ಶ್ರಮ ಮತ್ತು ಶ್ರದ್ದೆ ಇದ್ದರೆ ಅದೃಷ್ಟ: ಶ್ರೀನಿವಾಸ ಕುಳಾಯಿ

Upayuktha
0


ಸುರತ್ಕಲ್‌: ಹಿಂದು ವಿದ್ಯಾದಾಯಿನೀ ಸಂಘದ ಆಡಳಿತಕ್ಕೆ ಒಳಪಟ್ಟ ಅನುದಾನಿತ ಶ್ರೀ ವೆಂಕಟ್ರಮಣ ಹಿರಿಯ ಪ್ರಾಥಮಿಕ ಶಾಲೆ ಮೈರ್ಪಾಡಿ ಕುಳಾಯಿ ಇಲ್ಲಿ ವಾರ್ಷಿಕೋತ್ಸವ ಸಂಭ್ರಮದಿಂದ ಜರುಗಿತು. ಬೆಳಗ್ಗಿನ ಆಟೋಟ ಬಹುಮಾನ ವಿತರಣೆ ಸಮಾರಂಭದ ಅಧ್ಯಕ್ಷತೆಯನ್ನು ಉದ್ಯಮಿ, ಸಮಾಜ ಸೇವಕ ಭಾಸ್ಕರ್ ರಾವ್ (ರಾವ್ ಬ್ರದರ್ಸ್ ಬಾಳ, ಕಾನ) ವಹಿಸಿದ್ದರು.


ಕಾರ್ಯಕ್ರಮದಲ್ಲಿ ಶಿಕ್ಷಕ -ರಕ್ಷಕ ಸಂಘದ ಅಧ್ಯಕ್ಷ ಮಂಜುನಾಥ, ಶಾಲಾ ಸಂಚಾಲಕಿ ಕೆ. ಕಲಾವತಿ, ಮುಖ್ಯ ಶಿಕ್ಷಕರಾದ ಗೋಪಾಲ್.ವಿ ಉಪಸ್ಥಿತರಿದ್ದರು. ಸಾಯಂಕಾಲದ ಕಾರ್ಯಕ್ರಮ ದಲ್ಲಿ ಹಿಂದು ವಿದ್ಯಾದಾಯಿನೀ ಸಂಘದ ಗೌರವಾನ್ವಿತ ಅಧ್ಯಕ್ಷ ಜಯಚಂದ್ರ ಹತ್ವಾರ್ ರವರು ಅಧ್ಯಕ್ಷತೆ ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ಶ್ರೀಮತಿ ಡಾ.ರೇಷ್ಮ ಕೆ.ರಾವ್, ಗೀತಾ ಕೃಷ್ಣ ಕ್ಲಿನಿಕ್, ಕೃಷ್ಣಾಪುರ, ವೆಂಕಟ್ರಮಣ ಶಾಲೆ ಕುಳಾಯಿಯ ರಕ್ಷಕ-ಶಿಕ್ಷಕ ಸಂಘದ ಮಾಜಿ ಅಧ್ಯಕ್ಷರು ಶ್ರೀನಿವಾಸ್ ಕುಳಾಯಿ, ಸಂಚಾಲಕಿ ಶ್ರೀಮತಿ ಕೆ.ಕಲಾವತಿ, ಮುಖ್ಯೋಪಾಧ್ಯಾಯ ಗೋಪಾಲ್.ವಿ. ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶ್ರೀ ವೆಂಕಟ್ರಮಣ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ಹಿರಿಯರ ಶ್ರಮ ಮತ್ತು ಶಿಕ್ಷಕರ ಶ್ರದ್ದೆಯು ಶ್ಲಾಘನೀಯ ಹಾಗೂ ಆಡಳಿತ ಮಂಡಳಿ, ಪೋಷಕರು, ಶಿಕ್ಷಕರು, ಮಕ್ಕಳು ಮುಖ್ಯ ಆಧಾರ ಸ್ಥಂಭಗಳು ಇಂತಹ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಪಡೆದ ಮಕ್ಕಳು ಅದೃಷ್ಟವಂತರು ಎಂದು ಶ್ರೀನಿವಾಸ ಕುಳಾಯಿ ರವರು ತಮ್ಮ ಭಾಷಣದಲ್ಲಿ ತಿಳಿಸಿದ್ದರು. ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಸಂಚಾಲಕರಾದ ಶ್ರೀಮತಿ ಕೆ. ಕಲಾವತಿ ಸ್ವಾಗತಿಸಿದರು, ಮುಖ್ಯ ಶಿಕ್ಷಕ ಗೋಪಾಲ್.ವಿ.ವರದಿ ವಾಚಿಸಿದರು. ಸಹಶಿಕ್ಷಕರಾದ ಭಾಸ್ಕರ್ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕರಾದ ಮಲಕಪ್ಪ ಹನುಮಪ್ಪ ರವರು ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top