ತಿಮ್ಮಾಪೂರದಲ್ಲಿ ಕಲಿಕಾ ಹಬ್ಬ ಉದ್ಘಾಟನೆ

Upayuktha
0


ಹುನಗುಂದ: ತಾಲೂಕಿನ ತಿಮ್ಮಾಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಂಜವಾಡಗಿ ಕ್ಲಸ್ಟರ್ ಮಟ್ಟದ ಎಫ್ ಎಲ್ ಎನ್ ಮಕ್ಕಳ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಎಸ್.ಡಿ.ಎಂ.ಸಿ. ನೂತನ ಅಧ್ಯಕ್ಷ ಯಮನಪ್ಪ ಜಬ್ಬಣ್ಣ ವಡ್ಡರ ವಿಶೇಷ ರೀತಿಯ ಪೆಟ್ಟಿಗೆಯಿಂದ ಕಲಿಕಾಹಬ್ಬದ ಶಿರೋನಾಮೆಯ ನಾಮಫಲಕವನ್ನು ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿದರು.

             

ಈ ಸಂದರ್ಭದಲ್ಲಿ, ಹುನಗುಂದ ತಾಲೂಕಿನ ಬಿಂಜವಾಡಗಿ ಕ್ಲಸ್ಟರ್, ಸಮೂಹ ಸಂಪನ್ಮೂಲ ಅಧಿಕಾರಿ ಲಕ್ಷ್ಮಣ ಲಮಾಣಿ  ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಬಡವರ ಸಾಮಾಜಿಕವಾಗಿ ಹಿಂದುಳಿದವರ ಮಕ್ಕಳೇ ಹೆಚ್ಚಾಗಿ ಓದುತ್ತಿದ್ದು ಅವರು ದೈಹಿಕವಾಗಿ ಮಾನಸಿಕವಾಗಿ ಮತ್ತು ಬೌದ್ದಿಕವಾಗಿ ಅತ್ಯಂತ ಸಮರ್ಥರಿದ್ದಾರೆ ಅವರನ್ನು ನಗರದ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳೊಂದಿಗೆ ಸ್ಪರ್ಧೇಗಳಿಯುವಂತೆ ಮಾಡುವಲ್ಲಿ ಇಂತಹ ಕಾರ್ಯಕ್ರಮಗಳು ಪೂರಕವಾಗಿವೆ ಎಂದರು.


ಶಾಲೆಯ ಮುಖ್ಯ ಗುರು ಮಾತೆ ಕೆ.ಎಚ್.ಬೆಲ್ಲದ ಮಾತನಾಡಿ ಕನ್ನಡ ಶಾಲಾ ಕಲಿಕಾ ಹಬ್ಬಗಳು ಮಕ್ಕಳ ಕಲಿಕೆಯನ್ನು ಉತ್ತೇಜಿಸಲು ಮೊದಲ ಸಾಕ್ಷಾರತೆ ಮತ್ತು ಅಕ್ಷರ ಜ್ಞಾನವನ್ನು ಬಲಪಡಿಸಲು ಸರಕಾರವು ಕಲಿಕಾ ಅಂತರವನ್ನು ಸರಿದೋಗಿಸಲು ಆಯೋಜಿಸಲಾಗಿದೆ. ಈ ಹಬ್ಬಗಳಲ್ಲಿ ಸ್ಪರ್ಧೆಗಳು ಸಾಂಸ್ಕ÷್ಷತಿಕ ಕಾರ್ಯಕ್ರಮಗೊಳಿಂದಿಗೆ ಮಕ್ಕಳಲ್ಲಿ ಕಲಿಕಾ ಪ್ರೇರಣೆ ಮತ್ತು ಪ್ರತಿಭೆಗಳನ್ನು ಹೊರತರುವ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.


ಮುoದುವರೆದು ನಮ್ಮ ಶಾಲೆಯಲ್ಲಿ ಮೈದಾನವು ಚಿಕ್ಕದು ಇರುವದರಿಂದ ಶಾಲಾ ಕೋಠಣಿಯಲ್ಲಿಯೆ ಎಲ್ಲಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಎಂದು ತಿಳಿಸಿದರು. ವೇದಿಕೆಯಲ್ಲಿ  ಹಿರೇಬಾದವಾಡಗಿ ಶಾಲೆಯ ಮುಖ್ಯಗುರು ಎಸ್.ಜಿ. ಹುದ್ದಾರ ಜಾಲಕಮಲದಿನ್ನಿಯ ಪ್ರಬಾರಿ ಮುಖ್ಯ ಗುರುಗಳಾದ ಆನಂದ ಬೇಗಾರ. ಘಟ್ಟಿಗನೂರ ಪ್ರಬಾರಿ ಮುಖ್ಯಗುರುಮಾತೆ  ಜಿ.ಎಸ್.ದರಗಾದ ಗ್ರಾಮ ಪಂಚಾಯತ ಸದಸ್ಯೆ ಶರಣಮ್ಮ ರಾಟ ಶಿಕ್ಷಣ ಪ್ರವಿ ಮಲ್ಲಮ್ಮ ಹನಮಗೌಡರ ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಶೈಲಾ ಬಸವರಾಜ ಹೇರೂರ ಸೈನಜಾ ಬೇಗಂ, ಬಾಷಾಸಾಬ ದರ್ಜಿ, ಮಾಂತೇಶ ಪೂಜಾರಿ, ರೇಣುಕಾ ಜಡಿಯಪ್ಪ, ವರ್ಕರ್ ರಮೇಶ ಹನುಮಂತ ಚಲವಾದಿ, ಶಿವಲಿಂಗಪ್ಪ ದರ್ಮಣ್ಣ ಮಾದರ, ಶ್ರೀಕಾಂತ ಚಿದಾನಂದ ಚಲವಾದಿ, ಯಮನಪ್ಪ ಹುಲಿಗೆಪ್ಪ ಮಾದರ, ಯಮನಪ್ಪ ಜಟ್ಟೆಪ್ಪ ಮಾದರ ಸವಿತಾ ಬಸವರಾಜ ಮಾದರ ಸರಸ್ವತಿ ಹುಲಗಪ್ಪ ಕಡೆಮನಿ, ವೇದಿಕೆಯಲ್ಲಿದ್ದರು.


ಕುಮಾರಿ ಸ್ನೇಹಾ ಮಡಿವಾಳರ ಹಾಗೂ ಸಂಘಡಿಗರು ಪ್ರಾರ್ಥಿಸಿದರು ಶಿಕ್ಷಕ ಬಿ.ಎಸ್. ತೋಟಿಗೇರ ಸ್ವಾಗತಿಸಿ ಪರಿಚರಿಸಿದರು.ಶಿಕ್ಷಕ ಮಂಜುನಾಥ ಟಕ್ಕಳಿಕಿ ನಿರೂಪಿಸಿದರು. ಶಿಕ್ಷಕಿ ಶಾರದಾ ಹುಲಗೇರಿ ವಂದಿಸಿದರು.


ಕಾರ್ಯಕ್ರಮದಲ್ಲಿ ಹುನುಗುಂದ ಸಮೂಹ ಸಂಪನ್ಮೂಲ ಕೇಂದ್ರದ ಬಸವರಾಜ ಮುಂಡೆವಾಡಿ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಎಂ ಟಿ ನಡುವಿನಮನಿ, ಹಾಗೂ ಪ್ರಾಥಮಿಕ ನೌಕರರ ಸಂಘದ ಗೌರವಾಧ್ಯಕ್ಷ ಎಸ್ ಜಿ ಹುದ್ಧಾರ ಹಗೇದಾಳ ಶಾಲೆಯ ಗೀತಾ ತಾರಿವಾಳ, ಕಡಿವಾಲ ಇನಾಂ ಶಾಲೆಯ ಮುಖ್ಯ ಗುರುಮಾತೆ ಐ.ಪಿ ನಾಯಕ ಮಾಂತೇಶ ಆರ್ ಅಮರಾವತಿ ಶಾಲೆಯ ಶಿಕ್ಷಕರಾದ ಆರ್ ಎಸ್ ಹುಲಗೇರಿ . ರಾಮವಾಡಗಿ ಶಾಲೆಯ ಶಿಕ್ಷಕ ತೊಳಮಟ ವೀರಾಪೂರ ಶಾಲೆಯ ಶಿಕ್ಷಕಿ ಕೆ.ಕೆ. ಕೊನೆಸಾಗರ ಬೇಕಮಲದಿನ್ನಿ ಶಾಲೆಯ ಮುಖ್ಯ ಗುರುಗಳಾದ ಎಮ್.ಟಿ. ನಡುವಿನಮನಿ ಚಿಂತೆ ಕಮಲದಿನ್ನಿ ಎಸ್.ಬಿ.ಬಾದವಾಡಗಿ ಜಾಲಕಮ್ಮದಿನ್ನಿ ಶಾಲೆಯ ಶಿಕ್ಷಕರಾದ ಎ.ಎಚ್. ಸೂಣಕಲ್ಲ ಶ್ರೀಧರ ವೈ.ಎಸ್, ಗಟ್ಟಿಗನೂರು ಶಾಲೆಯ ಶಿಕ್ಷಕಿ ಮೀನಾಕ್ಷಿ ಹಗೇದಾಳ, ಶ್ರೀಮತಿ ಗುರಿಕಾರ ಬಿಂಜವಾಡಗಿ ಶಾಲೆಯ ಶ್ರೀಮತಿ ಅಕ್ಕಮಾಹಾದೇವಿ ಹಳ್ಳೂರ ಹಾಗೂ ಗ್ರಾಮದ ಮುಖಂಡರು ಗ್ರಾಮಸ್ಥರು ಪಾಲ್ಗೊಂಡಿದ್ದರು.


ಚಕ್ಕಡಿ ಮೇರವಣಿಗೆ ಕಾರ್ಯಕ್ರಮಕ್ಕೆ ಪೂರ್ವದಲ್ಲಿ ಶಾಲೆಯಿಂದ ಎಸ್.ಡಿ.ಎಮ್ ಸಿ. ಅಧ್ಯಕ್ಷರು ಹಾಗೂ ಸದಸ್ಯರು ಶಿಕ್ಷಕರು ವಿವಿಧ ಶಿಕ್ಷಕರು ಗ್ರಾಮಸ್ಥರು ಶ್ರೀಮಾರುತೇಶ್ವರ ಹಾಗೂ ಬಸವೇಶ್ವರ ದೇವಾಲಯದ ಆವರಣದವರೆಗೆ ಪ್ರಕಾರ ಪೇರಿಯನ್ನ ಮಾಡಲಾಗಿತ್ತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top