ಗೋವಾ: ರೇವಣದ ಶ್ರೀ ವಿಮಲೇಶ್ವರ ದೇವಸ್ಥಾನದ ಅಭಿವೃದ್ಧಿ ಸಮಿತಿ ಸಭೆ

Upayuktha
0


ದಾವಣಗೆರೆ: ಒಳ್ಳೆಯ ದೃಷ್ಟಿ, ಒಳ್ಳೆಯ ಮನಸ್ಸು, ಒಳ್ಳೆಯ ದಾರಿ, ಒಳ್ಳೆಯ ಹೃದಯ ಇದ್ದರೆ ದೇವರು ಒಳ್ಳೆಯದನ್ನು ಮಾಡೇ ಮಾಡುತ್ತಾನೆ. ನಮ್ಮ ನಿಮ್ಮೆಲ್ಲರ ಕುಲ ದೇವರಾದ ಗೋವಾದ ಶ್ರೀ ವಿಮಲೇಶ್ವರ ದೇವಸ್ಥಾನದ ಶ್ರೇಯೋಭಿವೃದ್ಧಿಗೆ ನಿಮ್ಮೆಲ್ಲರ ಸಹಕಾರ ಸಹಯೋಗ ಬೇಕಾಗುತ್ತದೆ. ಈಗಾಗಲೇ ಶ್ರೀ ದೇವರ ಚಿನ್ನದ ಮುಖವಾಡಕ್ಕೆ ನೀವೆಲ್ಲರೂ ಕೈಜೋಡಿಸಿದ್ದಿರಿ. ನಿಮ್ಮೆಲ್ಲರಿಗೂ ಹೃದಯ ಪೂರ್ವಕ ಕೃತಜ್ಞತೆಗಳು ಎಂದು ದಾವಣಗೆರೆಯ ನಲ್ಲೂರು ಅರುಣಾಚಲ ಎನ್. ರೇವಣಕರ್ ಸಮಾರಂಭವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.


ಗೋವಾದ ರೇವಣದ ಶ್ರೀ ವಿಮಲೇಶ್ವರ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಸರ್ವ ಸದಸ್ಯರ ಮಹಾಸಭೆ ಇತ್ತೀಚೆಗೆ  ದಾವಣಗೆರೆಯ ಶ್ರೀಮತಿ ಗೌರಮ್ಮ ನರಹರಿ ಶೇಟ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಡಾ. ಅರುಣಾಚಲ ರೇವಣಕರ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಗೋವಾದ ರೇವಣದ ಶ್ರೀ ವಿಮಲೇಶ್ವರ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಮನಾಥ್ ಪ್ರಭು ದೇಸಾಯಿ ಮಾತನಾಡಿ, ಕೇವಲ ಹೊಟ್ಟೆಪಾಡು ದುಡಿಮೆ ತಪ್ಪಲ್ಲ. ಜೊತೆಗೆ ದೇವರ ಸೇವೆಯೇ ದೇವರ ಪೂಜೆ ಎಂದರು.


ವೇದಿಕೆಯಲ್ಲಿ ಗೋವಾದ ದಿಗಂಬರ ಪ್ರಭು ದೇಸಾಯಿ ಮೈಸೂರಿನ ಮೀರಾಬಾಯಿ ನಾಗೇಶ್ ರೇವಣಕರ್, ಗದಗದ ಸುರೇಶ್ ಜಿ. ರೇವಣಕರ್, ಹರಿಹರದ ನಲ್ಲೂರು ಬಿ.ಎನ್. ನಾಗರಾಜ್, ದಾವಣಗೆರೆಯ ಶ್ರೀಧರ ಜಿ.ರೇವಣಕರ್, ಬೆಳಗಾವಿಯ ದೀನನಾಥ್ ಪುರುಷೋತ್ತಮ ರೇವಣಕರ್, ಬೆಂಗಳೂರಿನ ಬಿ.ವಿ.ಗಣಪತಿ ರೇವಣಕರ್, ದಾವಣಗೆರೆ ರೇವಣಕರ್ ಪರಿವಾರದ ನೂತನ ಅಧ್ಯಕ್ಷ ಮಂಜುನಾಥ್ ರೇವಣಕರ್ ಮುಂತಾದವರು ಉಪಸ್ಥಿತರಿದ್ದರು. ಅಧ್ಯಾತ್ಮಿಕ ಪರಂಪರೆಯ ಇತಿಹಾಸ ವಿವರಿಸಿ ಮಾತನಾಡಿದರು. ಇತೀಚಿಗೆ ಸ್ವರ್ಗಸ್ಥರಾದ ಅನೇಕ ಹಿರಿಯರಿಗೆ ಒಂದು ನಿಮಿಷ ಮೌನಾಚರಣೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಿದರು.


ಗೋವಾದ ರೇವಣದ ಶ್ರೀ ವಿಮಲೇಶ್ವರ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಕರ್ನಾಟಕದ ವಿವಿಧ ಜಿಲ್ಲೆಗಳ ಉಪಾಧ್ಯಕ್ಷರುಗಳು ಉಪಸ್ಥಿತರಿದ್ದರು. ಸುಪ್ರಿತಾ ಕಾರ್ತಿಕ್ ರೇವಣಕರ್‍ರವರ ಪ್ರಾರ್ಥನೆಯೊಂದಿಗೆ ಈ ವಿಜೃಂಭಣೆಯ ಅರ್ಥಪೂರ್ಣ ಸಮಾರಂಭಕ್ಕೆ   ನಲ್ಲೂರು ಲಕ್ಷ್ಮಣ್‍ರಾವ್ ಸ್ವಾಗತಿಸಿದರು. ದೇವಿದಾಸ್ ಕೆಕ್ಕಾರ ಪ್ರಾಸ್ತಾವನೆಯೊಂದಿಗೆ ಮಾತನಾಡಿ, ದೇವಸ್ಥಾನದ ಪರಂಪರೆಯನ್ನು ತಿಳಿಸಿದರು. ಅಚ್ಚುಕಟ್ಟಾಗಿ ನಿರೂಪಿಸಿದ ಸಾಲಿಗ್ರಾಮ ಗಣೇಶ್ ಶೆಣೈಯವರು ಸಮಾರಂಭದ ಮೊದಲು ರಾಮಾಯಣ, ಮಹಾಭಾರತದ ಬಗ್ಗೆ ಅರಿವು ಮೂಡಿಸಿ ರಸರಂಜನೆಯೊಂದಿಗೆ ಪ್ರಶ್ನೋತ್ತರ ನಡೆಸಿದರು. ಕೊನೆಯಲ್ಲಿ ರಾಘವೇಂದ್ರ ಶಾಂತರಾಮ ರೇವಣಕರ್ ವಂದಿಸಿದರು. ಶ್ರೀ ವಿಮಲೇಶ್ವರ ದೇವಸ್ಥಾನದ ಸಮಿತಿಯ ಕರ್ನಾಟಕದ ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳ ಉಪಾಧ್ಯಕ್ಷರಿಗೆ ಸನ್ಮಾನಿಸಿ ಗೌರವಿಸಲಾಯಿತು.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top