ಮಂಗಳೂರು: ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ತನ್ನ ಹೊಸ ಶಾಖೆಯನ್ನು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾಗಿರಿ ಕ್ಯಾಂಪಸ್‍ನ ಪ್ರವೇಶದ್ವಾರದಲ್ಲಿ ಆರಂಭಿಸಿದೆ.
ಮೂಡುಬಿದಿರೆ ಶಾಸಕ ಉಮಾನಾಥ ಎ. ಕೋಟ್ಯಾನ್, ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್‍ನ ಎಂ.ಡಿ. ಹಾಗೂ ಸಿಇಒ ಅಜಯ್ ಕನ್ವಲ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಮೋಹನ ಆಳ್ವ, ಟ್ರಸ್ಟಿ ಡಾ. ವಿನಯ್ ಆಳ್ವ ಮತ್ತು ಕೆ. ಶ್ರೀಪತಿ ಭಟ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಶಾಖೆಯ ಉದ್ಘಾಟನೆಯೊಂದಿಗೆ ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಕರ್ನಾಟಕದಲ್ಲಿ ಒಟ್ಟು 64 ಶಾಖೆಗಳೊಂದಿಗೆ ತನ್ನ ಹೆಜ್ಜೆಗುರುತುಗಳನ್ನು ಇನ್ನಷ್ಟು ಗಾಢವಾಗಿಸಿದೆ. ಬ್ಯಾಂಕ್ ಈಗ ಭಾರತದಾದ್ಯಂತ ಒಟ್ಟು 815 ಶಾಖೆಗಳನ್ನು ಹೊಂದಿದಂತೆ ಆಗಿದೆ.
ಉಳಿತಾಯ ಖಾತೆ, ಚಾಲ್ತಿ ಖಾತೆ, ನಿಶ್ಚಿತ ಠೇವಣಿ, ಉದ್ಯಮ ಸಾಲ, ಚಿನ್ನದ ಸಾಲ ಮತ್ತು ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ಸೇರಿದಂತೆ ಬ್ಯಾಂಕಿಂಗ್ ಕ್ಷೇತ್ರದ ಹಲವು ಬಗೆಯ ಸೇವೆಗಳೊಂದಿಗೆ ವ್ಯಕ್ತಿಗಳ, ವಿದ್ಯಾರ್ಥಿಗಳ, ಸಣ್ಣ ಉದ್ದಿಮೆಗಳ ಮತ್ತು ಸ್ಥಳೀಯ ಉದ್ಯಮಿಗಳ ಕೈ ಬಲಪಡಿಸುವ ಉದ್ದೇಶವನ್ನು ಬ್ಯಾಂಕ್ ಹೊಂದಿದೆ.
ಕಂಪನಿಯು ಬಹಳ ವೈವಿಧ್ಯಮಯವಾದ ಗ್ರಾಹಕ ಸಮುದಾಯಕ್ಕೆ ವಿವಿಧ ಬಗೆಯ ಸಾಲಗಳನ್ನು ದೇಶದಾದ್ಯಂತ ವಿತರಣೆ ಮಾಡಿದೆ. ಬ್ಯಾಂಕ್‍ನ ಬಹಳಷ್ಟು ಶಾಖೆಗಳು ಬ್ಯಾಂಕಿಂಗ್ ಸೇವೆಗಳು ಹೆಚ್ಚು ಲಭ್ಯವಿಲ್ಲದ ಗ್ರಾಮೀಣ ಪ್ರದೇಶಗಳಲ್ಲಿ ಇವೆ. ಇದು ಹಣಕಾಸಿನ ಒಳಗೊಳ್ಳುವಿಕೆಗೆ ಒತ್ತಾಸೆಯಾಗಿ ನಿಲ್ಲುವ, ಸಮುದಾಯಗಳ ಅಭಿವೃದ್ಧಿಗೆ ನೆರವಾಗುವ ಬ್ಯಾಂಕ್‍ನ ಉದ್ದೇಶವನ್ನು ಹೇಳುತ್ತಿದೆ ಎಂದು ಪ್ರಕಟಣೆ ಹೇಳಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ




