ಡಿ. 31 ರಂದು ವಿವೇಕಾನಂದ ಕಾಲೇಜಿನಲ್ಲಿ ಜಿಲ್ಲಾಮಟ್ಟದ ಜೂನಿಯರ್ ಚೆಸ್ ಟೂರ್ನಮೆಂಟ್

Upayuktha
0


ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ (ಸ್ವಾಯತ್ತ) ಕಾಲೇಜು, ಪುತ್ತೂರು ಮತ್ತು ಬಾಬಿ ಫಿಷರ್ಸ್ ಚೆಸ್ ಅಸೋಸಿಯೇಷನ್, ಸುಳ್ಯ, ಕಲ್ಮಡ್ಕ, ಇವರ ಸಂಯುಕ್ತ ಆಶ್ರಯದಲ್ಲಿ ಎರಡನೇ ಜಿಲ್ಲಾ ಮಟ್ಟದ ವಿವೇಕಾನಂದ ಜೂನಿಯರ್ ಚೆಸ್ ಟೂರ್ನಮೆಂಟ್ ದಿನಾಂಕ 31ನೇ ಡಿಸೆಂಬರ್ 2025 ರಂದು ನಡೆಯಲಿದೆ.


ಸ್ಪರ್ಧೆಯು ಮೂರು ವಿಭಾಗಗಳಲ್ಲಿ ನಡೆಯಲಿದೆ. 1 ರಿಂದ 4 ನೇ ತರಗತಿ (ಕಿರಿಯ ಪ್ರಾಥಮಿಕ ವಿಭಾಗ), 5 ರಿಂದ 8ನೇ ತರಗತಿ (ಹಿರಿಯ ಪ್ರಾಥಮಿಕ ವಿಭಾಗ) ಮತ್ತು 9 ರಿಂದ 12ನೇ ತರಗತಿ (ಹೈಸ್ಕೂಲ್ ಮತ್ತು ಪದವಿ ಪೂರ್ವ ವಿಭಾಗ). ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರಿಗೆ ನಗದು ಬಹುಮಾನ ಮತ್ತು ಟ್ರೋಫಿಯನ್ನು ನೀಡಲಾಗುವುದು. ಅಲ್ಲದೆ ನಾಲ್ಕರಿಂದ ಹತ್ತನೇ ಸ್ಥಾನ ಪಡೆದವರಿಗೆ ಪಡೆದವರಿಗೆ ಟ್ರೋಫಿಯನ್ನು ನೀಡಲಾಗುವುದು. ಎಲ್ಲಾ ಸ್ಪರ್ಧಿಗಳಿಗೆ ಭಾಗವಹಿಸಿದ ಪ್ರಮಾಣ ಪತ್ರ ನೀಡಲಾಗುವುದು.


ಸ್ಪರ್ಧೆಯು ಸ್ವಿಸ್ ರಾಪಿಡ್ ಮಾದರಿಯಲ್ಲಿ ನಡೆಯಲಿದೆ. ಪ್ರವೇಶ ಶುಲ್ಕವು ಪ್ರಾಥಮಿಕ ವಿಭಾಗದವರಿಗೆ ರೂ 200 ಮತ್ತು ಹೈಸ್ಕೂಲ್, ಪದವಿಪೂರ್ವ ವಿಭಾಗದವರಿಗೆ ರೂ 300 ಇರುತ್ತದೆ. ಭಾಗವಹಿಸುವಂತಹ ಸ್ಪರ್ಧಿಗಳು ಡಿಸೆಂಬರ್ 29 ನೇ ತಾರೀಖಿನ ಮೊದಲು ತಮ್ಮ ಹೆಸರನ್ನು ನೋಂದಾಯಿಸಬೇಕು ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ಇವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ರವಿಶಂಕರ್ ವಿ.ಎಸ್ (9480656799) ಇವರನ್ನು ಸಂಪರ್ಕಿಸಬಹುದು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top