ಐಸಿರಿ ಪ್ರಕಾಶನ ಪ್ರಕಟಿಸಿದ ವಿಶೇಷ ಕಾದಂಬರಿ "ಸನ್ನಿಧಿ" ಲೋಕಾರ್ಪಣೆ

Upayuktha
0


ಬೆಂಗಳೂರು: ನಗರದ ಶೇಷಾದ್ರಿಪುರಂ ಕಾಲೇಜಿನ ಆವರಣದಲ್ಲಿ ಸುಮೇರು ಟ್ರಸ್ಟ್‌ ಮತ್ತು ಗೋಧೂಳಿ ಕನ್ನಡ ಸಂಘದ ಸಹಭಾಗಿತ್ವದಲ್ಲಿ ಡಾ. ಸುರೇಶ್‌ ಪಾಟೀಲರು ರಚಿಸಿದ "ಸಾನಿಧ್ಯ" ಅಲೌಕಿಕ ಕಾದಂಬರಿ ಲೌಕಿಕ ಮನುಷ್ಯರ ಮನದಲ್ಲಿ ಮುಡುವ ಹಲವಾರು ಪ್ರಶ್ನೆಗಳ ಉತ್ತರದಂತಿರುವ ಶ್ರೀಮಧ್ವಾಚಾರ್ಯರ ಕುರಿತಾದ ಕಾದಂಬರಿ ಲೋಕಾರ್ಪಣೆಗೊಂಡಿತು. ಪುಸ್ತಕ ಲೋಕಾರ್ಪಣೆಯನ್ನು ನಾಡೋಜ ಡಾ. ಮನು ಬಳಿಗಾರ್‌ರವರು ಮಾಡಿದರು. ಕಾದಂಬರಿಯ ಕುರಿತಾಗಿ ಲೇಖಕಿ, ವಿಮರ್ಶಕಿ ಡಾ. ವೀಣಾ ಬನ್ನಂಜೆಯವರು ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಮತ್ತೊಬ್ಬ ಹಿರಿಯ ಸಾಹಿತಿ, ನಿವೃತ್ತ ಪ್ರಾಧ್ಯಾಪಕ ಡಾ.ಕೃಷ್ಣ ಕಟ್ಟಿಯವರು ವಹಿಸಿದ್ದರು.


ಕಾರ್ಯಕ್ರಮದ ಆರಂಭ ದಾಸವಾಣಿ ಕರ್ನಾಟಕ ತಂಡದ ಶ್ರೀಮತಿ ಮಾನಸಾ ಕುಲಕರ್ಣಿ ಮತ್ತು ತಂಡದವರಿಂದ ಹರಿದಾಸರ ಪದಗಳ ಗಾಯನದಿಂದ ಆರಂಭವಾಯಿತು. ಶ್ರೀಮತಿ ಮಾನಸಾ ಕುಲರ್ಣಿಯವರ ಸುಶ್ರಾವ್ಯ ಗಾಯನದಿಂದ ಪ್ರಾರ್ಥನೆ  ಮಾಡಿದರು. ಐಸಿರಿ ಪ್ರಕಾಶನದ ಪ್ರಕಾಶಕರಾದ ಡಾ.ಮಂಜುನಾಥ್‌ ಪಾಳ್ಯರವರು ವೇದಿಕೆಯ ಗಣ್ಯರ ಸಂಕ್ಷಿಪ್ತ ಪರಿಚಯ ಮಾಡುತ್ತ ಅವರಿಗೆ ಸ್ವಾಗತಿಸಿದರು. ವೇದಿಕೆಯ ಮೇಲೆ ಉಪಸ್ಥಿತಸಿದ್ದ ಶೇಷಾದ್ರಿಪುರಂ ಕಾಲೇಜಿನ ಪ್ರಾಚಾರ್ಯರಾದ ಡಾ. ಎನ್‌ಎಸ್‌ ಸತೀಶ್‌, ಲೇಖಕ ಡಾ. ಸುರೇಶ ಪಾಟೀಲರು, ಮುಖ್ಯ ಅತಿಥಿಗಳಾದ ನಾಡೋಜ ಡಾ. ಮನು ಬಳಿಗಾರ್‌, ಮತ್ತೊಬ್ಬ ಅತಿಥಿಗಳಾದ ಡಾ.ವೀಣಾ ಬನ್ನಂಜೆ, ಸಭೆಯ ಅಧ್ಯಕ್ಷತೆ ವಹಿಸಿದ್ದ ಡಾ.ಕೃಷ್ಣ ಕಟ್ಟಿಯವರು ಹಾಗೂ ಡಾ. ಮಂಜುನಾಥ್‌ ಪಾಳ್ಯರವರು ಪುಸ್ತಕದ ಲೋಕಾರ್ಪಣೆ ಮಾಡಿದರು.



ಲೋಕಾರ್ಪಣೆಯನ್ನು ಮಾಡಿದ ಪುಸ್ತಕಕ್ಕೆ ಶುಭ ಹಾರೈಸುತ್ತಾ ಮಾತನಾಡಿದ ಡಾ. ಮನು ಬಳಿಗಾರ್ ಕೃತಾರ್ಥಭಾವದಿಂದ ಪುಸ್ತಕದ ಬಿಡುಗಡೆ ಮಾಡಿದ್ದೇನೆ. ಎಂದು ಹೇಳುತ್ತಾ ತಮ್ಮ ಮತ್ತು ಇಸ್ಕಾನ್‌ ಗುರುಗಳಾದ ಶ್ರೀಲ ಪ್ರಭುಪಾದರ ಕುರಿತಾಗಿ ತಾವು ಬರೆದ ಪುಸ್ತಕವನ್ನು ಸ್ಮರಿಸಿಕೊಳ್ಳುತ್ತಾ ಇದೇ ನಂಟು ಈ ಕಾದಂಬರಿ ಲೋಕಾರ್ಪಣೆ ಮಾಡುವ ಪುಣ್ಯ ದೊರೆತಿರ ಬಹುದೇನೋ ಎಂದರು. ಪ್ರಸ್ತುತ ಈಗಿನ ಪರಿಸ್ಥಿತಿಯಲ್ಲಿ ನಾವು  ತಿಳಿಯಲೇಬೇಕಾದ ದರ್ಶನ  ಪರಿಚಯ ಮಾಡಿಸಿದ್ದಾರೆ. ತಾರತಮ್ಯಗಳ ಸಿದ್ಧಾಂತ ಇಟ್ಟುಕೊಂಡು ಬರೆದ, ವಿಜ್ಞಾನ ತತ್ವ ಜ್ಞಾನ ಸಮನ್ವಯ ಮಾಡಿ ಬರೆದಿದ್ದಾರೆ. ಯಶಸ್ವಿ ಸಿದ್ಧಾಂತದ ನಿರೂಪಣೆ. ನಮ್ಮ ದೇಶ ಪ್ರಪಂಚದಲ್ಲಿ ಉತ್ತಮ ಅದನ್ನು ಜಗಕ್ಕೆ ತೋರಿಸುವ ಕಾರ್ಯ ಇನ್ನೂ ಆಗಬೇಕಿದೆ. ಭಿನ್ನತೆ ಇದ್ದಾಗಲೂ ದರ್ಶನ ಇರುವುದು ಸಾಧ್ಯ ಎಂದು ತೋರಿಸಿ ಕೊಟ್ಟಿದ್ದಾರೆ ಎಂದು ಹೇಳಿದರು.


ನಂತರ ಡಾ. ಸುರೇಶ ಪಾಟೀಲ ದಂಪತಿಗಳಿಗೆ ಸನ್ಮಾನ ಸನ್ಮಾನಿಸಲಾಯಿತು. ತಮ್ಮ ಕೃತಿಯ ಬಗೆಗೆ ಹೇಳುತ್ತಾ ಡಾ. ಸುರೇಶ ಪಾಟೀಲರು ಸತತ ಎರಡು ವರ್ಷಗಳ ಪರಿಶ್ರಮದಿಂದ ಬರೆದಿರುವ ಕಾದಂಬರಿಯನ್ನು ಆರಂಭಿಸಿದಾಗ ಎದುರಾದ ಹಿಂಜರಿಕೆ ಮತ್ತು ಅಡೆ ತಡೆಗಳ ಬಗೆಗೆ ಹೇಳಿದರು. ಸ್ವಭಾವತಃ ಯಾವುದೇ ವಿವಾದ ಅಥವಾ ಅಪಾಯಗಳನ್ನು ಬಯಸದೇ ಇರುವ ವಿವಾದಿತವಾದ ವಿಷಯಗಳನ್ನು ಮುಟ್ಟದೇ ತಮ್ಮ ಚೌಕಟ್ಟಿನಲ್ಲಿಯೇ ಬರೆಯುವ ಸ್ವಭಾವವನ್ನು ಹೇಳಿಕೊಳ್ಳುತ್ತಾ, ಈ ಕಾದಂಬರಿಯನ್ನು ಬರೆಯಲು ಅನೇಕ ಪುಸ್ತಕಗಳ ಅಧ್ಯಯನ ಮಾಡಿ ವಿಷಯ ಸಂಗ್ರಹ ಮಾಡಿ ತಯಾರಿಗೆ ಸಹಕರಿಸಿದ ಅವರ ವಿದ್ಯಾರ್ಥಿ ಕಾರ್ತಿಕ್ ಎಸ್ ಮತ್ತು ತಮ್ಮ ಮಗ ವೈಭವ, ಹಾಗೂ ಕಾದಂಬರಿಯನ್ನು ಬರೆಯಲು ಸಹಕಾರ ನೀಡಿದ ಎಲ್ಲರಿಗೂ ವಿಶೇಷವಾಗಿ ಅವರ ಶ್ರೀಮತಿ ವಿಜಯಲಕ್ಷ್ಮಿಯವರಿಗೂ ಧನ್ಯವಾದಗಳನ್ನು ಹೇಳಿದರು.


ಸನ್ನಿಧಿ ಇಲ್ಲಿಯವರೆಗೂ ಕನ್ನಡ ಅಥವಾ ಯಾವುದೇ ಭಾಷೆಯಲ್ಲಿ ಶ್ರೀಮಧ್ವಾಚಾರ್ಯರ ಬಗೆಗೆ ಬರೆದಿರುವ ಮೊದಲ ಕಾದಂಬರಿಯಾಗಿದ್ದು ಸಾಮಾನ್ಯವಾಗಿ ಎಲ್ಲರೂ ಮಧ್ವಾಚಾರ್ಯರನ್ನು ದ್ವೈತ ಸಿದ್ಧಾಂತವನ್ನು ಶಿಷ್ಟಾಚಾರದ ಪ್ರತೀಕವಾಗಿ ನೋಡುತ್ತೇವೆ, ನಿಜವಾದ ಮಧ್ವಾಚಾರ್ಯರರನ್ನು ತಿಳಿದುಕೊಳ್ಳುವ ಪ್ರಯತ್ನ ಆಗಿಯೇ ಇಲ್ಲ. ಕೇವಲ ಮತೀಯ ಹಾಗೂ ಪೂರ್ವಾಗ್ರಹ ಪೂರ್ವಕವಾಗಿ ಸಂಕುಚಿತ ಮನೋಭಾವನೆಯ ತತ್ವವೆಂದೇ ಬಿಂಬಿಸುತ್ತಾ ಬಂದಿರುವದರಿಂದ ಹೆಚ್ಚು ಜನರು ಹಾಗೆಯೇ ತಿಳಿದುಕೊಂಡಿದ್ದಾರೆ ಎಂದು ಹೇಳಿದರು. ಕಾದಂಬರಿ ಬರೆಯಲು ಮೂಲ ಪ್ರೇರಣೆ ವರ್ಗಿಸ್ ಅಬ್ರಹಾಂ ಎಂಬ ಪಾಶ್ಚಾತ್ಯ ವಿದ್ವಾಂಸನ ಪುಸ್ತಕದಿಂದ ಮೂಲಕ ಓದಿದ ಮೇಲೆ ವಿಶ್ವಾತ್ಮಕತೆ ತತ್ವ ಮತ್ತು ಅದನ್ನು ಪ್ರತಿಪಾದಿಸಿದ ಮಧ್ವಾಚಾರ್ಯರ ಬಗೆಗೆ ಬರೆಯಲೇ ಬೇಕೆಂದು ನಿರ್ಧರಿಸಿ ಬರೆದ ಕಾದಂಬರಿ ಎಂದು ಹೇಳಿದರು.



ವೀಣಕ್ಕ ಎಂದೇ ಚಿರಪರಿಚಿತ ವೀಣಾ ಬನ್ನಂಜೆಯವರು ಇಂತದ್ದೊಂದು ಸಾಹಸಕ್ಕೆ ಪಾಟೀಲರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತಾ  ತತ್ವಶಾಸ್ತ್ರಜ್ಞ ಹಾಗೂ ಸಿದ್ಧಾಂತಕ್ಕೆ ಕಾರಣರಾದ ವ್ಯಕ್ತಿಯ ಕುರಿತು ಬರೆಯುವುದ ಈ ಕಾಲ ಘಟ್ಟದಲ್ಲಿ ಎಷ್ಟು ದೊಡ್ಡ ಸವಾಲು ಎಂದು ಹೇಳಿ ಮೌಢ್ಯ  ಮತ್ತು ಅಂಧಕಾರ ಪ್ರತಿಪಾದಿಸುವ, ಪ್ರಸಿದ್ಧರು ತಮ್ಮ ಸ್ವಾಮಿತ್ವ ಹೇಳುವ ಜನರ ನಡುವೆ ಯಾವುದೇ ವಿವಾದದ ಸುಳಿಯಲ್ಲಿ ಸಿಲುಕದ ಇಂತಹ ಒಂದು ಉತ್ತಮ ಕಾದಂಬರಿಯ ರಚನೆಯಾಗಿರುವುದು ಅಭಿನಂದನೀಯ ಎಂದರು.


ಮಹಾಭಾರತದ ಯುದ್ಧದ ನೇರ ವಿವರಣೆ ನೀಡಲು ಶಕ್ತಿಯನ್ನು ಪಡೆದ ಸಂಜಯನನ್ನು ಸ್ಮರಿಸಿ ಅವನ ವಿವರಣೆ ನ್ಯೂಟ್ರಲ್‌ ವರಿದಿಗಾರನ ಉತ್ತಮ ಉದಾಹರಣೆಯಾಗಿದ್ದು ಇಂತಹ ಒಂದು ತಟಸ್ಥ ಮನಸ್ಥಿತಿಯೊಂದಿಗೆ ಸಂಪೂರ್ಣ ಕಾದಂಬರಿಯನ್ನು ಒಬ್ಬ ವೈಶ್ವಿಕ ವರದಿಗಾರರಾಗಿ ಮಹಾಭಾರತದ ಸಂಜಯನ ರೀತಿಯಿಂದ ರಚಿಸಿದ್ದಾರೆ ಎಂದರು. ರಾಗ ದ್ವೇಷಗಳಿಲ್ಲದ ಅಂದಿನ ನಡೆದಿರಬಹುದಾದ ಯಥಾ ಸ್ಥಿತಿ ಚಿತ್ರಣ ಮಾಡುವ ರೀತಿಯ ನಿರೂಪಣೆ ಸನ್ನಿಧಿ ಕಾದಂಬರಿಯಲ್ಲಿ ಕಂಡು ಬಂದಿದೆ ಎಂದರು.


ಶಾಸ್ತ್ರೀಯ ವಲಯದ ಅಪಾಯದ ಮಧ್ಯ ತ್ರಯ್ಯಸ್ಥ ಭಾವದಿಂದ ಬರೆದಿರುವ ಸನ್ನಿಧಿ ಇಷ್ಟವಾಗುತ್ತದೆ. ದಕ್ಷಿಣ ಕರ್ನಾಟಕಕ್ಕೆ ಹೋದ ತನ್ನವರೊಬ್ಬ ಬಗೆಗೆ ತಿಳಿಯುವ ಉತ್ತರ ಕರ್ನಾಟಕದ ಪಾತ್ರ ಜನಮೇಜಯ ಅವನ ಮೂಲಕ ಮಧ್ವಾಚಾರ್ಯರರ ಬಗ್ಗೆ ತಿಳಿದು ಕೊಳ್ಳುತ್ತಾನೆ. ಇದು ಒಳ್ಳೆಯ ತಂತ್ರ, ಸತ್ಯ ಶೋಧ, ವಿಮರ್ಶೆ ಬಿಡದೇ ಬರೆದಿರುವ ಕಾದಂಬರಿ. ಜೀವಾತ್ಮ ಪ್ರವೇಶದ ಆಯಾಮದಲ್ಲಿ ಕೂಡ ನೋಡಬಹುದು ಎಂದು ಮಾತನಾಡಿದರು.


ಲೋಕಾರ್ಪಣೆ ಮಾಡಿದ ಡಾ. ಮನು ಬಳಿಗಾರ್‌ರವರಿಗೆ ಐಸಿರಿ ಟ್ರಸ್ಟ್‌ನ ವತಿಯಿಂದ ಸನ್ಮಾನಿಸಲಾಯಿತು. 


ತಮ್ಮ ಅಧ್ಯಕ್ಷೀಯ ಭಾಷಣ ಮಾಡಿದ ಡಾ. ಕೃಷ್ಣ ಕಟ್ಟಿ ಅವರ ಅನ್ಯ ಧಾರ್ಮಿಯರನ್ನು ಕೇಳುವಂತೆ ಮಾಡದೇ ಇರುವುದಕ್ಕೆ ಕಾರಣ ಮಧ್ವಾಚಾರ್ಯರ ತತ್ವ ಹಾಗೂ ಸಿದ್ಧಾಂತವನ್ನು ವಿಶಾಲ ಮನೋಭಾವದಿಂದ ನೋಡದೇ ಇರಲು ಕಾರಣ ಇರಬಹುದು. ಎಂದು ಹೇಳುತ್ತಾ ಸನ್ನಿಧಿ ಕಾದಂಬರಿ ಮನೋರಂಜನೆಗಾಗಿ ಅಲ್ಲ ಮನುಷ್ಯನ ಅರಿವಿನ ಹೊತ್ತು ಎನ್ನಬಹುದಾಗಿದೆ ಎಂದು ಹೇಳಿದರು. ಮಧ್ವಾಚಾರ್ಯರರು ಕೊಟ್ಟ ದೃಷ್ಟಿ ದೇವರನ್ನ ಹೇಗೆ ನೋಡಬೇಕು ಎಂದು ಹೇಳಿಕೊಟ್ಟಿದ್ದಾರೆ. ಇಂತಹ ತತ್ವವನ್ನು ಹೇಳಿಕೊಟ್ಟ ಆಚಾರ್ಯರನ್ನು ಯಾವ ರೀತಿ ನೋಡಬಹುದೆಂದು  ಪಾಟೀಲರು ಹೇಳಿ ಕೊಟ್ಟಿದ್ದಾರೆ. ಸಮಾಜದಲ್ಲಿ ತತ್ವಗಳು ಗುತ್ತಿಗೆಗಾರರ ಕೈಯಲ್ಲಿ ನಲುಗುತ್ತಿರುವ ಮಧ್ವಾಚಾರ್ಯರರು, ಬಸವಣ್ಣನವರ ಜೀವನ ಹಾಗೂ ತತ್ವವನ್ನು ಜನ ಸಾಮಾನ್ಯರೆಲ್ಲರೂ ವಿಶಾಲ ದೃಷ್ಟಿಕೋಣದಿಂದ ನೋಡುವ ಅವಕಾಶವನ್ನು, ತತ್ವಜ್ಞಾನವು ಗರ್ಭ ಗುಡಿಯಿಂದ  ಹೊರ ಬಂದಂತೆ ಭಾಸವಾಗುವ ಈ  ಕಾದಂಬರಿ ಸನ್ನಿಧಿ. ಜೀವನ ಮತ್ತು ದರ್ಶನ ಸಾನಿಧ್ಯ ಪೂರ್ವಕವಾಗಿದೆ ಎಂದು ಹೇಳಿದರು.


ಡಾ. ಕೃಷ್ಣ ಕಟ್ಟಿ ಹಾಗೂ ಡಾ. ವೀಣಾ ಬನ್ನಂಜೆಯವರನ್ನು ಸನ್ಮಾನಿಸಲಾಯಿತು. ವಂದನಾರ್ಪಣೆ ಯನ್ನು ಶೇಷಾದ್ರಿಪುರಂ ಕಾಲೇಜಿನ ಪ್ರಾಂಶುಪಾಲರಾದ ಎನ್‌ ಎಸ್‌ ಸತೀಶರವರು ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಡಾ. ಎಸ್‌ ಎಲ್‌ ಮಂಜುನಾಥ್‌ರವರು ಸೊಗಸಾಗಿ ಮಾಡಿದರು. ಕಾರ್ಯಕ್ರಮದಲ್ಲಿ ಐಸಿರಿ ಪ್ರಕಾಶನದ ಡಾ.ರೂಪಾ ಮಂಜುನಾಥ್‌ ಹಾಗೂ ತಂಡದವರು ದೂರದರ್ಶನದ ಸುದ್ದಿ ಸಂಪಾದಕರಾಗಿದ್ದ ಡಾ. ಮೈ.ಸಿ ಪಾಟೀಲ ಹಾಗೂ ಖ್ಯಾತ ಲೇಖಕರು ಮತ್ತು ಪ್ರಸಿದ್ಧ ಜ್ಯೋತಿಷಿಗಳಾದ ಮಹಾಬಲ ಮೂರ್ತಿ ಕೊಡ್ಲೆಕೆರೆಯವರು ಉಪಸ್ಥಿತರಿದ್ದರು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top