ಹೊಸ ಮೊಬೈಲ್‌ಗಳಲ್ಲಿ ಸಂಚಾರ ಸಾಥಿ ಕಡ್ಡಾಯ: ಸೈಬರ್ ವಂಚನೆ ವಿರುದ್ಧ ಕೇಂದ್ರ ಸರ್ಕಾರದ ಮಹತ್ವದ ಹೆಜ್ಜೆ

Upayuktha
0

ಸೈಬರ್ ಅಪಾಯದ ನಡುವೆ ಸರ್ಕಾರದ ಹೊಸ ಭದ್ರತಾ ಕ್ರಮ




ಳೆದ ಕೆಲವು ವರ್ಷಗಳಲ್ಲಿ ಮೊಬೈಲ್ ಬ್ಯಾಂಕಿಂಗ್, ಯುಪಿಐ, ಆನ್ಲೈನ್ ಶಾಪಿಂಗ್ ಮತ್ತು ಸೋಷಿಯಲ್ ಮೀಡಿಯಾ ಬಳಕೆ ಹೆಚ್ಚಾದಂತೆ ಸೈಬರ್ ವಂಚನೆ ಪ್ರಕರಣಗಳೂ ತೀವ್ರಗೊಂಡಿವೆ. ಮೋಸದ ಕರೆಗಳು, ನಕಲಿ ಲಿಂಕ್‌ಗಳು, ಖೋಟಾ ಮೆಸೇಜ್‌ಗಳು ಮತ್ತು ಅಕ್ರಮವಾಗಿ ಪಡೆಯಲ್ಪಟ್ಟ ಸಿಮ್‌ಗಳ ಮೂಲಕ ಸಾಮಾನ್ಯ ಜನರು ಲಕ್ಷಾಂತರ ರೂಪಾಯಿಗಳ ವಂಚನೆಗೆ ಒಳಗಾಗುತ್ತಿದ್ದಾರೆ. ಈ ಹಿನ್ನೆಲೆ ಭಾರತದಲ್ಲಿ ಸೈಬರ್ ಸುರಕ್ಷತೆಯನ್ನು ಬಲಪಡಿಸುವ ಅಗತ್ಯತೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ‘ಸಂಚಾರ್ ಸಾಥಿ’ ಯೋಜನೆಯನ್ನು ಜಾರಿಗೆ ತಂದಿದೆ.


ಸೈಬರ್ ಅಪರಾಧ ಎಂಬುದು ಕೇವಲ ಹಣಕಾಸಿನ ನಷ್ಟವೇ ಅಲ್ಲ, ಅದು ವ್ಯಕ್ತಿಯ ಗೌಪ್ಯತೆಗೆ ಭಾರಿ ಅಪಾಯ ಉಂಟುಮಾಡುತ್ತದೆ. ಮೊಬೈಲ್ ಅನ್ನು ದುರುಪಯೋಗ ಮಾಡಿದರೆ ವೈಯಕ್ತಿಕ ಮಾಹಿತಿ ಕಳವುಗೊಳ್ಳುವುದು, ಸುಳ್ಳು ಗುರುತಿನ ದಾಖಲೆ ಸೃಷ್ಟಿಯಾಗುವುದು ಮತ್ತು ಅಪರಾಧ ಚಟುವಟಿಕೆಗಳಿಗೆ ಬಳಕೆಯಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಈ ಎಲ್ಲಾ ಅಪಾಯಗಳನ್ನು ತಡೆಯಲು ಸಂಚಾರ ಸಾಥಿಯನ್ನು ಅನುಷ್ಠಾನಗೊಳಿಸಲಾಗಿದೆ.



ಏನಿದು ಸಂಚಾರ ಸಾಥಿ ಯೋಜನೆ?


ಸಂಚಾರ್ ಸಾಥಿ ಎಂದರೆ ಕೇವಲ ಒಂದು ಅಪ್ಲಿಕೇಶನ್ ಅಲ್ಲ. ಇದು ಕೇಂದ್ರ ಸರ್ಕಾರ ರೂಪಿಸಿದ ರಾಷ್ಟ್ರಮಟ್ಟದ ದೂರಸಂಪರ್ಕ ಭದ್ರತಾ ವ್ಯವಸ್ಥೆ  ಆಗಿದೆ. ಈ ಯೋಜನೆಯನ್ನು ದೂರಸಂಪರ್ಕ ಇಲಾಖೆ (Department of Telecommunications) ಜಾರಿಗೆ ತಂದಿದ್ದು, ತಾಂತ್ರಿಕ ನೆರವನ್ನು ಸಿ-ಡಾಟ್ (Centre for Development of Telematics) ನೀಡಿದೆ.


ಈ ಯೋಜನೆಯ ಮೂಲಕ ಸಾರ್ವಜನಿಕರಿಗೆ ಇದು ಮೊದಲು ಪೋರ್ಟಲ್ ರೂಪದಲ್ಲಿ ಲಭ್ಯವಿತ್ತು. ಆದರೆ ನಂತರ ಇದರ ಮಹತ್ವ ಹಾಗೂ ಪ್ರಯೋಜನಗಳನ್ನು ಹೆಚ್ಚಿಸಲು ಇದನ್ನು ಮೊಬೈಲ್ ಆಪ್ ರೂಪದಲ್ಲಿ ಪರಿಚಯಿಸಲಾಯಿತು. ಈಗ ಸರ್ಕಾರ ಹೊಸ ಮೊಬೈಲ್ ಫೋನ್ಗಳಲ್ಲಿ ಆಪ್ ಕಡ್ಡಾಯ ಸ್ಥಾಪನೆಯನ್ನೇ ಕಾನೂನಾತ್ಮಕವಾಗಿ ಜಾರಿಗೆ ತಂದಿದೆ.


ಭಾರತದಾದ್ಯಂತ ಎಲ್ಲ ಮೊಬೈಲ್ ಬಳಕೆದಾರರನ್ನು ಒಂದೇ ಭದ್ರತಾ ವ್ಯವಸ್ಥೆಯ ಒಳಗೆ ತರುವ ಉದ್ದೇಶ ಇದಾಗಿದೆ. ಹೀಗಾಗಿ ಈ ಆಪ್ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸೈಬರ್ ಸುರಕ್ಷತೆಯ ರಕ್ಷಣಾ ಕವಚವಾಗಿ ಕಾರ್ಯನಿರ್ವಹಿಸುತ್ತದೆ.



ಹೊಸ ಮೊಬೈಲ್‌ಗಳಲ್ಲಿ ಏಕೆ ಕಡ್ಡಾಯ ಮಾಡಲಾಗಿದೆ?


ಇದುವರೆಗೆ ಹಲವಾರು ಜನರು ಈ ಆಪ್ ಬಗ್ಗೆ ತಿಳಿಯದೇ ಅಥವಾ ಆಸಕ್ತಿ ತೋರದೇ ಬಳಕೆ ಮಾಡಿರಲಿಲ್ಲ. ಆದರೆ ಸರ್ಕಾರದ ಪ್ರಕಾರ, ಡಿಜಿಟಲ್ ಭದ್ರತೆ ಐಚ್ಛಿಕವಲ್ಲ; ಅಗತ್ಯವಿದೆ. ಅದಕ್ಕಾಗಿ ಹೊಸ ಫೋನ್‌ಗಳಲ್ಲೇ ಈ ಆಪ್ ಇರಬೇಕು ಎಂಬ ನಿಯಮ ಜಾರಿಯಾಗಿದೆ.



ನಾಗರಿಕರನ್ನು ಜಾಗೃತಗೊಳಿಸಲು, ವಂಚನೆ ಕಡಿಮೆ ಮಾಡಲು, ಕಳವಾದ ಮೊಬೈಲ್ ಪತ್ತೆಗೆ ಸಹಾಯ ಮಾಡಲು, ಅಕ್ರಮ ಸಿಮ್ ಸಂಪರ್ಕ ಗುರುತಿಸಲು, ಪೊಲೀಸ್ ತನಿಖೆಗೆ ನೆರವಾಗಲು ಸಂಚಾರ್ ಸಾಥಿ ಆಪ್ ಕಡ್ಡಾಯಗೊಳಿಸಲಾಗಿದೆ. ಇದು ಕೇವಲ ಒಬ್ಬ ವ್ಯಕ್ತಿಗೆ ಮಾತ್ರವಲ್ಲ, ಸಂಪೂರ್ಣ ರಾಷ್ಟ್ರದ ಸೈಬರ್ ರಕ್ಷಣೆಗೆ ತೆಗೆದುಕೊಂಡ ತೀರ್ಮಾನವಾಗಿದೆ.


ಹೇಗೆ ಕೆಲಸ ಮಾಡುತ್ತದೆ ಸಂಚಾರ ಸಾಥಿ?

ಪ್ರತಿ ಮೊಬೈಲ್‌ಗೆ ಐಎಂಇಐ (IMEI) ಎಂಬ ವಿಶಿಷ್ಟ ಗುರುತು ಸಂಖ್ಯೆ ಇರುತ್ತದೆ. ಈ ಸಂಖ್ಯೆ ಮೂಲಕ ಮೊಬೈಲ್‌ನ ಗುರುತನ್ನು ಪತ್ತೆಹಚ್ಚಬಹುದು. ಸಂಚಾರ ಸಾಥಿ ವ್ಯವಸ್ಥೆ ಈ ಐಎಂಇಐ ಅನ್ನು ಕೇಂದ್ರ ಡೇಟಾಬೇಸ್‌ಗೆ ಕೊಂಡೊಯ್ಯುತ್ತದೆ.


ಯಾವುದೇ ಫೋನ್ ಕಳವಾದಾಗ:

ಬಳಕೆದಾರನು ಆಪ್ ಮೂಲಕ ವರದಿ ಮಾಡಬಹುದು. ಫೋನ್ ಬ್ಲಾಕ್ ಆಗುತ್ತದೆ. ಆ ಫೋನ್ ನೆಟ್ವರ್ಕ್ ಬಳಸಲು ಸಾಧ್ಯವಿಲ್ಲ. ಪೊಲೀಸರು ಪತ್ತೆಹಚ್ಚಲು ಸುಲಭವಾಗುತ್ತದೆ. ಇದಲ್ಲದೆ, ನಿಮ್ಮ ಹೆಸರಿನಲ್ಲಿ ಎಷ್ಟೆಲ್ಲಾ ಸಿಮ್‌ಗಳಿವೆ ಎಂಬ ಮಾಹಿತಿಯನ್ನು ಕೂಡಾ ಪರಿಶೀಲಿಸಬಹುದು. ಅಕ್ರಮವಾಗಿ ಪಡೆದುಕೊಳ್ಳಲ್ಪಟ್ಟ ಸಿಮ್ ಇದ್ದರೆ ಅದನ್ನು ತಕ್ಷಣವೇ ರದ್ದು ಮಾಡಬಹುದು.


ನಾಗರಿಕರಿಗೆ ದೊರೆಯುವ ಪ್ರಯೋಜನಗಳು:

ಸಂಚಾರ್ ಸಾಥಿ ಕೇವಲ ಸರ್ಕಾರದ ಉಪಕರಣವಲ್ಲ. ಇದು ಜನಸಾಮಾನ್ಯರ ನಂಬಿಕೆಯ ಭದ್ರತಾ ವ್ಯವಸ್ಥೆ. ಮೊಬೈಲ್ ಕಳವಾದಾಗ ಹಿಂತಿರುಗುವ ಸಾಧ್ಯತೆ ಹೆಚ್ಚುತ್ತದೆ. ವಂಚನೆ ಸಂಖ್ಯೆಗಳನ್ನು ತಕ್ಷಣ ವರದಿ ಮಾಡಬಹುದು. ಬ್ಯಾಂಕ್ ವಂಚನೆಗೆ ತಡೆ ಸಿಗುತ್ತದೆ. ಯುವಜನತಿಯ ಡಿಜಿಟಲ್ ಅರಿವು ವೃದ್ಧಿಸುತ್ತದೆ. ಸಿಟಿಜನ್ ಸಿಕ್ಯೂರಿಟಿ ಸಂಸ್ಕೃತಿ ಬೆಳೆಸುತ್ತದೆ.


ಸರ್ಕಾರ ಮತ್ತು ದೂರಸಂಪರ್ಕ ಕ್ಷೇತ್ರಕ್ಕೆ ಲಾಭ:

ಟೆಲಿಕಾಂ ಕಂಪನಿಗಳಿಗೆ ನಕಲಿ ಸಂಪರ್ಕಗಳನ್ನು ತೆಗೆದುಹಾಕಲು ಅನುಕೂಲ. ಪೊಲೀಸರು ಅಪರಾಧ ಪತ್ತೆಯ ವೇಗ ಹೆಚ್ಚಿಸಬಹುದು. ದೇಶದ ದೂರಸಂಪರ್ಕ ವ್ಯವಸ್ಥೆ ಪಾರದರ್ಶಕವಾಗುತ್ತದೆ. ಕಾನೂನು ಪಾಲನೆ ಸುಲಭವಾಗುತ್ತದೆ. ಅಕ್ರಮ ನೆಟ್ವರ್ಕ್ ಸಂಪೂರ್ಣ ಕಡಿಮೆ ಮಾಡಬಹುದು.


ಗೌಪ್ಯತಾ ಪ್ರಶ್ನೆ ಹಾಗೂ ಸ್ಪಷ್ಟತೆ:

ಕೆಲವು ತಂತ್ರಜ್ಞರು ಕಡ್ಡಾಯ ಆಪ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಡೇಟಾ ಸುರಕ್ಷತೆ, ಮೇಲ್ವಿಚಾರಣೆ, ಹಕ್ಕುಗಳ ಸಂರಕ್ಷಣೆ ಎಂಬ ಪ್ರಶ್ನೆಗಳು ಎದ್ದಿವೆ. ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರ, ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಅಕ್ರಮವಾಗಿ ಸಂಗ್ರಹಿಸುವುದಿಲ್ಲ ಎಂದು ಭರವಸೆ ನೀಡಿದೆ.

ಸಂಚಾರ್ ಸಾಥಿ ಕೇವಲ ದೂರಸಂಪರ್ಕ ಸುರಕ್ಷತೆಗೆ ಸಂಬಂಧಿಸಿದೆ. ಇದು ಯಾವುದೇ ಖಾಸಗಿ ಸಂಭಾಷಣೆ ಅಥವಾ ವೈಯಕ್ತಿಕ ಡೇಟಾವನ್ನು ಟ್ರ್ಯಾಕ್ ಮಾಡುವುದಿಲ್ಲ ಎಂದು ಸರ್ಕಾರ ಹೇಳಿದೆ.


ಭವಿಷ್ಯದ ಯೋಜನೆ:

ಮುಂದಿನ ದಿನಗಳಲ್ಲಿ ಸಂಚಾರ ಸಾಥಿಯಲ್ಲಿ ಕೃತಕ ಬುದ್ಧಿಮತ್ತೆ ಬಳಕೆ ಆಗಲಿದೆ. ಸ್ವಯಂಚಾಲಿತ ವಂಚನೆ ಪತ್ತೆ ವ್ಯವಸ್ಥೆ ಅಭಿವೃದ್ಧಿಯಾಗಲಿದೆ.

ರಿಯಲ್-ಟೈಮ್ ಸಿಕ್ಯೂರಿಟಿ ನೋಟಿಫಿಕೇಷನ್ ವ್ಯವಸ್ಥೆ ಬರುತ್ತದೆ. ಅಂತಾರಾಷ್ಟ್ರೀಯ ಟೆಲಿಕಾಂ ಅಪರಾಧ ತಡೆ ಸಹಕಾರ ಆರಂಭವಾಗಲಿದೆ. ಅಂತಿಮವಾಗಿ ಸಂಚಾರ್ ಸಾಥಿ ಕೇವಲ ಆಪ್ ಅಲ್ಲ. ಇದು ಡಿಜಿಟಲ್ ಭಾರತದ ಹೃದಯದಲ್ಲಿರುವ ಭದ್ರತಾ ವ್ಯವಸ್ಥೆ. ಪ್ರತಿಯೊಬ್ಬ ನಾಗರಿಕರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು. ಮೊಬೈಲ್ ನಾವು ನಂಬಿಕೆ ಇಡುವ ಸಾಧನವಾಗಿರಬೇಕು, ಭಯದ ಕಾರಣವಾಗಬಾರದು.



- ಪ್ರೊ. ಮಹೇಶ್ ಸಂಗಮ್,  

ವಾಣಿಜ್ಯ ವಿಭಾಗ

ಚೇತನ್ ಕಾಲೇಜು ಓಫ್ ಕಾಮರ್ಸ್, ಹುಬ್ಬಳ್ಳಿ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top