ಕಾಸರಗೋಡು: ಅಯ್ಯಪ್ಪ ದೀಪೋತ್ಸವ ಪ್ರಯುಕ್ತ ನೃತ್ಯ ವೈಭವ

Upayuktha
0


ಕಾಸರಗೋಡು: ಚಟ್ಟಂಚಾಲ್ ಶ್ರೀ ಧರ್ಮಶಾಸ್ತಾ ಭಜನಾ ಮಂದಿರ ಕಾವುಂಪಳ್ಳದಲ್ಲಿ ಶ್ರೀ ಅಯ್ಯಪ್ಪ ದೀಪೋತ್ಸವದ ಪ್ರಯುಕ್ತ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ(ರಿ) ಕಾಸರಗೋಡು ವತಿಯಿಂದ ನೃತ್ಯ ವೈಭವ ಕಾರ್ಯಕ್ರಮ ಸಹಸ್ರಾರು ಕಲಾಭಿಮಾನಿಗಳ ಭಕ್ತರ ಸಮ್ಮುಖದಲ್ಲಿ ನಡೆಯಿತು.


ಸಂಸ್ಥೆಯ ಚೆಂಗಳ ವಿಭಾಗದ ಬಹುವಿಧ ನೃತ್ಯ ಪ್ರತಿಭೆ ತನುಷ ಅವರ ಯೋಗ ನೃತ್ಯ ಜನಮನ ಗೆದ್ದಿತು. ಕಲಾ ವೈಭವ ಕಾರ್ಯಕ್ರಮ ನೆರೆದ ಭಕ್ತರ ಕಲಾ ಭಿಮಾನಿಗಳ ಅಪಾರ ಮೆಚ್ಚುಗೆಗೆ ಪಾತ್ರವಾಯಿತು. ಶ್ರೀ ಅಯ್ಯಪ್ಪ ಭಜನಾ‌ ಮಂಡಳಿಯ ಕಾರ್ಯಕರ್ತರು ಭಾಗವಹಿಸಿದ ಎಲ್ಲಾ ಕಲಾ ಮಾಣಿಕ್ಯಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಈ ವೇಳೆ ಸಂಸ್ಥೆಯ ಅಧ್ಯಕ್ಷೆ ಡಾ. ವಾಣಿಶ್ರೀ ಅವರಿಗೆ ಗೌರವ ಸ್ಮರಣಿಕೆ ನೀಡಿ ಹರಸಲಾಯಿತು. ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಅಚ್ಯುತ ಭಟ್, ಕಾರ್ಯಕ್ರಮದ ಸಂಯೋಜಕರಾದ ಪ್ರಿಯೇಶ್, ಶಶಿಕಲಾ, ವೆಂಕಟೇಶ್ವರಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top