ರಾಮಾಯಣದ ಹೃದಯಭಾಗವೆನಿಸಿರುವ ಸುಂದರಕಾಂಡ ಕೇವಲ ಒಂದು ಪಾರಾಯಣ ಕಾಂಡವಲ್ಲ, ಅದು ಭಕ್ತಿ, ಬುದ್ಧಿ ಮತ್ತು ಬದುಕಿನ ಸಂವೇದನೆಯನ್ನು ಒಟ್ಟಿಗೆ ಹೊತ್ತಿರುವ ದಾರಿದೀಪ. ಈ ದಾರಿದೀಪದ ತತ್ತ್ವವನ್ನು ಸಾಹಿತ್ಯದ ಸರಳತೆ ಮತ್ತು ಚಿಂತನೆಯ ಆಳದೊಂದಿಗೆ ಅನಾವರಣಗೊಳಿಸಿದ ಐದು ದಿನಗಳ ಪ್ರವಚನ ಮಾಲಿಕೆ, ಕನ್ನಡದ ಹಿರಿಯ ಚಿಂತಕ ಡಾ.ಗುರುರಾಜ ಕರಜಗಿ ಅವರ ವಾಚನದಲ್ಲಿ, ಜಯರಾಮ ಸೇವಾ ಮಂಡಳಿಯಲ್ಲಿ ಶ್ರದ್ಧಾಭಕ್ತಿಯಿಂದ ಸಂಪನ್ನವಾಯಿತು.
ಬೆಂಗಳೂರು: ಜಯನಗರ 8ನೇ ಬಡಾವಣೆಯಲ್ಲಿರುವ ಜಯರಾಮ ಸೇವಾ ಮಂಡಳಿಯಲ್ಲಿ ರಾಮಾಯಣದ ಸರ್ವಾದರಣೀಯ ಪಾರಾಯಣ ಕಾಂಡವಾದ ಸುಂದರಕಾಂಡ ಕುರಿತು ಐದು ದಿನಗಳ ಪ್ರವಚನ ಮಾಲಿಕೆಯನ್ನು ಆಯೋಜಿಸಲಾಗಿತ್ತು. ಕನ್ನಡ ನಾಡಿನ ಖ್ಯಾತ ಸಾಹಿತ್ಯ ಚಿಂತಕ ಹಾಗೂ ಶಿಕ್ಷಣ ತಜ್ಞರಾದ ಡಾ. ಗುರುರಾಜ ಕರಜಗಿ ಅವರು ಈ ಉಪನ್ಯಾಸ ಸರಣಿಯನ್ನು ನಡೆಸಿಕೊಟ್ಟರು.
ಸಾಂಸ್ಕೃತಿಕ-ಧಾರ್ಮಿಕ-ಸಾಮಾಜಿಕ ಚಟುವಟಿಕೆಗಳ ಮೂಲಕ ನಗರದೊಳಗೆ ತನ್ನದೇ ಆದ ಅಸ್ಮಿತೆಯನ್ನು ಗಳಿಸಿಕೊಂಡಿರುವ ಜಯರಾಮ ಸೇವಾ ಮಂಡಳಿ, ಆರು ದಶಕಗಳ ಸಮಾಜಮುಖಿ ಸೇವೆಯೊಂದಿಗೆ ದೃಢವಾದ ನೆಲೆಗಟ್ಟನ್ನು ನಿರ್ಮಿಸಿಕೊಂಡಿದೆ. ವಜ್ರಮಹೋತ್ಸವದ ದಿಕ್ಕಿನಲ್ಲಿ ಸಾಗುತ್ತಿರುವ ಈ ಸಂದರ್ಭದಲ್ಲಿ ಮೌಲಿಕ ಹಾಗೂ ರಚನಾತ್ಮಕ ಚಿಂತನೆಗೆ ವೇದಿಕೆಯಾಗುವ ಉದ್ದೇಶದಿಂದ ಈ ಪ್ರವಚನ ಮಾಲಿಕೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಂಡಳಿಯ ಪದಾಧಿಕಾರಿಗಳು ತಿಳಿಸಿದರು.
ಈ ಪ್ರವಚನ ಮಾಲಿಕೆಯ ವಿಷಯವನ್ನು ಮುಂದಿನ ದಿನಗಳಲ್ಲಿ ಮುದ್ರಣ ರೂಪದಲ್ಲಿಯೂ ಪ್ರಕಟಿಸುವ ಯೋಜನೆ ಇದೆ. ಕಾರ್ಯಕ್ರಮದಲ್ಲಿ ಅಧ್ಯಾತ್ಮ ಚಿಂತಕಿ ಶ್ರೀಮತಿ ವೀಣಾ ನಿತ್ಯಾನಂದ, ದೇವಾಲಯದ ಅಧ್ಯಕ್ಷ ಎಸ್.ಕೆ. ಗೋಪಾಲಕೃಷ್ಣ, ಕಾರ್ಯದರ್ಶಿ ಡಾ.ಎಚ್. ಸುಂದರಮೂರ್ತಿ, ನಿಕಟಪೂರ್ವ ಅಧ್ಯಕ್ಷ ಆರ್.ಎನ್. ಸ್ವಾಮಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಪಿ. ರಘೋತ್ತಮ ರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


