ನೆಲ್ಲಿಕಟ್ಟೆ ಅಂಬಿಕಾದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮ

Chandrashekhara Kulamarva
0


ಪುತ್ತೂರು: ನಾವು ಯಾರೂ ದುರ್ಬಲರಲ್ಲ. ಯಾರು ತಮ್ಮಿಂದ ಸಾಧ್ಯ ಎಂಬ ಭಾವನೆಯಿಂದ ಶ್ರಮ ವಹಿಸುತ್ತಾರೋ ಅವರಿಗೆ ಸಾಧನೆ ಮಾಡಲು ಸಾಧ್ಯ. ನಾಳೆಗೆಂದು ಯಾವುದನ್ನೂ ಮುಂದೂಡದೆ ಕಷ್ಟದ ವಿಷಯಗಳನ್ನು ಮೊದಲು ಕಲಿಯಬೇಕು ಎಂದು ಉಡುಪಿಯ ಶಿಫಿನ್ಸ್ ಗ್ರೂಪ್‍ನ ನಿರ್ದೇಶಕ ಮನೋಜ್ ಕಡಬ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಓರಿಯೆಂಟೇಶನ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪರೀಕ್ಷಾ ಭಯವನ್ನು ನಿವಾರಿಸುವ ಹಾಗೂ ಪರೀಕ್ಷೆಗಾಗಿ ಉತ್ತಮ ಸಿದ್ಧತೆಗಳನ್ನು ಮಾಡಿಕೊಳ್ಳುವ ಬಗೆಗೆ ಮಾರ್ಗದರ್ಶನ ನೀಡಿದರು. 


ವಿದ್ಯಾರ್ಥಿಗಳು ಭವಿಷ್ಯದ ಹಿತಕ್ಕೋಸ್ಕರ ಮೊಬೈಲ್‍ನಿಂದ ದೂರ ಇರಬೇಕು. ಒಮ್ಮೆ ಕಷ್ಟಪಟ್ಟು ಸಮಯ ಹೊಂದಾಣಿಕೆ ಮಾಡಿಕೊಂಡು ಕಲಿಕೆಯಲ್ಲಿ ಹಿಡಿತ ಸಾಧಿಸಿದರೆ ಮತ್ತೆ ಗಣಿತವೂ ಸುಲಭವಾಗುತ್ತದೆ. ಪರೀಕ್ಷೆ ಬರೆಯುವ ಕೊನೆ ಕ್ಷಣದಲ್ಲಿ ಅಭ್ಯಾಸ ಮಾಡುವುದರ ಬದಲಿಗೆ ಸಾಕಷ್ಟು ಮುಂಚಿತವಾಗಿ ತಯಾರಾಗುವುದು ಅಗತ್ಯ. ಹಿತ ಶತ್ರುಗಳ ಬಗ್ಗೆ ಜಾಗರೂಕರಾಗಿರಬೇಕು, ಆಮಿಷಗಳಿಗೆ ಬಲಿಯಾಗಬಾರದು. ಅಂತೆಯೇ ಪರೀಕ್ಷೆಗಳು ಮುಗಿಯುವವರೆಗೆ ಹೊರಗಿನ ತಿಂಡಿಗಳಿಗೆ ಮರುಳಾಗದಿರುವುದು ಉತ್ತಮವೆಂದು ಅಭಿಪ್ರಾಯಪಟ್ಟರು.


ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ, ಶಿಫಿನ್ಸ್ ಗ್ರೂಪ್‍ನ  ಸಹ ಸಂಸ್ಥಾಪಕಿ ಶೆರ್ಲಿ ಮನೋಜ್ ಮತ್ತು ಸಹಾಯಕಿ ವಂದಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಸಾಯನಶಾಸ್ತ್ರ ಉಪನ್ಯಾಸಕಿ ಅಶ್ವಿನಿ ಯು ನಾಯಕ್ ಕಾರ್ಯಕ್ರಮ ನಿರೂಪಿಸಿದರು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top