ಉತ್ತಮ ಪ್ರಜೆಯಿಂದ ಉತ್ತಮ ದೇಶ ನಿರ್ಮಾಣ ಸಾಧ್ಯ: ಕರ್ನಲ್ ಶರತ್ ಭಂಡಾರಿ

Upayuktha
0


ಮಂಗಳೂರು: ಉತ್ತಮ ಪ್ರಜೆಯಾದರೆ ಮಾತ್ರ ದೇಶ ಉತ್ತಮವಾಗುತ್ತದೆ. ರಾಷ್ಟ್ರದ ನಾಯಕರ ಕನಸುಗಳನ್ನು ನನಸಾಗಿಸುವುದು ಪ್ರತಿ ನಾಗರಿಕನ ಜವಾಬ್ದಾರಿ ಎಂದು ನಿವೃತ್ತ ಯೋಧ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ಹೇಳಿದರು.


ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ 81ನೇ ಭಾರತೀಯ ನೌಕಾಪಡೆ ದಿನದ ಅಂಗವಾಗಿ ಎನ್‌ಸಿಸಿ (ನೌಕಾಪಡೆ) ವತಿಯಿಂದ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.


ದೇಶದ ಭದ್ರತೆ ಪ್ರಮುಖವಾಗಿ ಮೂರು ವಿಭಾಗಗಳ ಕೈಯಲ್ಲಿದೆ. ನೌಕಾಪಡೆಯು ವಿಶ್ವದ 2ನೇ ಹಳೆಯ ಪಡೆಯಾಗಿದೆ.


ಭಾರತದ ನೌಕಾಪಡೆ ವಿಶ್ವದ ಪ್ರಮುಖ ನೌಕಾಪಡೆಗಳಲ್ಲಿ ಒಂದಾಗಿದೆ. ಗುರಿ ಹಾಗೂ ಉದ್ದೇಶದೊಂದಿಗೆ ಮುನ್ನಡೆಯುವ ಕಾರ್ಯ ಮಾಡಬೇಕಿದೆ. ಗುರಿಯಿಲ್ಲದ ಜೀವನ ಗಾಳಿಯಲ್ಲಿ ಹೊಡೆದ ಬಾಣದಂತಾಗುತ್ತದೆ. ಶಿಸ್ತು, ಸಮಯ ನಿರ್ವಹಣೆ, ಸಂವಹನ ಕೌಶಲ್ಯ, ನಾಯಕತ್ವದ ಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಬಹಳ ಮುಖ್ಯ ಎಂದು ಸಲಹೆ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಎಸ್‌., ಪ್ರತಿಯೊಬ್ಬರೂ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಗುರಿಯನ್ನು ಬೆನ್ನಟ್ಟಲು ಮುಂದಾಗಬೇಕು. ದೇಶಕ್ಕಾಗಿ ಸೇವೆ ಸಲ್ಲಿಸಬೇಕು ಎಂಬ ಭಾವನೆ ಪ್ರತಿಯೊಬ್ಬ ನಾಗರಿಕನಲ್ಲಿ ಜಾಗೃತವಾಗಿರಬೇಕು. ಸೇವಾ ಮನೋಭಾವ ಜೀವನದ ಒಂದು ಭಾಗವಾಗಿರಬೇಕು ಎಂದರು.


ಎನ್‌ಸಿಸಿ ನೌಕಾದಳ ಅಧಿಕಾರಿ, ಲೆಪ್ಮಿನೆಂಟ್ ಕಮಾಂಡರ್, ಪ್ರೊ. ಯತೀಶ್‌ ಕುಮಾರ್ ಕಾರ್ಯಕ್ರಮದ ಕುರಿತು ಪ್ರಾಸ್ಥಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕೆಡೆಕ್‌ ಮೇಘನಾ ನಿರೂಪಣೆ ನಡೆಸಿದರೆ, ಕೆಡೆಟ್‌ ಕ್ಯಾಪ್ಟನ್‌ ಮೊನಿಷಾ ವಂದಿಸಿದರು. ಇದೇ ವೇಳೆ ಕಾಲೇಜಿನ ನಾನಾ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top