ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯ ಮತ್ತು ಶ್ರೀನಿವಾಸ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ (SIMS&RC) ಸಂಯುಕ್ತವಾಗಿ ಆಯೋಜಿಸಿದ್ದ SIMSIC 2K25 – ‘ಇನ್ನೋವೇಷನ್ ಫ್ರಂ ಮಾಲಿಕ್ಯುಲ್ ಟು ಮೆಡಿಸಿನ್’ ಎಂಬ ಜಾಗತಿಕ ಜೈವಿಕ–ವೈದ್ಯಕೀಯ ಸಂಶ್ಲೇಷಣಾ ಅಂತರ ರಾಷ್ಟ್ರೀಯ ಸಮ್ಮೇಳನವನ್ನು ನೂತನ ಪಾಂಡೇಶ್ವರ ಕ್ಯಾಂಪಸ್‌ನಲ್ಲಿ ಮಂಗಳವಾರ (ಡಿ.9) ಉದ್ಘಾಟಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀನಿವಾಸ ವಿಶ್ವವಿದ್ಯಾಲಯದ ಮಾನ್ಯ ಕುಲಾಧಿಪತಿ ಹಾಗೂ ಎ.ಶಾಮರಾವ್ ಫೌಂಡೇಶನ್ ಅಧ್ಯಕ್ಷ ಡಾ. ಸಿಎ. ಎ. ರಾಘವೇಂದ್ರ ರಾವ್ ಮಾತನಾಡಿ, ಜ್ಞಾನವನ್ನು ಹಂಚಿಕೊಳ್ಳುವ ಜ್ಞಾನಿಗಳ ಇಚ್ಛೆಯನ್ನು ಅಭಿನಂದಿಸಿದರು. ಶ್ರೀನಿವಾಸ ವಿವಿ ಗೆ ಬಂದು ನಮ್ಮ ವಿದ್ಯಾರ್ಥಿಗಳನ್ನು ಅವರ ಒಳನೋಟಗಳಿಂದ ಶ್ರೀಮಂತಗೊಳಿಸಿದಕ್ಕಾಗಿ ವಿಶ್ವದ ನಾಯಕರಿಗೆ ಧನ್ಯವಾದ ಎಂದರು.
ಮುಖ್ಯ ಅತಿಥಿ ಶ್ರೀನಿವಾಸ ವಿಶ್ವವಿದ್ಯಾಲಯದ ಮಾನ್ಯ ಸಹ ಕುಲಾಧಿಪತಿ ಹಾಗೂ ಎ.ಶಾಮರಾವ್ ಫೌಂಡೇಶನ್ ಉಪಾಧ್ಯಕ್ಷ ಡಾ. ಎ. ಶ್ರೀನಿವಾಸ ರಾವ್ ಮಾತನಾಡಿ, ವಿಶ್ವವಿದ್ಯಾಲಯದಲ್ಲಿ ಇದೇ ಮೊದಲ ಬಾರಿಗೆ ಜೈವಿಕ–ವೈದ್ಯಕೀಯ ಅಂತರರಾಷ್ಟ್ರೀಯ ಸಮ್ಮೇಳನ ಆಯೋಜಿಸಿದಕ್ಕಾಗಿ ಸಂಘಟಕರನ್ನು ಅಭಿನಂದಿಸಿದರು. ಮಾನವ ದೇಹದಲ್ಲಿ ಯಾವುದೇ ತೊಂದರೆ ಉಂಟಾದಾಗ ರಕ್ತ ಸಂಚಾರದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅದನ್ನು ಚಿಕಿತ್ಸೆಗೊಳಿಸಲು ಜೈವರಸಾಯನಶಾಸ್ತ್ರ ಮತ್ತು ಅನಾಟಮಿ ಅಗತ್ಯವಿದೆ ಎಂದು ವಿವರಿಸಿದರು. ಸಂಶೋಧನೆಯ ಮೂಲಕವೇ ಹೊಸ ತಾಂತ್ರಿಕ ಅಭಿವೃದ್ಧಿಗಳು ಸಾಧ್ಯವಾಗುತ್ತವೆ ಮತ್ತು ನ್ಯಾನೋ ಟೆಕ್ನಾಲಜಿ ಸೇರಿದಂತೆ ಅನೇಕ ಕನಸುಗಳು ಶೀಘ್ರದಲ್ಲೇ ನಿಜವಾಗುತ್ತವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಜನಸಾಮಾನ್ಯರ ಹಿತಕ್ಕಾಗಿ ಜೈವರಸಾಯನ ಸಂಶೋಧನೆಗೆ ವಿಶ್ವವಿದ್ಯಾಲಯ ಸದಾ ಬೆಂಬಲ ನೀಡುವುದಾಗಿ ಹೇಳಿದರು.
ಮುಖ್ಯ ಅತಿಥಿ ಪ್ರೊ. ರಾಣಾ ಪ್ರತಾಪ್ ಸಿಂಗ್, ಗೌರವಾನ್ವಿತ ಕುಲಪತಿ, ಗೌತಮ್ ಬುದ್ಧ ವಿಶ್ವವಿದ್ಯಾಲಯ, ವಿದ್ಯಾರ್ಥಿಗಳು ಮತ್ತು ಸಂಶೋಧಕರು ತಮ್ಮ ಸುತ್ತಮುತ್ತ ನಡೆಯುವ ಘಟನೆಗಳನ್ನು ಗಮನಿಸಿ, ಆಯ್ದ ವಿಷಯದಲ್ಲಿ ಆಲೋಚನೆ ಮತ್ತು ಕೊಡುಗೆ ನೀಡುವಂತೆ ಪ್ರೇರೇಪಿಸಿದರು. ವಿಷಯದ ಮೇಲೆ ಆಸಕ್ತಿ ಹೊಂದಿ, ಅದಕ್ಕೆ ಅರ್ಥಪೂರ್ಣವಾಗಿ ಅರ್ಪಿಸುವುದು ಅಗತ್ಯವೆಂದು ಹೇಳಿದರು.
ಅತಿಥಿ ಡಾ. ರಾವೋ ವಿ.ಎಲ್. ಪಪಿನೇನಿ, PH.D., ಫೌಂಡರ್-ಪ್ರೆಸಿಡೆಂಟ್, BBC CURE ಮತ್ತು ಯುನಿವರ್ಸಿಟಿ ಆಫ್ ಕ್ಯಾನ್ಸಸ್ ಮೆಡಿಕಲ್ ಸೆಂಟರ್ (USA) ಅವರು ಮಾತನಾಡಿ, ಜ್ಞಾನಸಂಪನ್ನರೊಂದಿಗೆ ಸಂವಹನವು ಹೊಸದಾದ ಅರಿವನ್ನು ಕೊಡುತ್ತದೆ ಎಂದು ಹೇಳಿದರು. ಇಂತಹ ವೇದಿಕೆಗಳು ಜ್ಞಾನ ಹಂಚಿಕೊಳ್ಳಲು ಅತ್ಯುತ್ತಮ ಅವಕಾಶ ಒದಗಿಸುತ್ತವೆ ಎಂದು ಸಂತೋಷ ವ್ಯಕ್ತಪಡಿಸಿದರು.
ಶ್ರೀನಿವಾಸ ವಿವಿ ಬೋರ್ಡ್ ಆಫ್ ಗವರ್ನರ್ಸ್ ಸದಸ್ಯೆ ಶ್ರೀಮತಿ ಎ. ವಿಜಯಲಕ್ಷ್ಮೀ ಆರ್, ರಾವ್, ಅಮೇರಿಕಾದ ಡಾ. ಮಧುಕರ್ ಠಾಕೂರ್, PH.D., ಥಾಮಸ್ ಜೆಫರ್ಸನ್ ಯುನಿವರ್ಸಿಟಿ, ಡಾ. ಅನಿಲ್ ಕುಮಾರ್, ರಿಜಿಸ್ಟ್ರಾರ್ ಶ್ರೀನಿವಾಸ ವಿವಿ, ಡಾ. ಅಜಯ್ ಕುಮಾರ್, ಅಭಿವೃದ್ಧಿ ರಿಜಿಸ್ಟ್ರಾರ್ ಶ್ರೀನಿವಾಸ ವಿವಿ, ಡಾ. ಎಡ್ವಿನ್ ಡಯಸ್, ಪ್ರೊಫೆಸರ್ ಹಾಗೂ ಬಾಲರೋಗ ವಿಭಾಗದ ಮುಖ್ಯಸ್ಥರು, ಡಾ. ವೃಂದಾ ಜೆ. ಭಟ್, ಪ್ರೊಫೆಸರ್ ಮತ್ತು ಫಾರೆನ್ಸಿಕ್ ಮೆಡಿಸಿನ್ ವಿಭಾಗದ ಮುಖ್ಯಸ್ಥರು, ಡಾ. ಪ್ರವೀಣ್ ಬಿ.ಎಂ. ನಿರ್ದೇಶಕರು (ಸಂಶೋಧನೆ ಮತ್ತು ಇನೋವೇಶನ್), ಡಾ. ನವೀನ್ ಎನ್. ಬಪ್ಪಲಗೀ, IPR ಸಂಯೋಜಕರು, ಡಾ. ಜಯಶ್ರೀ ಬೋಳಾರ್, IQAC ನಿರ್ದೇಶಕಿ ಉಪಸ್ಥಿತರಿದ್ದರು.
ಸಮಾರಂಭಕ್ಕೆ ಡಾ. ಉದಯ್ ಕುಮಾರ ರಾವ್, ಡೀನ್, SIMS&RC ಸ್ವಾಗತಿಸಿದರು. ಡಾ. ಸುಚೇತಾ ಕುಮಾರಿ ಎನ್., ನಿರ್ದೇಶಕಿ (ಸಂಶೋಧನೆ ಮತ್ತು ಅಭಿವೃದ್ಧಿ) ಪರಿಚಯ ಭಾಷಣ ನೀಡಿದರು. ಡಾ. ಡೇವಿಡ್ ರೋಸಾರಿಯೋ, ಮೆಡಿಕಲ್ ಸುಪರಿಟೆಂಡೆಂಟ್ ಶ್ರೀನಿವಾಸ ಆಸ್ಪತ್ರೆ ಮುಕ್ಕ ಧನ್ಯವಾದ ಸಲ್ಲಿಸಿದರು. ಡಾ. ಸ್ವಾತಿ ಡಿ. ಹಾಗೂ ನಿಶಾ ಕೆ.ಆರ್. ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


