ಮಂಗಳೂರು: ಸುಲಭ ಲಭ್ಯತೆ, ಉತ್ಪಾದಕತೆ ಮತ್ತು ಡಿಜಿಟಲ್ ಸೇರ್ಪಡೆ ಹೆಚ್ಚಿಸಲು ಭಾರತ ಸರ್ಕಾರದ ಕೃತಕ ಬುದ್ಧಿಮತ್ತೆ (ಎಐ) ಮಿಷನ್ ಜೊತೆ ಕೈಜೋಡಿಸುವ ಮೂಲಕ, 2030ರ ವೇಳೆಗೆ ಲಕ್ಷಾಂತರ ಭಾರತೀಯರಿಗೆ ಕೃತಕ ಬುದ್ಧಿಮತ್ತೆ ('ಎಐ') ಪರಿಚಯಿಸುವ ಯೋಜನೆಯನ್ನು ಅಮೆಜಾನ್ ಪ್ರಕಟಿಸಿದೆ.
ಸ್ಥಳೀಯ ಕ್ಲೌಡ್ ಮತ್ತು ಕೃತಕ ಬುದ್ಧಿಮತ್ತೆ (ಎಐ) ಮೂಲಸೌಕರ್ಯದಲ್ಲಿ ಕಂಪನಿಯು 12.7 ಶತಕೋಟಿ ಡಾಲರ್ ಹೂಡಿಕೆ ಮಾಡುವ ಹಾದಿಯಲ್ಲಿದೆ. ಅದರ ವಿಭಿನ್ನ ವಹಿವಾಟುಗಳ ಮೂಲಕ 15 ದಶಲಕ್ಷಕ್ಕಿಂತಲೂ ಹೆಚ್ಚು ಸಣ್ಣ ಉದ್ದಿಮೆಗಳಿಗೆ ಕೃತಕ ಬುದ್ಧಿಮತ್ತೆ (ಎಐ) ಪ್ರಯೋಜನಗಳನ್ನು ತಲುಪಿಸಲಿದೆ. 2030ರ ವೇಳೆಗೆ 4 ದಶಲಕ್ಷ ಸರ್ಕಾರಿ-ಶಾಲಾ ವಿದ್ಯಾರ್ಥಿಗಳಿಗೆ 'ಎಐ' ಸಾಕ್ಷರತೆ ಮತ್ತು ವೃತ್ತಿ ತಿಳಿವಳಿಕೆ ಒದಗಿಸಲು ಅಮೆಜಾನ್ ಈಗಾಲೇ ಬದ್ಧವಾಗಿದೆ. ಅಮೆಜಾನ್‍ಡಾಟ್‍ಇನ್ ನಲ್ಲಿ ಖರೀದಿ ಸುಲಭಗೊಳಿಸಲು ಮತ್ತು ಲಕ್ಷಾಂತರ ಗ್ರಾಹಕರಿಗೆ ತನ್ಮಯಗೊಳಿಸುವ ಅನುಭವ ಒದಗಿಸಲು ಕಂಪನಿಯು ಕೃತಕ ಜಾಣ್ಮೆ (ಎಐ) ಬಳಸಿಕೊಳ್ಳುವುದನ್ನು ಮುಂದುವರಿಸಲಿದೆ ಎಂದು ಅಮೆಜಾನ್ ಇಂಡಿಯಾದ ಕಂಟ್ರಿ ಮ್ಯಾನೇಜರ್ ಸಮೀರ್ ಕುಮಾರ್ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಇಂಡಿಯಾಎಐ ಮಿಷನ್ ಸಿಇಒ ಅಭಿಷೇಕ್ ಸಿಂಗ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
"ಮೂರನೇ ಹಂತದ ನಗರದ ಸಣ್ಣ ಉದ್ದಿಮೆ ಮಾಲೀಕರು ವೃತ್ತಿಪರತೆಯಿಂದ ಉತ್ಪನ್ನದ ಹೆಸರು, ಬೆಲೆ, ಉಪಯುಕ್ತತೆಯ ಡಿಜಿಟಲ್ ಪ್ರಸ್ತುತಿಯನ್ನು ನಿಮಿಷಗಳಲ್ಲಿ ರಚಿಸಲು 'ಎಐ' ಬಳಸಬಹುದಾಗಿದೆ. ಸರ್ಕಾರಿ ಶಾಲೆಯ ವಿದ್ಯಾರ್ಥಿಯು ಹೊಸ ವೃತ್ತಿಬದುಕಿಗೆ ಬಾಗಿಲು ತೆರೆಯುವ ಕೌಶಲಗಳನ್ನು ಕಲಿಯುವಾಗ ಅಥವಾ ಗ್ರಾಹಕರು ಟೈಪ್ ಮಾಡದೆಯೇ ತಮ್ಮ ಸ್ಥಳೀಯ ಭಾಷೆಯಲ್ಲಿ ಖರೀದಿ ಮಾಡುವ ಸಂದರ್ಭಗಳಲ್ಲಿ ತಂತ್ರಜ್ಞಾನವು ನಿಜವಾಗಿಯೂ ಎಲ್ಲರಿಗೂ ಸೇವೆ ಒದಗಿಸುತ್ತದೆ. ಪ್ರತಿಯೊಬ್ಬ ಭಾರತೀಯನು ಈ ಪರಿವರ್ತನೆಯ ಪ್ರಯೋಜನ ಪಡೆಯಲು ಅರ್ಹನೆಂದು ನಾವು ನಂಬಿರುವುದರಿಂದ 'ಎಐ' ಮೂಲಸೌಕರ್ಯ ಮತ್ತು ಪರಿಕರಗಳನ್ನು ನಾವು ದೊಡ್ಡ ಪ್ರಮಾಣದಲ್ಲಿ ನಿರ್ಮಿಸುತ್ತಿದ್ದೇವೆ. ಇದನ್ನು ಕಾರ್ಯಗತಗೊಳಿಸಲು ಸರ್ಕಾರದ 'ಎಐ' ಧ್ಯೇಯವನ್ನು ಬೆಂಬಲಿಸಲು ನಾವು ಹೆಮ್ಮೆಪಡುತ್ತೇವೆ" ಎಂದು ಹೇಳಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ




