ಧರ್ಮತ್ತಡ್ಕ: ಕಾಸರಗೋಡಿನ ಜನಪ್ರಿಯ ಲೇಖಕಿ ಪ್ರಸನ್ನಾ ವಿ. ಚೆಕ್ಕೆಮನೆ ಅವರ ಎರಡು ಕಾದಂಬರಿಗಳಾದ 'ಹೃದಯ ಮುರಳಿ ಮಿಡಿದ ರಾಗ' ಮತ್ತು 'ಉಲಿಯುವ ಗೆಜ್ಜೆ ನಲಿಯುವ ಹೆಜ್ಜೆ' ಕೃತಿಗಳನ್ನು ಬುಧವಾರ (ಡಿ.3) ಕಂಬಾರು ಕ್ಷೇತ್ರದ ಅನುವಂಶಿಕ ಮೊಕ್ತೇಸರರೂ, ಜೌತಿಷಿಗಳೂ, ಸಾಹಿತಿಗಳೂ ಆಗಿರುವ ಶ್ರೀ ನೆರಿಯ ಹೆಗಡೆ ಲಕ್ಷ್ಮೀನಾರಾಯಣ ಭಟ್ ಮತ್ತು ಪತ್ನಿ ವೀಣಾ ಎಲ್. ಭಟ್ ದಂಪತಿಗಳು ಬಿಡುಗಡೆಗೊಳಿಸಿದರು. ಮೈಸೂರಿನ ತಿರುಮಲ ಪ್ರಕಾಶನದವರು ಇವುಗಳನ್ನು ಪ್ರಕಟಿಸಿದ್ದಾರೆ.
"ಗೃಹಿಣಿಯಾಗಿದ್ದುಕೊಂಡು ನಿರಂತರ ಸಾಧನೆಯಿಂದ ಸಾಹಿತ್ಯಕೃಷಿ ಮಾಡುವ ಪ್ರಸನ್ನಾ ಚೆಕ್ಕೆಮನೆಯವರ ಕಾರ್ಯ ಶ್ಲಾಘನೀಯ. ಸಮಾಜದಲ್ಲಿ ಪ್ರಸ್ತುತ ನಡೆಯುವಂತಹ ವಿಷಯಗಳನ್ನೇ ವಸ್ತುವನ್ನಾಗಿಸಿ ಅವರು ಬರೆಯುವ ಕಾದಂಬರಿಗಳು ಓದುಗರ ಮನಸ್ಸಿಗೆ ಆಪ್ತವಾಗುತ್ತಿದೆ. ಸಾಹಿತ್ಯಕ್ಷೇತ್ರದ ಧ್ರುವತಾರೆಯಂತೆ ಮಿಂಚುತ್ತಿರುವ ಅವರ ಸಾಹಿತ್ಯಗಳು ಕನ್ನಡ ಸಾಹಿತ್ಯಕ್ಷೇತ್ರವನ್ನು ಇನ್ನಷ್ಟು ಶ್ರೀಮಂತಗೊಳಿಸಲಿ" ಎಂದು ತಮ್ಮ ನಿವಾಸದಲ್ಲಿ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಎನ್. ಎಚ್. ಲಕ್ಷ್ಮೀನಾರಾಯಣ ಭಟ್ ಶುಭ ಹಾರೈಸಿದರು.
ಲೇಖಕಿ ಪ್ರಸನ್ನಾ ವಿ. ಚೆಕ್ಕೆಮನೆ ಮಾತನಾಡಿ ತಮ್ಮ ಸಾಹಿತ್ಯ ಕ್ಷೇತ್ರದ ಸಾಧನೆಗಳಿಗೆ ಸದಾ ಪ್ರೋತ್ಸಾಹ ನೀಡುವ ನೆರಿಯ ಲಕ್ಷ್ಮೀನಾರಾಯಣ ಭಟ್, ವೀಣಾ ದಂಪತಿಗಳಿಗೆ ಹಾಗೂ ತಮ್ಮ ಬರಹಗಳಿಗೆ ಸ್ಪೂರ್ತಿ ನೀಡುವ ಎಲ್ಲರಿಗೂ ಧನ್ಯವಾದ ತಿಳಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

