ಸುರತ್ಕಲ್: ಅಧ್ಯಾಪನದೊಂದಿಗೆ ರಂಗಭೂಮಿ, ಸಾಹಿತ್ಯ, ವಿಜ್ಞಾನ ಪ್ರಸರಣ, ಚಾರಣ ಕ್ಷೇತ್ರಗಳಲ್ಲಿ ಆಸಕ್ತಿಯಿಂದ ದುಡಿದು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದ ಪ್ರೊ. ದೇವಪ್ಪ ಕುಳಾಯಿ ಅವರ ಕೊಡುಗೆ ಅನನ್ಯ ಎಂದು ಹಿರಿಯ ಸಾಹಿತಿ ಹಾಗೂ ಹಿಂದು ವಿದ್ಯಾದಾಯಿನಿ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಕೆ. ನುಡಿದರು.
ಅವರು ಸಿಂಗಾರ ಸುರತ್ಕಲ್ ಕುಳಾಯಿ ಮಹಿಳಾ ಮಂಡಲದ ಸಹಯೋಗದಲ್ಲಿ ಆಯೋಜಿಸಿದ್ದ ಪ್ರೊ. ದೇವಪ್ಪ ಕುಳಾಯಿ ವರ್ಷದ ನೆನಪು ಕಾರ್ಯಕ್ರಮದಲ್ಲಿ ದೇವಪ್ಪ ಕುಳಾಯಿ ಅವರೊಂದಿಗಿನ ಒಡನಾಟದ ನೆನಪುಗಳನ್ನು ಹಂಚಿಕೊಂಡರು.
ಬಂಟ್ವಾಳ ಎಸ್.ವಿ.ಎಸ್. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪಾಂಡುರಂಗ ನಾಯಕ್ ಮಾತನಾಡಿ, ಎನ್.ಸಿ.ಸಿ ಯ ನೆನಪುಗಳನ್ನು ಹಂಚಿಕೊಂಡು ಶಿಸ್ತು ಬದ್ಧ ಕಾರ್ಯ ವೈಖರಿಯಿಂದ ಮೇಜರ್ ಗೌರವಕ್ಕೆ ಪಾತ್ರರಾದವರು ದೇವಪ್ಪರು ಎಂದು ನುಡಿದರು.
ಸುರತ್ಕಲ್ ನಾಗರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ಕೆ. ರಾಜ ಮೋಹನ ರಾವ್ ಮಾತನಾಡಿ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿ ಉನ್ನತ ಸ್ಥಾನ ಕ್ಕೇರುವಲ್ಲಿ ಪ್ರೇರಣೆ ನೀಡಿದವರು ಎಂದರು.
ವಿದ್ಯಾದಾಯಿನಿ ಸ್ಪೋರ್ಟ್ಸ್ ಅಕಾಡೆಮಿಯ ನಿರ್ದೇಶಕ ಸುಬ್ರಹ್ಮಣ್ಯ. ಟಿ. ಮಾತನಾಡಿ, ಪರ್ವತಾರೋಹಣ ಮತ್ತು ಚಾರಣ, ಗಗನ ವೀಕ್ಷಣೆಯಂತಹ ನೂತನ ಕಾರ್ಯಕ್ರಮಗಳ ಮೂಲಕ ನೂತನ ಆಯಾಮಗಳನ್ನು ದೇವಪ್ಪ ಕುಳಾಯಿ ಸೃಷ್ಟಿಸಿದವರು ಎಂದರು.
ಕುಳಾಯಿ ಮಹಿಳಾ ಮಂಡಲದ ಅಧ್ಯಕ್ಷೆ ರೇವತಿ ನವೀನ್ ಮಹಿಳಾ ಮಂಡಲದ ಕಾರ್ಯ ಚಟುವಟಿಕೆಗಳಿಗೆ ದೇವಪ್ಪರು ಪ್ರೋತ್ಸಾಹ ನೀಡಿದವರು ಎಂದರು.
ಕುಳಾಯಿ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಕೆ.ಪಿ. ಚಂದ್ರಶೇಖರ್, ಹೊಸಬೆಟ್ಟು ನಾಗರಿಕ ಹಿತ ರಕ್ಷಣಾ ಸಮಿತಿಯ ಸಂಯೋಜಕ ಸತೀಶ್ ಸದಾನಂದ, ಗೋವಿಂದ ದಾಸ ಕಾಲೇಜಿನ ಮಾಜಿ ಆಡಳಿತಾತ್ಮಕ ನಿರ್ದೇಶಕ ಪ್ರೊ. ರಮೇಶ್ ಕುಳಾಯಿ, ಸುರತ್ಕಲ್ ರೋಟರಿ ಕ್ಲಬ್‌ನ ನಿಯೋಜಿತ ಅಧ್ಯಕ್ಷ ಶ್ರೀಧರ್ ಟಿ. ಎನ್., ಚಲನಚಿತ್ರ ನಿರ್ದೇಶಕ ವಾದಿರಾಜ್ ಉಪ್ಪುರು, ಪುನೀತ್ ಕುಮಾರ್ ಕುಳಾಯಿ, ದೇವಪ್ಪ ಕುಳಾಯಿ ಅವರ ಜೊತೆಗಿನ ಒಡನಾಟಗಳನ್ನು ಹಂಚಿಕೊಂಡರು.
ಮಹಿಳಾ ಮಂಡಲದ ಉಪಾಧ್ಯಕ್ಷೆ ದೇವಕಿ, ಕಾರ್ಯದರ್ಶಿ ವಾಣಿ, ಸುರತ್ಕಲ್ ವ್ಯವಸಾಯ ಸೇವಾ ಸಂಘದ ಉಪಾಧ್ಯಕ್ಷ ವಿಠ್ಠಲ ಸಾಲ್ಯಾನ್ ಕುಳಾಯಿ, ನಾಗರೀಕ ಹಿತರಕ್ಷಣಾ ಸಮಿತಿ ಯ ಅಧ್ಯಕ್ಷ ಆನಂದ ಭಂಡಾರಿ, ಸದಸ್ಯ ರಮೇಶ್ ಅಳಪೆ, ಗೋವಿಂದ ದಾಸ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಮಾಜಿ ಅಧ್ಯಕ್ಷ ಹರೀಶ್ ಕುಮಾರ್, ಗೋವಿಂದ ದಾಸ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಸದಸ್ಯ ಪರಮೇಶ್ವರ, ಯಶವಂತ, ಪ್ರಣತಿ, ಉಮೇಶ್, ಆಶೀಶ್ ಕುಳಾಯಿ, ರಮೇಶ್, ರಫಿಕ್ ಸುರತ್ಕಲ್, ಸುರತ್ಕಲ್ ಇನ್ನರ್ ವೀಲ್ ಕ್ಲಬ್ ನ ನಳಿನಿ ರಾಜಮೋಹನ್ ಮತ್ತಿತರರು ಉಪಸ್ಥಿತರಿದ್ದರು. ಸಿಂಗಾರ ಸುರತ್ಕಲ್ ನ ಕಾರ್ಯದರ್ಶಿ ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

