ್ಲೈ ಮಾಡ್ತಿದ್ರು' ಎಂದ ರಬಡ್ಯಾ

'ಮತ್ತೆ ಈಗ ಇಲ್ಲಿ ಯಾಕ ಬಂದಾರು?' ಕೇಳಿದಳು ರಾಶಿ

'ಈಗ ಮತ್ತ ಏನರೇ 'ಬಾಂಬೆ'ಕ್ಕ ಹೋಗುವ ಚಾನ್ಸ್ ಸಿಗಬಹುದೇನೋ ಅಂತ ಬಂದಾವು' ಎಂದ ಕಾಳ್ಯಾ

'ಏs ಈ ಸಲ ಬಾಂಬೆ ಇಲ್ಲಾ 'ಕಲಕತ್ತಾ!' ಎಂದು ನಕ್ಕ ಶೌರಿ

'ಯಾಕೆ ಅಲ್ಲಿಗೆ?' ಕೇಳಿದ ಡುಮ್ಯಾ


'ಯಾಕಂದ್ರs.... ಅಲ್ಲಿಯ 'ದೀದಿ' ಈಗ 'ನಮೋ' & 'ಶಾಣ್ಯಾ'ನ ಜೋಡಿ ಸಾಫ್ಟ್ ಆಗ್ಯಾಳಂತ..... ಅದಕ್ಕs' ಎಂದು ನಕ್ಕ ಧಡಂಧುಡಕಿ

'ಯಾಕೆ ಏನಾತು? ಭಾಳ ಅಪೋಜ್ ಮಾಡ್ತಿದ್ಳಲಾ?' ಕೇಳಿದ ಡುಮ್ಯಾ

' ಆಕಿನ 'ಓಟ್ ಬ್ಯಾಂಕ್' ನೇ 'ಎಸ್ಆರ್ಎಸ್'ದಾಗ ಗಪ್ಗಯಾ ಆಗೇತಲಾ? ಮತ್ತ ಇನ್ನ ಏನ ಮಾಡತಾಳು?' ನಕ್ಕ ರಬಡ್ಯಾ

'ರಾಗಾ'ನ ಬೆನ್ನ ಹತ್ತಬೇಕು?' ಎಂದು ನಕ್ಕ ಶೌರಿ

'ಬಿಹಾರ'ದ್ದು ನೋಡಿದಿಲ್ಲ? ಮೂರೇ ಮೂರು ಬಂದಾವು!' ಎಂದ ಧಡಂಧುಡಕಿ

'ಈಗ ಅಂವಾ ಅಲ್ಲಿ ಬರಾಕತ್ತಿದ್ನಂದ್ರs ...... ಅಲ್ಲಿಂದ ಎಲ್ಲಾ ಜಾಗಾ ಖಾಲಿ ಮಾಡ್ತಾವು' ಎಂದ ಲಾಲ ರೋಟಿ

'ಈಗ ಉಳಿದಿದ್ದೇ ಕರುನಾಡು & ತೆಲಂಗಾಣ!' ಎಂದಳು ರಾಶಿ


'ಕರುನಾಡಿನ್ಯಾಗ 'ಟಗರು' & 'ಬಂಡೆ' ನಾಷ್ಟಾ ಮಾಡ್ಕೊಂತs ...... ಅಡ್ಯಾಡಕತ್ತಾವು' ಎಂದ ಡಬಕ್

'ಕಮಲ'ದ ಮುಖಾಂತರ ನೀವು ಇಬ್ರೂ.......... ಅವರ ಕ್ಯಾಂಡಿಡೇಟಗಳಿನ್ನ 'ಕೊಲ್ಕತ್ತಾ'ಕ್ಕ ಹಾರಿಸಿಕೊಂಡು ಹೋಗಬೇಕಂತ ಕುಂತಿರೇನ್ರಪಾ?' ಕೇಳಿದ ಕಾಳ್ಯಾ

'ಅರೇ..... ಅದು 'ಮರಿಸಿಟ್ಟೂರಿ' ಪ್ಲಾನ್ ಇದ್ರs ...... ಅದಕ್ಕ ಗುತ್ನಾಳ ಚಾನ್ಸ್ ಕೊಡಂಗಿಲ್ಲ ತಗಿ' ಎಂದ ಕಾಕಾ

'ಗುತ್ನಾಳ' ಮೊದಲೇ ಗುಡಗಾಕತ್ತಾನು, ಇನ್ನs ಸಿಟ್ಟೂರಪ್ಪನ ಮಗ ಸಿಂಹಾಸನ ಏರುದನ್ನ ನೋಡಕೊಂತ ಕುಂದರತಾನ ಏನು?' ಎಂದ ಟುಮ್ಯಾ

'ಯಾವ ಕಾಲಕ್ಕೂ ಈ ರೆಬೆಲ್ಸ್..... 'ಮರಿ'ಗೆ ಕುರ್ಚಿ ಮ್ಯಾಲ ಕೂಡಲಿಕ್ಕೆ ಬಿಡಂಗಿಲ್ಲ' ಎಂದಳು ರಾಶಿ


'ಅಲ್ಲಿನೂ ಇನ್ನಾ ಕುರ್ಚಿ ಖಾಲಿ ಇಲ್ಲ..... 'ಟಗರ'ನ್ನ ಕೆಳಗ ಇಳಸೂದು ಅಷ್ಟು ಸರಳ ಕೆಲಸ ಅಲ್ಲ!' ಎಂದು ನಕ್ಕ ಲಾಲ ರೋಟಿ

'ಇವರ 'ಕಿಸ್ಸಾ ಕುರ್ಸಿ ಕಾ' ಕದನದಾಗ ರೈತರು ಒದ್ದಾಡಕತ್ತಾರ' ಎಂದ ರೈತ ನಾಯಕ ಭೀಮಶಿ

'ಅವರದ್ಯಾರು ಕೇಳಬೇಕು?' ಎಂದ ಕಾಕಾ

'ಒಬ್ರು 'ಗ್ರೇಟರ್ ಬೆಂಗಳೂರು' ಮಾಡುದ್ರಾಗ 'ಬೀಜಿ' ಇನ್ನೊಬ್ರು 'ನಾಟಿಕೋಳಿ'ದಾಗ 'ಬೀಜಿ'! ಎಂದು ನಕ್ಕ ರಬಡ್ಯಾ

'ಈ 'ವಾಚ್'ದ್ದು ಬ್ಯಾರೆ ಏನೋ ಗದ್ಲಾ ಎದ್ದೈತಲಾ?' ಎಂದಳು ರಾಶಿ


'ನಮ್ಮ ರೊಕ್ಕ ನಮ್ಮ ವಾಚ್! ಅದನ್ನ ಕೇಳವ್ರು ಇವರು ಯಾರು?' ಅಂತ ಗುಡಗೈತಿ ಬಂಡೆ' ಎಂದ ಡಬಕ್

'ಇರಲಿ ಬಿಡಪಾ ಇದು ಇದ್ದದ್ದೇ...... 'ಹಗ್ಗ ಹರೇಂಗಿಲ್ಲ ಕೋಲು ಮುರೆಂಗಿಲ್ಲ' ಅಂತ ಗಾದೆ ಮಾತು ಕೇಳಿರಿಲ್ಲ? ಹಂಗ ಇದು' ಎಂದ ಡುಮ್ಯಾ

'ಮತ್ತ ಯಾವ ಮ್ಯಾಟರ್ ಬೇಕು ನಿನಗೆ?' ಕೇಳಿದ ಕಾಳ್ಯಾ

'ಬಿಗ್ ಬಾಸ್' 'ಬಿಗ್ ಬಾಸ್' 'ಬಿಗ್ ಬಾಸ್' ಅಂತ ನಕ್ಕ ಡುಮ್ಯಾ

'ಅಲ್ಲಿ ಜಾನ್ವಿ ಹೋದ ಮ್ಯಾಲ ಅಶ್ವಿನಿ ಫುಲ್ ಸೈಲೆಂಟ್ ಆಗ್ಯಾಳು..... ಧ್ರುವಂತ ಫುಲ್ ವೈಲೆಂಟ್ ಆಗ್ಯಾನು' ಎಂದ ಕಾಳ್ಯಾ


'ಗಿಲ್ಲಿ ಎಲ್ಲಾರನೂ ಕಾಡಿ..... ಕೊನಿಗೆ ಕಿಚ್ಚನ ಕೈಲೆ 'ಕ್ಯಾಪ್ಟನ್ ರೂಂ' ಕೀಲಿ ಹಾಕಿಸಿ ಬಿಟ್ಟ' ಎಂದು ನಕ್ಕ ಡುಮ್ಯಾ

'ಮತ್ತೆ ಅದು ಹೆಂಗೆ, ಇದು ಅದು ಅದು ಇದು.....' ಅನ್ನುವ ರಕ್ಷಿತಾ ಹೆಂಗೆ?' ಕೇಳಿದಳು ರಾಶಿ

'ಏs ರಕ್ಷಿತಾ.... ರಘು & ಮಾಳು ಅಣ್ಣನ ಜೊತೆ ಆರಾಮ ಆಗಿದ್ದಾಳೆ ಮಾರಾಯ್ರೆ' ಎಂದ ಟುಮ್ಯಾ

'ಈ ಕಾವು & ಸ್ಪಂದನಾ ಜೋಡಿ.... ರಕ್ಷಿತಾನ್ನ ಕೆಣಕೂದು ಕಮ್ಮಿ ಮಾಡಿಲ್ಲಾ ನೋಡು' ಎಂದ ಕಾಳ್ಯಾ

'ರಜತ ಈಗ ಗಿಲ್ಲಿ ಜೋಡಿ ಅದಾನು' ಎಂದ ಡುಮ್ಯಾ

'ಫೈರ್ ಬ್ರ್ಯಾಂಡ್ ಚೈತ್ರಾ ಎಂಟ್ರಿ ಹ್ಯಾಂಗೈತೆ?' ಕೇಳಿದಳು ರಾಶಿ

'ಏs ಚೈತ್ರಾ ಛೊಲೊತ್ನಂಗೆ ಆಟ ಆಡಿನೇ ಸ್ಪಂದನಾಗೆ ಕ್ಯಾಪ್ಟನ್ ಮಾಡಿದ್ಳು' ಎಂದ ಡುಮ್ಯಾ

'ಯಾಕೆ ಸ್ಪಂದನಾಗ ಏನಾಗಿತ್ತು?' ಕೇಳಿದ ಧಡಂಧುಡಕಿ


'ಆಕೆ ಆಟ ಆಡೂ ಮುಂದ ಕಾಲಿಗೆ ಪೆಟ್ಟು ಬಿದ್ದಿತ್ತು' ಎಂದಳು ರಾಶಿ

'ಓ ಹೌದಾ? ನಮ್ಮ 'ವೈಸ್ ಕ್ಯಾಪ್ಟನ್' ಗಿಲ್ಲಿ ಏನಂತಾನು? ಈಗ ಎಲ್ಲಾ ಕಡೆಗೆ ಫುಲ್ ಹವಾ ಅವಂದೆ ಐತಿ' ಎಂದ ಟಿಮ್ಟಿಮ್

'ಗಿಲ್ಲಿ ಈ ವಾರದ ಕ್ಯಾಪ್ಟನ್ ಅಭಿಷೇಕನ್ನ ಡೈರೆಕ್ಟ ಮನಿಗೆ ಕಳಿಸಿದನಲಾ?' ಎಂದು ನಕ್ಕಳು ರಾಶಿ

'ಏನಂದರೂನು 'ಕಿಚ್ಚ'ನ ಖದರ್ ಭಾರಿನೇ ಅದ ತಗೋ' ಎಂದ ಗುಂಡ್ಯಾ

'ಅಂವಾ ತಾ ನೀರು ಕುಡಕೊಂsತ..... ಕಾಫಿ ಕುಡ್ಕೊಂತ..... ಸೈಲೆಂಟ್ ಆಗಿ ಮುಟ್ಟಿ ನೋಡಕೊಳಂಗ ಮಾತಾಡ್ತಾನ ನೋಡು' ಎಂದ ರಬಡ್ಯಾ

' ಎಲ್ಲಾರಿಗೂ ಬರೋಬ್ಬರಿ 'ನೀರು' ಕುಡಸ್ತಾನ ಅಂವಾ' ಎಂದ ಡುಮ್ಯಾ

' ಅದಕ್ಕೆ ಆ 'ಮಾರ್ಕ್'ನ್ನ 'ಕಲರ್ಸ್' ಕೈ ಮುಗಿದು ಕರಕೊಂಡು ಬರತೈತಿ ನೋಡು' ಎಂದ ಲಾಲ ರೋಟಿ

'ಈಗ ಯಾರು ಗೆದಿಬಹುದು ಈ ಸಲ?' ಕೇಳಿದ ಕಾಳ್ಯಾ


'ನೋಡಪಾ..... ಇದು ಹಾವು ಏಣಿ ಆಟ ಇದ್ದಂಗ...... ಇಂಥವ್ರೆ ಅಂತ ಹೇಳ್ಲಿಕ್ಕೆ ಆಗಂಗಿಲ್ಲ' ಎಂದ ಕಾಕಾ

'ಈಗ ರಾಜ್ಯದಾಗೂ 'ಹಾವು ಏಣಿ ಆಟಾನೇ' ನಡೇದೆತಲಾ?' ಎಂದು ವ್ಯಂಗವಾಗಿ ನಕ್ಕ ಧಡಂಧುಡಕಿ

'ಆದ್ರೂ ಇಲ್ಲಿ 'ಬಂಡೆ'ಕ್ಕ ಚಾನ್ಸ್ ಸಿಗಬಹುದು..... ಅಲ್ಲಿ ಗಿಲ್ಲಿಗೆ ಚಾನ್ಸ್ ಐತಿ' ಎಂದಳು ರಾಶಿ

'ಬಂಡೆ' ಕ್ಕ 'ಟಗರು' ಅಷ್ಟ ಸರಳ ಬಿಟ್ಟು ಕೊಡಂಗಿಲ್ಲ' ಎಂದ ಕಾಕಾ

'ಬಿಟ್ಟು ಕೊಟ್ಟರೂನು ಭಾಳ ದಿನಾ ನಡೆಂಗಿಲ್ಲ ನೋಡು' ಎಂದ ಲಾಲ ರೋಟಿ


'ನೀವಂತೂ ಆಸೆಬುರಕ ಆಸಾಮಿಗಳನ್ನು ಎಗರಿಸಿಕೊಂಡು ಹೋಗ್ಲಿಕ್ಕೆ ತಯಾರು ಅದಿರಲಾ?' ಎಂದು ಕೇಳಿದ ಟುಮ್ಯಾ

'ಹಮ್ ತಯಾರ್ ಹೈ! ನಮ್ಮ ಕೆಲ್ಸಾನೇ ಅದು' ಎಂದು ನಕ್ಕ ಲಾಲ ರೋಟಿ

'ಒಂದ ಕಾಲದಾಗ ಕೆಂಗಲ್ ಹನುಮಂತಯ್ಯನವರು ಹೆಂಗ ಆಳಿದ್ರು ರಾಜ್ಯಾನ ನೆನಿಸಿಕೋರಿ!' ಎಂದ ಕಾಕಾ

'ಅದು ಆವಾಗ..... ಈಗ ಎಲ್ಲಾ ಡುಪ್ಲಿಕೇಟ ಯುಗ!' ಎಂದ ಧಡಂಧುಡಕಿ

'ಶಂಭೋ ಶಿವಶಂಕರಾ ...... ಆ ಶಿವನೇ ಕಾಪಾಡಬೇಕು....' ಎಂದಳು ರಾಶಿ


'ಶಿವ' 'ರಾಮ' ಕೂಡಿ ಏನ ಮಾಡ್ತಾರೋ ಏನೋ?' ಎಂದ ಡಬರ್ಯಾ

'ಟಗರು' ಹೈ ಕಮಾಂಡಿಗೇ ದಿಕ್ಕು ತಪ್ಪಸೇತಿ!' ಎಂದು ನಕ್ಕಳು ರಾಶಿ

'ಹಂ..... ನಡ್ರಿ ಎಲ್ಲಾರೂ ಬೆಳಗಾವಿ ಚಳಿಗಾಲ ಅಧಿವೇಶನಕ್ಕ ಹೋಗಾಮು ನಡ್ರಿ' ಎಂದು ಅದೇ ತಾನೇ ಬಂದ ಠುಮರ್ಯಾ ಎಲ್ಲಾರನೂ ಕರಕೊಂಡು ಹೊಂಟ.


- ಶ್ರೀನಿವಾಸ ಜಾಲವಾದಿ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top