ಉಜಿರೆ: ಕೇಂದ್ರ ಸರ್ಕಾರವು ಸಂಸ್ಕೃತ ಭಾಷಾ ಸಂವರ್ಧನೆ ಹಾಗೂ ಬೆಳವಣಿಗೆಗಾಗಿ ದೇಶದ ಆಯ್ದ ಸಂಸ್ಕೃತ ಭಾಷಾ ವಿದ್ಯಾರ್ಥಿಗಳಿಗೆ ದೆಹಲಿಯ ಸೆಂಟ್ರಲ್ ಸಂಸ್ಕೃತ ವಿಶ್ವವಿದ್ಯಾಲಯದ ಮೂಲಕ ನೀಡುವ 2024-25 ನೇ ಸಾಲಿನ ರಾಷ್ಟ್ರೀಯ ಸಂಸ್ಕೃತ ವಿದ್ಯಾರ್ಥಿವೇತನ ಬಿಡುಗಡೆ ಆಗಿದ್ದು, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ 12 ಸಂಸ್ಕೃತ ಭಾಷಾ ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಪಡೆದಿದ್ದಾರೆ.
ವಿದ್ಯಾರ್ಥಿಗಳಾದ ಸಾತ್ವಿಕ್ ಪಿ, ದೀಪ್ತಿ ಮುರಾರಿ ಭಟ್, ಶ್ರೀನಿಧಿ ವಿ. ಶ್ರೀಧರ್, ಕೆ. ಕ್ಷಮಾ, ಮಿಹಿರ್ ಕೇಳ್ಕರ್, ಪ್ರಾಂಜಲಿ, ರಿತೇಶ್ ನಾಗರಾಜ್ ಪ್ರಭು, ಧೀಮಂತ್ ಮರಾಠೆ, ಅನನ್ಯ ಪಿ.ವಿ., ನೀತಿ ಕೆ.ಪಿ., ಸುಮೇಧಾ ಗಾಂವ್ಕರ್, ಸಂಜನಾ ಡಿ.ಎಸ್ ಇವರಿಗೆ ತಲಾ 6000 ರೂ.ಗಳಂತೆ ಒಟ್ಟು 72 ಸಾವಿರ ರೂ. ವಿದ್ಯಾರ್ಥಿ ವೇತನವು ಆವರ ಬ್ಯಾಂಕ್ ಖಾತೆಗಳಿಗೆ ಜಮೆ ಆಗಿದೆ ಎಂದು ದೆಹಲಿಯ ಸೆಂಟ್ರಲ್ ಸಂಸ್ಕೃತ ಯೂನಿವರ್ಸಿಟಿಯಿಂದ ವರದಿ ಬಂದಿದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.
ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ. ಹಾಗೂ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ. ಪ್ರಸನ್ನಕುಮಾರ ಐತಾಳ್ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


